ಕಿನ್ನಿಗೋಳಿ – ಹಳೆಯಂಗಡಿ ನಡುವೆ ಬಸ್ ಟಿಕೆಟ್ ದರ 2 ರೂ ಇಳಿಕೆ

ಸುರತ್ಕಲ್ ಟೋಲ್ ಗೇಟ್ ತೆರವಾಗಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ಹಳೆಯಂಗಡಿ ನಡುವೆ ಸಂಚರಿಸುವ ಎಲ್ಲಾ ಬಸ್ಗಳ ಟಿಕೆಟ್ ದರದಲ್ಲಿ ಡಿ.20 ರಿಂದ 2ರೂ ಕಡಿತ ಮಾಡಲಾಗುವುದು, ಕಿನ್ನಿಗೋಳಿಯಿಂದ ಮುಕ್ಕ ತನಕ ಹಿಂದಿನ ದರವೇ ಇರಲಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ
