Home ಕರಾವಳಿ Archive by category ಪುತ್ತೂರು (Page 59)

ಪುತ್ತೂರು : ಪ್ರಥಮ ಬಾರಿಗೆ ಪುತ್ತೂರ್ದ ಪಿಲಿ ರಂಗ್ ಹುಲಿವೇಷ ಸ್ಪರ್ಧೆ

ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರಾವಳಿಯ ಆಯ್ದ ತಂಡಗಳ ಹುಲಿವೇಷ ಸ್ಪರ್ಧೆ “ಪುತ್ತೂರ್ದ ಪಿಲಿ ರಂಗ್’ ಅಕ್ಟೋಬರ್ 1ರಂದು ಶನಿವಾರ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವರಾತ್ರಿ ಸಂದರ್ಭದಲ್ಲಿ ಯುವ ಜನತೆಯನ್ನು ಸಾಂಪ್ರದಾಯಿಕ

ಪುತ್ತೂರು: ಪಿಎಫ್ಐ ಮುಖಂಡ ಜಾಬೀರ್ ಅರಿಯಡ್ಕ ಪೊಲೀಸ್ ವಶಕ್ಕೆ

ಪುತ್ತೂರು: ಇಂದು ಮುಂಜಾನೆಯಿಂದಲೇ ರಾಜ್ಯದ ಹಲವೆಡೆ ಪೊಲೀಸರು ದಾಳಿ ನಡೆಸುತ್ತಿದ್ದು, ಪುತ್ತೂರು ಮೂಲದ ಪಿಎಫ್ಐ ಮುಖಂಡ ಜಾಬೀರ್ ಅರಿಯಡ್ಕ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಇಂದು ಮುಂಜಾನೆಯಿಂದಲೇ ಶಾಂತಿಭಂಗಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿ ಪಿಎಫ್ಐ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದು, ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು : ಜೋಸ್ ಅಲುಕ್ಕಾಸ್ ಚಿನ್ನಾಭರಣ ಸಂಸ್ಥೆ ನಾಲ್ಕನೇ ವರ್ಷದ ಸಂಭ್ರಮ

ಹೆಸರಾಂತ ಸ್ವರ್ಣಾಭರಣ ಸಂಸ್ಥೆಯಾದ ಜೋಸ್‍ಅಲುಕ್ಕಾಸ್‍ನ ಪುತ್ತೂರಿನ ಶಾಖೆಯು ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿದ್ದು ಇದರ ವಾರ್ಷಿಕೋತ್ಸವ ಸಂಭ್ರಮವನ್ನು ಮಳಿಗೆಯಲ್ಲಿ ಆಚರಿಸಿದರು. ಕಾರ್ಯಕ್ರಮವನ್ನು ಪುತ್ತೂರು ವಿಧಾನಾಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಖ್ಯಾತ ತುಳು ಚಿತ್ರದ ನಟಿ ರಂಗ ಕಲಾವಿದೆ ಎಕ್ಕ ಸಕ್ಕ ಮತ್ತು ರಾಜ್ ಸೌಂಡ್ಸ್ ಖ್ಯಾತಿಯ ಚೈತ್ರ ಶೆಟ್ಟಿ ಹಾಗೂ ಈ ವರ್ಷದ

ಬಸ್ ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆಯ ಬಂಧನ

ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸುಕನ್ಯಾ ಅವರ ರೂ. 8 ಸಾವಿರ ನಗದು ಹಣವಿದ್ದ ಪರ್ಸನ್ನು ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕೆಯೊಬ್ಬಳು ಕಳವು ಮಾಡಿದ ಘಟನೆ ಮಂಗಳವಾರ ನಡೆದಿದ್ದು, ಕಳವು ಮಾಡಿರುವ ತಮಿಳುನಾಡು ಮೂಲದ ಕಳ್ಳಿಯನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.ತಮಿಳುನಾಡು ರಾಜ್ಯದ ಸೇಲಂ ನಿವಾಸಿ ಸೆಲ್ವಂ ಎಂಬರ ಪತ್ನಿ ನಲ್ಲಮ್ಮ

ವಿಟ್ಲ :ಜಲ್ಲಿ ಸಾಗಾಟದ ಲಾರಿ ಪಲ್ಟಿ,ಇರ್ವರಿಗೆ ಗಾಯ

ವಿಟ್ಲ: ಜಲ್ಲಿ ಸಾಗಾಟ ಲಾರಿಯೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಿಂದಾಗಿ ಅಲ್ಪ ಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿದೆ. ಟಿಪ್ಪರ್ ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲೆಲ್ಲಾ ಜಲ್ಲಿಕಲ್ಲುಗಳು ಚೆಲ್ಲಿ ಹೋಗಿದ್ದು ಬಳಿಕ ಅದನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು. ಹೊಯ್ಸಳ

