Home Archive by category ರಾಜಕೀಯ (Page 9)

ದೇವೇಂದ್ರ ಫಡ್ನವೀಸ್ ಅವರಿಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಬಿಜೆಪಿ ಹೈಕಮಾಂಡಿಗೆ ಮನವಿ

ಮಹಾರಾಷ್ಟದ ಹಾಲೀ ಉಪ ಮುಖ್ಯಮಂತ್ರಿ ಮಾಜೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡುವಂತೆ ಬಿಜೆಪಿ ಹೈಕಮಾಂಡಿಗೆ ಮನವಿ ಮಾಡಿದ್ದಾರೆ. ಶಿವಸೇನೆ ಮುರಿದು, ಇತರ ಪಕ್ಷಗಳ ಶಾಸಕರನ್ನು ಖರೀದಿಸಿ ಮಹಾರಾಷ್ಟದಲ್ಲಿ ಬಿಜೆಪಿಯು ಖರೀದಿ ಸರಕಾರ ರಚಿಸಿತ್ತು. ಮತದಾರರು ಅದನ್ನು ಅಕ್ರಮ ಎನ್ನುವಂತೆ ತೀರ್ಪು

ದಿಲ್ಲಿಯಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟ ಎರಡೂ ಕುಟಗಳ ಸಭೆ

ಬುಧವಾರ ದಿಲ್ಲಿಯಲ್ಲಿ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟ ಎರಡೂ ಕುಟಗಳು ತಮ್ಮ ರಾಜಕೀಯ ತಂತ್ರಗಾರಿಕೆಯ ಬಗೆಗೆ ಸಭೆ ನಡೆಸಿದವು. ಪಾಟ್ನಾದಿಂದ ಬೆಳಿಗ್ಗೆ ಹತ್ತೂವರೆ ಗಂಟೆಯ ಹೊತ್ತಿಗೆ ಹೊರಟ ವಿಸ್ತಾರ್ ವಿಮಾನದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮತ್ತು ಮಾಜೀ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದಿಲ್ಲಿಗೆ ಹೊರಟದ್ದು ಭಾರೀ ಗಾಳಿ ಸುದ್ದಿಗಳಿಗೆ ಕಾರಣವಾಗಿತ್ತು. ಕೊನೆಗೆ ನಿತೀಶ್ ಕುಮಾರ್ ಅವರು ಎನ್‌ಡಿಎ ಕೂಟದ ಸಭೆಯಲ್ಲಿ ಭಾಗವಹಿಸಿದರೆ,

ಬಿರುಸಿನಿಂದ ನಡೆಯುತ್ತಿರುವ ನೈಋತ್ಯ ಶಿಕ್ಷಕರ ಪದವೀಧರ ಕ್ಷೇತ್ರದ ಮತದಾನ

ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಐದು ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,189 ಮತದಾರರು ಇದ್ದು, ಅವರಲ್ಲಿ 5,539 ಪುರುಷರು, 2,650 ಮಹಿಳೆಯರು ಇದ್ದಾರೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು, ಅವರಲ್ಲಿ 11,596 ಮಹಿಳೆಯರು ಹಾಗೂ 8,375 ಪುರುಷ ಮತದಾರರು ಈ ಬಾರಿ ಮತದಾನಕ್ಕೆ ಅರ್ಹರಾಗಿದ್ದಾರೆ.ವಿಧಾನಪರಿಷತ್‌ನ ನೈರುತ್ಯ ಪಧವೀಧರ ಹಾಗೂ

ಕಾಸಿಗೆ ತಕ್ಕಂತೆ ಕಜ್ಜಾಯ ಹಂಚಿದ ಮತಗಟ್ಟೆ ಸಮೀಕ್ಷೆ:ಬಿಜೆಪಿ, ಎನ್‌ಡಿಎಗೆ ಅನೈತಿಕ ಉಚ್ಚ ಸಂಖ್ಯೆ ನೀಡಿಕೆ

ಚುನಾವಣಾ ಸಮೀಕ್ಷೆಗಳು ಕಾಸಿಗೆ ತಕ್ಕ ಕಜ್ಜಾಯವನ್ನು ಪಕ್ಷಗಳಿಗೆ ನೀಡಿವೆ. ಇದು ಈ ಬಾರಿಯ ಕೆಲವು ಗೇಲಿ ಗೆಲುವು ಸಂಖ್ಯೆಗಳಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ಸು 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಆದರೆ 13ರಿಂದ 15 ಸ್ಥಾನ ಗೆಲ್ಲುವುದಾಗಿ ಆಜ್ ತಕ್ ಹೇಳಿದೆ. ರಾಜಸ್ತಾನದಲ್ಲಿನ ಲೋಕಸಭಾ ಸ್ಥಾನಗಳ ಸಂಖ್ಯೆ 25 ಮಾತ್ರ. ಚಾಣಕ್ಯ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿ ಅಲ್ಲಿ 33 ಸ್ಥಾನ ಗೆಲ್ಲುತ್ತದಂತೆ. ಆಜ್ ತಕ್ ಪ್ರಕಾರ ಜಾರ್ಖಂಡ್‌ನಲ್ಲಿ ಸಿಪಿಐಎಂಎಲ್ ಪಕ್ಷವು

ಬ್ರಹ್ಮಾವರದಲ್ಲಿ ಬಿರುಸಿನಿಂದ ನಡೆಯಿತ್ತಿರುವ ಮತದಾನ

ಬ್ರಹ್ಮಾವರ: ನೈರುತ್ಯ ಪಧವೀಧರ ಶಿಕ್ಷಕರ ಚುನಾವಣೆಯ ಮತದಾನ ಬ್ರಹ್ಮಾವರದ ಮತಗಟ್ಟೆಗಳಲ್ಲಿ ನಡೆಯುತ್ತಿದೆ. ಮತಗಟ್ಟೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ 322 ಪುರುಷರು, 417 ಮಹಿಳೆಯರು ಮತ್ತು ಪಧವೀಧರ ಕ್ಷೇತ್ರದಿಂದ 1489 ಪುರುಷರು 1657 ಮಹಿಳೆಯರು ಮತದಾರರನ್ನು ಹೊಂದಿದೆ.

ಸಿಕ್ಕಿಂನಲ್ಲಿ ಎಸ್‌ಕೆಎಂ, ರಾಷ್ಟ್ರೀಯ ಪಕ್ಷಗಳು ಔಟ್:ಅರುಣಾಚಲ ಪ್ರದೇಶ ಮತ್ತೆ ಬಿಜೆಪಿ ಕೈವಶ

ವಿಧಾನ ಸಭಾ ಚುನಾವಣೆಯಲ್ಲಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಎರಡನೆಯ ಬಾರಿ ಅಧಿಕಾರದ ಗದ್ದುಗೆಗೆ ಏರಿವೆ. ಎಸ್‌ಕೆಎಂ- ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾವು ಎರಡನೆಯ ಬಾರಿ ಏಕೈಕ ಪಕ್ಷವಾಗಿ ಅಧಿಕಾರಕ್ಕೆ ಏರಿದೆ. ಅದು ವಿಧಾನ ಸಭೆಯ 32ರಲ್ಲಿ 31 ಸ್ಥಾನ ಗೆದ್ದುಕೊಂಡಿತು. ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿಂ ಮಣೆ ಹಾಕಿಲ್ಲ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯು 46 ಸ್ಥಾನಗಳಲ್ಲಿ ಗೆಲುವು ಕಂಡು ಮತ್ತೆ

ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾನ : ದ.ಕ. ಉಡುಪಿ, ಚಿಕ್ಕಮಗಳೂರಿನಲ್ಲಿ ಯಶಸ್ವೀ ಕ್ಯಾಂಪೇನ್

ಕರ್ನಾಟಕ ವಿಧಾನ ಪರಿಷತ್ ನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ. ಖ್ಯಾತ ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಉತ್ತಮ ಪ್ರಚಾರವನ್ನು ಮಾಡಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ,

ಉಳ್ಳಾಲ : ಶಿಕ್ಷಣ ಕಾಶಿಯಲ್ಲಿ ಉದ್ಯೋಗದ ವಿಚಾರಗಳೇ ಇಲ್ಲ- ದಿನಕರ್ ಉಳ್ಳಾಲ್

ಉಳ್ಳಾಲ: ನೈರುತ್ಯ ಕ್ಷೇತ್ರ ಶಿಕ್ಷಣ ಕಾಶಿಯಾಗಿಯೇ ಮುಂದುವರಿಯುತ್ತಿದೆ ಹೊರತು ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳು ಇಲ್ಲಿ ಆರಂಭವಾಗುತ್ತಿಲ್ಲ. ಪದವೀಧರರಿಗೆ ನಿರುದ್ಯೋಗದ ಸಮಸ್ಯೆ ಜ್ವಲಂತ ಇದ್ದರೂ ವಿಧಾನಸಭೆಯಲ್ಲಿ ಚರ್ಚೆಗಳೇ ಆಗದೇ ಅನಾವಶ್ಯಕ ವಿಚಾರಗಳೇ ಮೇಳೈಸುತ್ತಿವೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ ಹೇಳಿದರು. ಕುತ್ತಾರು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಣ, ಜಾತಿ,

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿಲ್ಲ, ಅಲ್ಟ್ರಾ ಎಕ್ಸ್ಟ್ರೀಮ್ ಎಡಪಂಥೀಯರು ಆಡಳಿತ ನಡೆಸುತ್ತಿದ್ದಾರೆ : ಉಡುಪಿಯಲ್ಲಿ ಬಿ.ಎಲ್ ಸಂತೋಷ್ ಆರೋಪ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿಲ್ಲ. ಅಲ್ಟ್ರಾ ಎಕ್ಸ್ಟ್ರೀಮ್ ಎಡಪಂಥೀಯರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಸಮಿತಿಯಲ್ಲಿ ಹಿಂದು ವಿರೋಧಿಗಳನ್ನೇ ತುಂಬಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆರೋಪಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ

ಶಿವಮೊಗ್ಗ: ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಭರ್ಜರಿ ಪ್ರಚಾರ

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಅವರು ಶಿವಮೊಗ್ಗದ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು. ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸೇವಾ ಮನೋಭಾವನೆಯುಳ್ಳ ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ.