Home ಕರಾವಳಿ Archive by category ಬೆಳ್ತಂಗಡಿ (Page 15)

ಬೆಳ್ತಂಗಡಿ: ನಿರ್ಮಾಣ ಹಂತದ ಮನೆ ತೆರವಿಗೆ ಮುಂದಾದ ಅರಣ್ಯ ಇಲಾಖೆ: ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ತಡೆ

ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ತೆರವುಗೊಳಿಸದಂತೆ ಸಚಿವರು ಸೂಚಿಸಿದ್ದರೂ ಅರಣ್ಯಾಧಿಕರಿಗಳು ಬೆಳ್ಳಂಬೆಳಗ್ಗೆ ತೆರವಿಗೆ ಮುಂದಾದ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ದೌಡಾಯಿಸಿದ್ದು, ಅವರೊಂದಿಗೆ ಜಿಲ್ಲೆಯ ಶಾಸಕರಾದ ರಾಜೇಶ್ ನಾಯಕ್, ಭರತ್ ಶೆಟ್ಟಿ, ಭಾಗೀರಥಿ ಮುಳ್ಯ, ಉಮಾನಾಥ್

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಆದರ್ಶ್ ಶೆಟ್ಟಿ ನೆಲ್ಯಾಡಿ

ನೆಲ್ಯಾಡಿ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಕ್ರೀಡಾಕೂಟದಲ್ಲಿ ಆದರ್ಶ್ ಶೆಟ್ಟಿ ಇವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತೆಲಂಗಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕರಾದ ಏಲಿಯಸ್ ಪಿಂಟೋ, ರಾಜೇಶ್ ಮೂಲ್ಯ ಹಾಗೂ ಪುಷ್ಪರಾಜ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ. ಪ್ರಸ್ತುತ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ.

ನೆಲ್ಯಾಡಿ: ಬೈಕಿಗೆ ಕಾರು ಡಿಕ್ಕಿ, ಬೈಕ್ ಸವಾರ ಗಂಭೀರ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಸಮೀಪ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಗಾಯಾಳುವನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಿಬ್ಬಂದಿ ಎಂದು ಹೇಳಲಾಗುತ್ತಿದ್ದು ಬಿಹಾರ್ ಮೂಲದವರ ಕಾರು ಇದಾಗಿದ್ದು, ಕಾರು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಟಾಣೆ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ಭೇಟಿ ನೀಡಿ

ಬೆಳ್ತಂಗಡಿ : ಒಕ್ಕಣ್ಣನ ವರ್ಣ ಉಳ್ಳಿಂಜದಲ್ಲಿ ಒಂದೇ ಅಡಿಕೆಯಲ್ಲಿ ಚತುರ್ಥ (ನಾಲ್ಕು) ಅಡಿಕೆ ಗಿಡ (ಪೂಗಸಿರಿ)

ಕರಾವಳಿಯ ಮುಖ್ಯ ಬೆಳೆ ಅಡಿಕೆ ಅದರಲ್ಲೂ ಒಕ್ಕಣ್ಣ ಇದನ್ನು ನಂಬಬಾರದು ಎಂದು ನಮ್ಮ ಹಿರಿಯರ ಮಾತು ಅಕ್ಷರಶಃ ಸತ್ಯ. ಇದರಲ್ಲಿ ಏರಿಳಿತಗಳು ಸಾಮಾನ್ಯ ಹಾಗೆ ಪ್ರಕೃತಿ ವೈಪರೀತ್ಯಗಳು ಇನ್ನೊಂದೆಡೆ ಮಹಾಮಾರಿ ಕೊಳೆರೋಗ ಹಳದಿ ರೋಗ ಎಲೆ ಚುಕ್ಕೆ ರೋಗಗಳು ಅಲ್ಲದೆ ಅಡಿಕೆಯಲ್ಲಿರುವ ಔಷಧೀಯ ಗುಣಗಳು ಹಾಗೆ ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಆನೆ ,ಕಾಡೆಮ್ಮೆ ,ಹಂದಿ, ಮಂಗ ಮುಂತಾದವುಗಳು ಕೃಷಿಕರನ್ನು ಬೆಚ್ಚಿ ಬೀಳಿಸುತ್ತದೆ ಪ್ರಯೋಗಗಳು ಬಹಳಷ್ಟು ನಡೆದರು ಪ್ರಕೃತಿಯ ಮುಂದೆ ನಾವು

ನೆಲ್ಯಾಡಿ: ಶಿಶಿಲ ಪೇಟೆಯಲ್ಲಿ “ಸ್ವಚ್ಛತಾ ಹಿ ಸೇವಾ” ; ಪ್ರತಿಜ್ಞಾವಿಧಿ ಬೋಧನೆ

ಕೊಕ್ಕಡ : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಡಿ ಶಿಶಿಲ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ., ಉಪಾಧ್ಯಕ್ಷ ಯತೀಶ್ ಯಳಚಿತ್ತಾಯ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಆಟೋ ಚಾಲಕ ವೃಂದ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಅಂಗಡಿ ಮಾಲಕರು, ಹಾಗೂ ಸ್ಥಳೀಯ ನಿವಾಸಿಗಳು ಸ್ವಚ್ಛತಾ ಕಾರ್ಯದಲ್ಲಿ

ನೆಲ್ಯಾಡಿ: ವಿದ್ಯುತ್ ಕಂಬದ ಮೇಲೆ ಬಿದ್ದ ಮರ: ಶೌರ್ಯ ತಂಡದಿಂದ ತೆರವು

ಭಾರೀ ಮಳೆ ಸುರಿದ ಪರಿಣಾಮ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಮರ ಮತ್ತು ವಿದ್ಯುತ್ ಕಂಬ ರಸ್ತೆಗೆ ಉರುಳಿ ಕೆಲ ಸಮಯ ವಿದ್ಯುತ್ ವ್ಯತ್ಯಯ ಉಂಟಾದ ಘಟನೆ ನಿಡ್ಲೆಯಿಂದ ಪಟ್ರಮೆಗೆ ಸಂಪರ್ಕಿಸುವ ರಸ್ತೆಯ ಸುರ್ಯತ್ತಾವು ಸಮೀಪ ಸಂಭವಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಳೆಂಜ ಶೌರ್ಯ ತಂಡದ ಸ್ವಯಂಸೇವಕರು ಮರವನ್ನು ತೆರವುಗೊಳಿಸಿ ಮೆಸ್ಕಾಂ ಇಲಾಖೆಗೆ ಸಹಕರಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು. ಕಾರ್ಯಾಚರಣೆಯಲ್ಲಿ ಕಳೆಂಜ ವಲಯದ ಸಂಯೋಜಕ ಗಿರೀಶ್, ಸದಸ್ಯರಾದ

ನೆಲ್ಯಾಡಿ: ಕೊಕ್ಕಡ-ಮಲ್ಲಿಗೆಮಜಲು ಫಝಲ್ ಜಮಾ ಮಸೀದಿ ಯಲ್ಲಿ ಸಂಭ್ರಮದ ಈದ್ ಮಿಲಾದ್

ನೆಲ್ಯಾಡಿ: ಪ್ರವಾದಿ ಮುಹಮ್ಮದ್‌ ಪೈಗಂಬರರ ಜನ್ಮ ದಿನಾಚರಣೆಯನ್ನು ಮಲ್ಲಿಗೆಮಜಲು ಫಝಲ್ ಜಮಾ ಮಸೀದಿ ಯಲ್ಲಿ ಇಂದು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮದರಸಾ ಮಕ್ಕಳಿಂದ ಪ್ರವಾದಿ ಕುರಿತ ಗಾನಗೀತೆಗಳು, ಪ್ರಭಾಷಣಗಳು ಮತ್ತಿತರ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಕಾಲ್ನಡಿಗೆ ಜಾಥಾ ಮೂಲಕ ಪ್ರವಾದಿ ಜೀವನ ಸಂದೇಶವನ್ನು ಸಾರಲಾಯಿತು. ಮೆರವಣಿಗೆಯಲ್ಲಿ ಮದ್ರಸ ಮಕ್ಕಳು, ಸ್ಥಳೀಯ ಜಮಾಅತರು ಭಾಗವಹಿಸಿದ್ದರು

ಶಾಂತಿಯು ದೇಶದ ಅಭಿವೃದ್ಧಿಗೆ ಸಹಕಾರಿ: ಡಾ. ಶಲೀಫ್ ಎ.ಪಿ.

ಉಜರೆ, ಸೆ.27: ಶಾಂತಿಯುತ ಜಗತ್ತಿಗೆ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆಯನ್ನು ಆಚರಿಸುತ್ತಿದೆ ಮತ್ತು ಆ ಮೂಲಕ ವಿಶ್ವ ಶಾಂತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಆಡಳಿತ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲೀಫ್ ಎ.ಪಿ. ಹೇಳಿದರು. ಕಾಲೇಜಿನಲ್ಲಿ ಸೆಪ್ಟೆಂಬರ್ 27ರಂದು ನಡೆದ ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆಯ ಕಾರ್ಯಕ್ರಮದಲ್ಲಿ

ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ ನಿ.ಮಹಾಸಭೆ; 6.70 ಕೋಟಿ ವ್ಯವಹಾರ, 24.65 ಲಕ್ಷ ನಿವ್ವಳಲಾಭ

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನಿ. ಇದರ ಮಹಾಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಸೆ.24 ರಂದು ನೆಲ್ಯಾಡಿ ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಉಷಾ ಅಂಚನ್ ಅವರು ವಹಿಸಿ ಸಂಘವು ಒಂದು ವರ್ಷದಲ್ಲಿ 6.70 ಕೋಟಿ ವ್ಯವಹಾರ ನಡೆಸಿದೆ ಹಾಗೂ 24.65 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಚೈತನ್ಯ ಅವರು 2022-23ನೇ ಸಾಲಿನ ಆರು ತಿಂಗಳುಗಳ ಕಾಲ

ಸಂವಹನದ ಕೊರತೆಯೇ ಸಮಸ್ಯೆಗೆ ಮೂಲ ಕಾರಣ – ಸ್ವಾತಿ ಬಿ.

ಉಜಿರೆ, ಸೆ. 22: “ನಾವು ವಿಶೇಷವಾಗಿ ಗುರುತಿಸಲ್ಪಡಬೇಕೆಂದರೆ ನಮ್ಮಲ್ಲಿ ಕೌಶಲ್ಯಗಳಿರಬೇಕು. ಸಂವಹನ ಕೌಶಲ್ಯ ಪ್ರಸ್ತುತ ಬಹಳ ಪ್ರಮುಖ ಅಂಶ. ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಲ್ಲಿ ಶೇ.70 ರಷ್ಟು ಈ ಸಂವಹನ ಕೊರತೆಯಿಂದಲೇ ಬರುತ್ತದೆ” ಎಂದು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾಸ್ಟರ್ ಆಫ್ ಸೋಶಿಯಲ್