ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆಯಲ್ಲಿ ಆಟೋ ಮತ್ತು ಬಸ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಆಟೋದಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದ, ಮಹಿಳೆಯನ್ನು ಸ್ಧಳೀಯ ಆಸ್ಪತ್ರಗೆ ದಾಖಲಿಸಿದ್ದಾರೆ. ಗಾಯಗೊಂಡ ಮಹಿಳೆಯನ್ನು ಮಂಗಳೂರು ನಿವಾಸಿ ಸರಸ್ವತಿ ಎಂದು ಗುರುತಿಸಲಾಗಿದೆ. ಆಟೋ ಮಂಗಳೂರಿನಿಂದ ಮೂಲ್ಕಿ ಕಡೆಗೆ
ತುಳು ನಾಡು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ, ದೇವಸ್ಥಾನಗಳು ಕಾಣಸಿಗುತ್ತವೆ. ಅದರಂತೆ ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಒಂದು ವಾರಗಳ ಕಾಲ ನಡೆಯಲಿದ್ದು ಇಂದು ಪ್ರಾರಂಭವಾಯಿತು. ಅತ್ಯಂತ ಕಾರಣಿಕ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುವುದು ವಿಶೇಷ. ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಕೊಡಮಣಿತ್ತಾಯ
ಸುರತ್ಕಲ್ ಟೋಲ್ ಗೇಟ್ ತೆರವಾಗಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ಹಳೆಯಂಗಡಿ ನಡುವೆ ಸಂಚರಿಸುವ ಎಲ್ಲಾ ಬಸ್ಗಳ ಟಿಕೆಟ್ ದರದಲ್ಲಿ ಡಿ.20 ರಿಂದ 2ರೂ ಕಡಿತ ಮಾಡಲಾಗುವುದು, ಕಿನ್ನಿಗೋಳಿಯಿಂದ ಮುಕ್ಕ ತನಕ ಹಿಂದಿನ ದರವೇ ಇರಲಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ
ಮಂಗಳೂರು : ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ 21 ವರ್ಷದ ನರ್ಸಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ವಿದ್ಯಾರ್ಥಿ ಪವನ್ ಈ ಕೃತ್ಯವೆಸಗಿದ ಆರೋಪಿ. ಮೂಲತಃ ಕಲಬುರಗಿಯವನಾದ ಪವನ್ ಬಜಪೆಯಲ್ಲಿ ವಾಸವಿದ್ದ.ಆಸ್ಪತ್ರೆಗೆ ತಪಾಸಣೆಗೆ ಬಂದವರು ಸ್ಕ್ಯಾನಿಂಗ್‌ಗೆ ಒಳಗಾಗುವ ಮುನ್ನ ಬಟ್ಟೆ
ಸುರತ್ಕಲ್ ಟೋಲ್ ಗೇಟ್ ದಾಟಿ ಮುಲ್ಕಿ, ಕಿನ್ನಿಗೋಳಿ, ಮುಕ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಪ್ರಯಾಣಿಕರ ಟಿಕೆಟ್ ಮೇಲೆ ಹಾಕಿದ್ದ ಟೋಲ್ ತೆರಿಗೆಯನ್ನು ತಕ್ಷಣವೇ ಕೈಬಿಟ್ಟು ಪ್ರಯಾಣ ದರವನ್ನು ಇಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಏಳು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಾಗ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಮುಂತಾದ ಮಂಗಳೂರು ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಖಾಸಗಿ
ಇಲ್ಲಿನ ಟೋಲ್ ಗೇಟ್ ನಲ್ಲಿ ಉದ್ಯೋಗದಲ್ಲಿದ್ದು ಟೋಲ್ ತೆರವು ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ 35 ಮಂದಿಗೆ ಕೆಲಸ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ತಮ್ಮನ್ನು ಸಂಪರ್ಕಿಸಿದ 19 ಮಂದಿಯಲ್ಲಿ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಪ್ರತಿಭಾ ಕುಳಾಯಿ ಅವರು, “ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35
ಹಲವಾರು ಪ್ರತಿಭಟನೆಗಳ ನಂತರ ಇಲ್ಲಿನ ಟೋಲ್ ಗೇಟಿಗೆ ಕೊನೆಗೂ ಮುಕ್ತಿ ದೊರಕಿದ್ದು, ಶುಕ್ರವಾರದಿಂದ ವಾಹನಗಳು ಉಚಿತವಾಗಿ ಸಂಚರಿಸುತ್ತಿವೆ. ಈ ನಡುವೆ ಈ ಶುಲ್ಕ ಕೇಂದ್ರದಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ 50ಕ್ಕೂ ಅಧಿಕ ಮಂದಿ ಉದ್ಯೋಗ ವಂಚಿತರಾಗಿದ್ದಾರೆ. ಗುರುವಾರ ಮುಂಜಾನೆ ಶುಲ್ಕ ಕೇಂದ್ರದ ಕೆಲ ಸಿಬ್ಬಂದಿಗಳು ಆಗಮಿಸಿ ಕುರ್ಚಿಗಳಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.ಹೆಜಮಾಡಿಯ ನವಯುಗ ಟೋಲ್ ಗೇಟ್ ಗೆ ಕೇಂದ್ರ ಸರ್ಕಾರ
ಮಂಗಳೂರು: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ಟೋಲ್ ಅನ್ನೂ ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ
ಸುರತ್ಕಲ್, ನ.28: ಸುರತ್ಕಲ್ ಟೋಲ್‌ಗೇಟ್ ನ.30ರಿಂದ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನವಾಗು ತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರಿಗೆ ಅಭಿನಂದನೆ ತಿಳಿಸುವ ಬೃಹತ್ ಬ್ಯಾನರ್‌ಗಳು ಸುರತ್ಕಲ್ ನ ಸ್ಮಶಾನ ಸೇರಿವೆ. ಸುರತ್ಕಲ್ ಹೃದಯಭಾಗದಲ್ಲಿರುವ ಸ್ಮಶಾನದ ಒಳಭಾಗದಲ್ಲಿ ಹಲವು ಬ್ಯಾನರ್‌ಗಳು ಪತ್ತೆಯಾಗಿದ್ದು, “ಸುರತ್ಕಲ್ ಟೋಲ್‌ಗೇಟ್ ರದ್ದು ಮಾಡುವ ಭರವಸೆಯನ್ನು ಈಡೇರಿಸಿದ ಮಾನ್ಯ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್
ಚಿತ್ರಾಪುರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇಲ್ಲಿನ ಜೀರ್ಣೋದ್ಧಾರಕ್ಕೆ ಸರ್ವ ಭಕ್ತರು ಕೈ ಜೋಡಿಸಿ ದೇವಸ್ಥಾನವನ್ನು ಐತಿಹಾಸಿಕವಾಗಿ ಬೆಳಗಿಸಿ ಶ್ರೀ ದೇವಿಯ ಆಶೀರ್ವಾದ ಪಡೆಯುವಂತಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬ್ರಹ್ಮಕಲಶಾಧಿ ದಾರ್ಮಿಕ ಸೇವಾ ಕಾರ್ಯಗಳು ಮಾ.5 ರಿಂದ 13 ರವರೆಗೆ ಜರಗಲಿದ್ದು ,13 ರಂದು ಬ್ರಹ್ಮಕಲಶ ಮತ್ತು 14 ರಿಂದ ಜಾತ್ರಾ ಮಹೋತ್ಸವ




























