ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ ನಿ.ಮಹಾಸಭೆ; 6.70 ಕೋಟಿ ವ್ಯವಹಾರ, 24.65 ಲಕ್ಷ ನಿವ್ವಳಲಾಭ
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನಿ. ಇದರ ಮಹಾಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಸೆ.24 ರಂದು ನೆಲ್ಯಾಡಿ ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಉಷಾ ಅಂಚನ್ ಅವರು ವಹಿಸಿ ಸಂಘವು ಒಂದು ವರ್ಷದಲ್ಲಿ 6.70 ಕೋಟಿ ವ್ಯವಹಾರ ನಡೆಸಿದೆ ಹಾಗೂ 24.65 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಚೈತನ್ಯ ಅವರು 2022-23ನೇ ಸಾಲಿನ ಆರು ತಿಂಗಳುಗಳ ಕಾಲ ನಡೆಸಿರುವ ವ್ಯವಹಾರದ ವರದಿಯನ್ನು ವಾಚಿಸಿದರು. ಲೆಕ್ಕಪರಿಶೋಧಿತ ಲೆಕ್ಕಪತ್ರಗಳ ಮಂಡನೆ ಪ್ರಕಾರ ಸಂಘವು ಆರು ತಿಂಗಳುಗಳಲ್ಲಿ 3,96,26,505 /-ವ್ಯವಹಾರ ನಡೆಸಿದೆ. ಹಾಗೂ 3, 95,136/- ಲಾಭವನ್ನು ಗಳಿಸಿದೆ. 718 ಎ ತರಗತಿ ಸದಸ್ಯರಿದ್ದು ಒಟ್ಟು 14,26,500 ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸಿ ತರಗತಿಯ 1,16,400/- ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಠೇವಣತಿಗಳು ವರದಿ ವರ್ಷದಲ್ಲಿ 8,30,18,905./- ಸ್ವೀಕರಿಸಿದ್ದು, 4,62,93,009/- ಪಾವತಿಸಿದ್ದು, 20 ಬಗೆಯ ಸಾಲಗಳನ್ನು ನೀಡಲಾಗಿದೆ. 3,97,09,576/- ಸಾಲ ವಿತರಿಸಲಾಗಿದೆ. 92,92,747/- ಸಾಲ ಜಮೆಯಾಗಿದೆ. 40 ಸ್ವಸಹಾಯ ಸಂಘಗಳ ಗುಂಪುಗಳನ್ನು ರಚಿಸಲಾಗಿದೆ. ಸಂಘದ ಮಿಗತೆ ಹಣ ನಿಗತೆ 73,75,000/- ಹಣವನ್ನು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದರು.
ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾದ ಉಷಾ ಅಂಚನ್, ಉಪಾಧ್ಯಕ್ಷರಾದ ಮೇಘನಾ ಶೈನ್, ನಿರ್ದೇಶಕರಾದ ಲತಾ ಸಿ.ಎಚ್, ರತಿ.ಡಿ, ವಾರಿಜಾಕ್ಷಿ, ಮೈತ್ರಿ, ವಿನೀತಾ, ಎಂ ಬಿ ಪ್ರವಿಣಿ, ಶಾಲಿನಿ, ಸಂಪಾವತಿ, ಜಯಂತಿ ಮತ್ತು ಡೈಸಿ ವರ್ಗಿಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಚೈತನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ತೀರಾ ಬಡತನದಲ್ಲಿರುವ ಒಂಟಿ ಮಹಿಳೆಯರನ್ನು ಗುರುತಿಸಿ ಸಹಾಯ ಹಸ್ತವಾಗಿ ಅಕ್ಕಿ ಮತ್ತು ಸೀರೆಯನ್ನು ವಿತರಿಸಲಾಯಿತು.
ಆರು ತಿಂಗಳ ಕಾಲ ವ್ಯವಹಾರ ನಡೆಸಿದ ಲಾಭಾಂಶದಲ್ಲಿ ಸಂಘದ ಎ ತರಗತಿಯ ಸದಸ್ಯರಿಗೆಲ್ಲರಿಗೂ ಉಡುಗೊರೆಯನ್ನು ನೀಡಲಾಗಿತ್ತು.
ಉಪ್ಪಿನಂಗಡಿ ಮೂರ್ತೆದಾರರ ನಿರ್ದೇಶಕರಾದ ಶೀನಪ್ಪ ಉದನೆ, ಚೆನ್ನಪ್ಪ ಗೋಳಿತೊಟ್ಟು, ಶಶಿಧರ್ ಗೋಳಿತೊಟ್ಟು,ಆಲಂಗಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಇಓ ಲಿಂಗಪ್ಪ, ಗುರುದೇವ್ ಬ್ಯಾಂಕ್ ಮಾನಸ,, ತಿರ್ಲೆ ಭಜನಾ ಮಂಡಳಿ ಅಧ್ಯಕ್ಷರಾದ ನೋಣಯ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಜಯಲಕ್ಷ್ಮಿ, ಪುಷ್ಪ ಮೊದಲಾದವರು ಉಪಸ್ಥಿತರಿದ್ದರು.
ಸಹಕಾರಿ ಸಂಘದ ನಿಧಿಗಳ ವಿಂಗಡಣೆಯನ್ನು ಶುಭಲಕ್ಷ್ಮಿ ವಾಚಿಸಿದರು, ಮುಂದಿನ ವರ್ಷದ ಆಯವ್ಯಯ ಬಜೆಟನ್ನು ಹರ್ಷಿತ ವಾಚಿಸಿದರು. ಸವಿತಾ ಪ್ರಾರ್ಥಿಸಿದರು, ಉಷಾ ಅಂಚನ್ ಸ್ವಾಗತಿಸಿದರು, ಶ್ರೀಮತಿ ಚೈತನ್ಯ ವಂದಿಸಿದರು.