ಸುಳ್ಯ : ಸರ್ಕಾರಿ ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸುಳ್ಯ ತಾಲೂಕಿನ ಜಯನಗರ ಮಿಲಿಟರಿ ಜಾಗಕ್ಕೆ ಸಂಬಂಧಿಸಿದ ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಸ್ಥಳೀಯರೊಬ್ಬರು ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರವುದನ್ನು ಖಂಡಿಸಿ, ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.ನೀ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ

ಬಸ್‍ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆ : ವೀಡಿಯೋ ವೈರಲ್

ಪುತ್ತೂರು : ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಪುತ್ತೂರು ಠಾಣೆಗೆ ಸಿಸಿಟಿವಿ ದೃಶ್ಯ ಆಧರಿಸಿ ದೂರು ನೀಡಿದ್ದು, ಕಳ್ಳತನಗೈದ ಮಹಿಳೆಗಾಗಿ ಪೆÇಲೀಸರು ಹುಡುಕಾಟ ಪ್ರಾರಂಭಿಸಿದ್ದರೆ. ಆದರೆ ಹುಡುಕಾಟಕ್ಕೆ ಖಾಸಗಿ ಬಸ್ ಬಸ್ಸಿನೊಳಗೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವೇ ಪ್ರಮುಖ

ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಮುತಾಲಿಕ್

ದಿವಂಗತ ಪ್ರವೀಣ್ ನೆಟ್ಟಾರ್ ಮನೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರು ಪ್ರಮೋದ್ ಮುತಲಿಕ್ ಭೇಟಿ ನೀಡಿ, ಪ್ರವೀಣ್ ತಂದೆ ತಾಯಿ ಹಾಗೂ ಪ್ರವೀಣ್ ನೆಟ್ಟಾರ್ ಧರ್ಮಪತ್ನಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಕಟುವಾಗಿ ಟೀಕಿಸಿ ಪ್ರವೀಣ್ ಕೊಂದ ಹಂತಕರಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಸ್ವಾಗತಾರ್ಹ : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ

ಈಗಾಗಲೇ ಸರಕಾರ ಎಲ್ಲಾ ಜಿಲ್ಲೆಗಳಲ್ಲಿ ಮತಾಂತರ ನಿಷೇಧ ಜ್ಯಾರಿಗೆ ತರುತ್ತಿರುವುದು ಸ್ವಾಗತಾರ್ಹವಾಗಿದ್ದು, ಸರಕಾರ ತಕ್ಷಣ ಮತಾಂತರ ಕಾಯ್ದೆ ಜ್ಯಾರಿಗೆ ತರಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸುಮಾರು ಆರು ಸಾವಿರ ಅನಧೀಕೃತ ಚರ್ಚ್‍ಗಳಿದ್ದು, ಈ ಮೂಲಕ ಬುಡಕಟ್ಟು ಜನಾಂಗ, ದಲಿತರ ಮತಾಂತರ ಪ್ರಕ್ರಿಯೆಗಳು ನಡೆಯುತ್ತಿದೆ. ತಕ್ಷಣ ಈ

ಪ್ರಾಜೆಕ್ಟ್ ಚೀತಾ ತಂಡದಲ್ಲಿ ಪುತ್ತೂರಿನ ಕುವರ ಸನತ್ ಕೃಷ್ಣ

ಪುತ್ತೂರು :ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದಂದೇ ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾದ ಎಂಟು ಚೀತಾಗಳ ಐತಿಹಾಸಿಕ ಪಯಣದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ವನ್ಯಜೀವಿ ತಜ್ಞ ಸನತ್ ಕೃಷ್ಣ ಮುಳಿಯ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತ: ಪ್ರಧಾನಿ ಮೋದಿ ಅವರಿಂದ ಶಹಬ್ಬಾಸ್ ಪಡೆದ ಪ್ರಾಜೆಕ್ಟ್ ಚೀತಾ ತಂಡದಲ್ಲಿದ್ದ ಸನತ್ ಕೃಷ್ಣ ಮುಳಿಯ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಕೇಂದ್ರ ಪರಿಸರ ಇಲಾಖೆಯ