ಬೆಳ್ತಂಗಡಿ : ಒಕ್ಕಣ್ಣನ ವರ್ಣ ಉಳ್ಳಿಂಜದಲ್ಲಿ ಒಂದೇ ಅಡಿಕೆಯಲ್ಲಿ ಚತುರ್ಥ (ನಾಲ್ಕು) ಅಡಿಕೆ ಗಿಡ (ಪೂಗಸಿರಿ)
ಕರಾವಳಿಯ ಮುಖ್ಯ ಬೆಳೆ ಅಡಿಕೆ ಅದರಲ್ಲೂ ಒಕ್ಕಣ್ಣ ಇದನ್ನು ನಂಬಬಾರದು ಎಂದು ನಮ್ಮ ಹಿರಿಯರ ಮಾತು ಅಕ್ಷರಶಃ ಸತ್ಯ. ಇದರಲ್ಲಿ ಏರಿಳಿತಗಳು ಸಾಮಾನ್ಯ ಹಾಗೆ ಪ್ರಕೃತಿ ವೈಪರೀತ್ಯಗಳು ಇನ್ನೊಂದೆಡೆ ಮಹಾಮಾರಿ ಕೊಳೆರೋಗ ಹಳದಿ ರೋಗ ಎಲೆ ಚುಕ್ಕೆ ರೋಗಗಳು ಅಲ್ಲದೆ ಅಡಿಕೆಯಲ್ಲಿರುವ ಔಷಧೀಯ ಗುಣಗಳು ಹಾಗೆ ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಆನೆ ,ಕಾಡೆಮ್ಮೆ ,ಹಂದಿ, ಮಂಗ ಮುಂತಾದವುಗಳು ಕೃಷಿಕರನ್ನು ಬೆಚ್ಚಿ ಬೀಳಿಸುತ್ತದೆ ಪ್ರಯೋಗಗಳು ಬಹಳಷ್ಟು ನಡೆದರು ಪ್ರಕೃತಿಯ ಮುಂದೆ ನಾವು ಏನೇನೋ ಅಲ್ಲ.
ಈ ಜಗತ್ತು ಕೆಲವೊಮ್ಮೆ ತುಂಬಾ ವಿಚಿತ್ರ ಅನಿಸುತ್ತದೆ. ನಾವು ಈ ಭೂಮಿಯಲ್ಲಿ ಬಹಳ ಅದ್ಭುತಗಳನ್ನೇ ಕಾಣುತ್ತೇವೆ ಅದೇ ಬೀಜಗಳು ಮೊಳಕೆ ಒಡೆಯುವುದು ಅದ್ಭುತವೇ ಹೊಸ ಹೊಸ ಸೃಷ್ಟಿ ಮೂಡಿ ಮೋಡಿ ಮಾಡಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿಂಜ ಜಯರಾಮ್ ಭಟ್ರ ತೋಟದಲ್ಲಿ ವಿಶೇಷ ಅಡಿಕೆ ಗಿಡವು ಒಂದು ಅಡಿಕೆಗೆ ಒಂದೇ ಗಿಡ ಇದು ಪ್ರಕೃತಿ ನಿಯಮ ಆದರೆ ಕೆಲವೊಂದು ಸಲ ಈ ನಿಯಮವನ್ನು ಮೀರಿದ ವರ್ತನೆಯನ್ನು ಸಸ್ಯ ಸಂಕುಲಗಳಲ್ಲಿಯೂ ಕಾಣಬಹುದು
ಎರಡು, ಮೂರು ಎಂದು ಆದರೆ ನಾಲ್ಕು ಗಿಡ ಅಪರೂಪವೇ ಎಲ್ಲಿಯೂ ಆಗಲಿಲ್ಲ. ಪ್ರಕೃತಿಯ ವೈಚಿತ್ರಗಳ ಸಾಲಿಗೆ ಈ ಅಡಿಕೆ ಗಿಡವು ಒಂದು ಸೇರ್ಪಡೆ. ಒಟ್ಟಿನಲ್ಲಿ ಪ್ರಕೃತಿಯ ಔಚಿತ್ಯಕ್ಕೆ ನಾವು ತಲೆಬಾಗಲೇಬೇಕು.ಒಂಟಿ ಕಾಲಿನ ಕೊಕ್ಕರೆಯ ಮರದ ತುಂಬಾ ಚಿನ್ನದ ಮೊಟ್ಟೆ (ಅಡಿಕೆ )ಎಂಬಂತೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ ಎಂಬ ಅಂಬೋಣ ಸದಾ ಚಾಲ್ತಿಯಲ್ಲಿರುತ್ತದೆ .ಅಡಿಕೆ ನಿಷೇಧ ಗುಮ್ಮ ಬೆಳೆಗಾರರನ್ನು ಸದಾ ಕಾಡುತ್ತಿರುತ್ತದೆ..!
ಚಿತ್ರ : ರವೀಂದ್ರ ಭಟ್ ಉಳ್ಳಿಂಜ
ಬರಹ : ಕುಮಾರ್ ಪೆರ್ನಾಜೆ ಪುತ್ತೂರು ಪೆರ್ನಾಜೆ ಮನೆ ಪೆರ್ನಾಜೆ ಪೋಸ್ಟ್ ಪುತ್ತೂರು ತಾಲೂಕು 574223