Home ಕರಾವಳಿ Archive by category ಪುತ್ತೂರು (Page 68)

ಗೆಜ್ಜೆಗಿರಿ ಕ್ಷೇತ್ರದಲ್ಲಿ ಪ್ರವೀಣ್ ನೆಟ್ಟಾರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಪುತ್ತೂರು ಗೆಜ್ಜೆ ಗಿರಿಯ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ನಂದನ್ ಬಿತ್ತಿಲ್ ನಲ್ಲಿ ಭಾನುವಾರದಂದು ಬೆಳಿಗ್ಗೆ ಬಿಲ್ಲವ ಸಮುದಾಯದ ಯುವ ಉದ್ಯಮಿ ಹಾಗೂ ಗೆಜ್ಜೆಗಿರಿ ನಂದನ್ ಬಿತ್ತಿಲಿನ ಪ್ರಸಾದ ತಯಾರಿಕ ಘಟಕದ ಸಂಚಾಲಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್ ನೆಟ್ಟಾರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತುಈ

ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಯಚ್. ಡಿ.ಕುಮಾರಸ್ವಾಮಿ ಭೇಟಿ

ಪುತ್ತೂರು :ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪ್ರವೀಣ್ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿ ಸಹಾಯಧನದ ಚೆಕ್ ವಿತರಿಸಿದರು. ಕುಮಾರಸ್ವಾಮಿ ಅವರು ಮನೆಯವರಿಗೆ 5 ಲಕ್ಷ ರೂ ಚೆಕ್ ವಿತರಿಸಿದರು.ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಎಂ.ಎಲ್.ಸಿ ಬಿ.ಎಂ ಫಾರೂಕ್, ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ,

ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಸಿಎಂ ಡಿವಿಎಸ್ ಭೇಟಿ

ಪುತ್ತೂರು :ಪುತ್ತೂರು ತಾಲ್ಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಕೇಂದ್ರ ಸಚಿವ,ಮಾಜಿ ಮುಖ್ಯಮಂತ್ರಿ,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯಧನದ ಚೆಕ್ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಹಾಗೂ ತಂದೆ-ತಾಯಿಯ ಜೊತೆಗೆ ಮಾತನಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ರೈ ಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್

ಪುತ್ತೂರು ಕೇಬಲ್ ಟಿವಿ, ವರದಿಗಾರ,ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ ಸೋನಿ ಗೋನ್ಸಾಲ್ವಿಸ್ ನಿಧನ

ಪುತ್ತೂರು ಕೇಬಲ್ ಟಿವಿ, ವರದಿಗಾರ,ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ,ಕಂಪ್ಯೂಟರ್ ತಂತ್ರಜ್ಞಾನದ ಮಾಂತ್ರಿಕ ಸೋನಿ ಗೋನ್ಸಾಲ್ವಿಸ್ ನಿಧನ. ಪುತ್ತೂರು: ಕೇಬಲ್ ಟಿ.ವಿ ಮತ್ತು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣಿತಿ ಹೊಂದಿದ್ದ ಬೊಳುವಾರು ಉರ್ಲಾಂಡಿ ನಿವಾಸಿ ಸೋನಿ ಗೋನ್ಸಾಲ್ವಿಸ್ (55ವ) ರವರು ಜು.30 ರ ನಸುಕಿನ ಜಾವ ನಿಧನರಾದರು.ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರವೀಣ್ ಜೀವಕ್ಕೆ 25 ಲಕ್ಷ ಬೇಲೆ ಕಟ್ಟಿದ್ದು ಸರಿಯೇ ? ಪ್ರಣವಾನಂದ ಸ್ವಾಮೀಜಿ ಆಕ್ರೋಶ

ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರು ಪ್ರವೀಣ್ ನೆಟ್ಟಾರ್ ರವರ ಹುಟ್ಟೂರಾದ ಬೆಳ್ಳಾರೆ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರ ಜೊತೆಗೆ ಹಾಗೂ ಅವರ ಶ್ರೀಮತಿ ಅವರ ಜೊತೆಗೂ ದೇವರು ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ನಾರಾಯಣ ಗುರುಗಳ ಹೆಸರಿನಲ್ಲಿ ಪೂಜಾ ವಿಧಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಜೊತೆಯಲ್ಲಿ ಬಿಲ್ಲವ ಸಮುದಾಯದ ಕುದ್ರೋಳಿ ದೇವಸ್ಥಾನದ ಸಮಿತಿಯ ಕಾನೂನು ಸಲಹೆಗಾರರಾಗಿರ್ತಕ್ಕಂತ ಶ್ರೀ ಪದ್ಮರಾಜ್ ನ್ಯಾಯವಾದಿಗಳು

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೆರವು ಬೇಕಾಗಿದೆ ,ಶ್ರೀ ಕ್ಷೇತ್ರ ಗೆಜ್ಜೆಗಿರಿ ಜೊತೆ ಕಾರ್ಯದರ್ಶಿ ಮೋಹನ ದಾಸ್ ಬಂಗೇರ ಮನವಿ

ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ, ಕುಟುಂಬ ಸದಸ್ಯರಿಗೆ ನೆರವು ನೀಡುವಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜೊತೆ ಕಾರ್ಯದರ್ಶಿ ಮೋಹನ ದಾಸ್ ಬಂಗೇರ ಮನವಿ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಅವರು ಧಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬೇಧಬಾವ ಮಾಡದೇ ಎಲ್ಲಾರನ್ನು ಅತ್ಯಂತ ಗೌರವಯುತ್ತ ನೋಡುತ್ತಿದ್ದರು. ಮಂಗಳವಾರ ರಾತ್ರಿ ನಡೆದ ಪ್ರವೀಣ್

ಬೆಳ್ಳಾರೆಗೆ ನೂತನ ಪಿಎಸೈ ಆಗಿ ಸುಹಾಸ್ , ಸುಬ್ರಹ್ಮಣ್ಯಕ್ಕೆ ಮಂಜುನಾಥ್ ವರ್ಗಾವಣೆ.

ಪುತ್ತೂರು: ಬೆಳ್ಳಾರೆಯಲ್ಲಿ ಎಸೈ ಆಗಿದ್ದ ರುಕ್ಮ ನಾಯ್ಕ್ , ಸುಬ್ರಹ್ಮಣ್ಯ ಎಸೈ ಆಗಿದ್ದ ಜಂಬೂರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಯ ಸರ್ಕಲ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಗಳಿಗೆ ನೂತನವಾಗಿ ಪೆÇಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶಿಸಿದ್ದಾರೆ. ಕುಂದಾಪುರ ಎಸೈ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣೆಗೆ,ವಿಟ್ಲ ಠಾಣಾ ಎಸೈ ಆಗಿದ್ದ ಮಂಜುನಾಥ ಟಿ

ಪ್ರವೀಣ್ ನೆಟ್ಟಾರು ಕೊಲೆ : ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ

ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಿಬ್ಬರಿಗೆ ಪುತ್ತೂರು ನ್ಯಾಯಾಲಯ ಆ.11ರ ತನಕ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.ಕಡಬ ತಾಲೂಕಿನ ಸವಣೂರಿನಲ್ಲಿ ಫಾಸ್ಟ್ಫುಡ್ ಅಂಗಡಿ ವ್ಯವಹಾರ ನಡೆಸುತ್ತಿರುವ ಮಹಮ್ಮದ್ ಝಾಕೀರ್ ಮತ್ತು ಬೆಳ್ಳಾರೆಯವನಾಗಿದು,ಸುಳ್ಯ ತಾಲೂಕಿನ ಗುತ್ತಿಗಾರಿನ ಅಡಿಕೆ ಖರೀದಿ ಅಂಗಡಿಯೊಂದರಲ್ಲಿ ಕೆಲಸಕ್ಕಿರುವ ಶಫೀಕ್ ನ್ಯಾಯಾಂಗ

ಪ್ರವೀಣ್ ಹತ್ಯೆ ಆರೋಪಿಗಳ ಅಂಗಡಿಗಳಿಗೆ ಹಾನಿ

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೋಲೀಸರಿಂದ ಬಂಧಿಸಲ್ಪಟ್ಟ ಬೆಳ್ಳಾರೆ ಮೂಲದ ಶಫೀಕ್ ಕೆಲಸ ಮಾಡುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯನ್ನು ಆಕ್ರೋಶಿತರು ಧ್ವಂಸಗೊಳಿಸಿದ ಘಟನೆ ನಡೆದಿದೆ. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೆಳ್ಳಾರೆ ಮೂಲದ ಶಫೀಕ್ ಬಂಧಿತನಾಗಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆಕ್ರೋಶಿತರಾದ ಕೆಲವರು ಆತ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗಾರಿನ ಅಡಿಕೆ ಅಂಗಡಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಬಿಗು ಪೋಲೀಸ್