ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಾರ್ಯದರ್ಶಿ, ಹಿಮಕರ್ ಕೋಟ್ಯಾನ್ ರವರು ನೆರವೇರಿಸಿಕೊಟ್ಟರು.ಗೌರವಾಧ್ಯಕ್ಷರಾದ ಶ್ರೀ ಗುರುರಾಜ್
ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಪ್ರಚಾರೋಹಣಗೈದು ಶುಭ ಹಾರೈಸಿ ಮಾತನಾಡುತ್ತಾ ನಮಗೆ ಸಂವಿಧಾನ ನೀಡಿರುವ ಹಕ್ಕುಗಳ ಚಲಾವಣೆಯ ಜೊತೆಗೆ ಕರ್ತವ್ಯಗಳ ಪಾಲನೆಯೂ ಆದಾಗ ದೇಶದ ಸಮಗ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗ ಮುಖ್ಯಸ್ಥರುಗಳಾದ ಎಂ.ಎನ್ ಚಂದ್ರಶೇಖರ, ಯತೀಶ್ ಕೆ. ಎನ್, ವಿವೇಕ್ ಪಿ, ಹರೀಶ್ ಕುಮಾರ್, ರಮಾದೇವಿ,
ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ದೀಪ ಬೆಳಗಿ ಡಾ. ಕೆವಿಜಿ ಸಾಧನೆ ಹಾಗೂ ಅವರ ತತ್ವ ಆದರ್ಶಗಳ ಬಗ್ಗೆ ವಿವರಿಸಿದರು. ಎನ್ನೆಂಪಿಯುಸಿ ಪ್ರಾಂಶುಪಾಲರಾದ ಮಿಥಾಲಿ. ಪಿ.
ಕೆವಿಜಿ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 76ನೇ ಗಣರಾಜ್ಯ ದಿನಾಚರಣೆ ಕಾರ್ಯಕ್ರಮ ಜನವರಿ 26 ಆದಿತ್ಯವಾರದಂದು ನೆರವೇರಿತು.ಅಕಾಡೆಮಿ ಆಪ್ ಲಿಬರಲ್ ಎಜುಕೇಷನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ದ್ವಜಾರೋಹಣ ನೆರವೇರಿಸಿದರು. ಗಣ್ಯರಿಗೆ ಕಾಲೇಜು ಎನ್.ಸಿ.ಸಿ ಘಟಕದಿಂದ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ
ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳ ಅಂಗವಾಗಿ ಕೆ.ಎಂ.ಸಿ. ಆಸ್ಪತ್ರೆಯು ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಜನವರಿ 27 ರಿಂದ 31ರವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದೆ. ಈ ಶಿಬಿರವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಆಂಕಾಲಜಿ ಕೇಂದ್ರವು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಇವರ
ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ ಖರ್ಚು ತಗುಲಿದೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದು, 70ರಿಂದ 75 ಲಕ್ಷ
ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19 ಆದಿತ್ಯವಾರದಂದು ತಾಲೂಕು ಮಟ್ಟದ ಚಿತ್ರೋತ್ಸವ ಸ್ಪರ್ಧೆಯು ನಡೆಯಿತು. ಸಮಾರೋಪ ಸಮಾರಂಭದ ಮೊದಲಿಗೆ ಒಂದು ಗಂಟೆಯ ಕಾಲಾವಧಿಯೊಂದಿಗೆ ವಿವಿಧ ಶಾಲೆಗಳಿಂದ ಪಾಲ್ಗೊಂಡಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರ 5 ವಿಭಾಗಗಳ ಚಿತ್ರರಚನಾ ಸ್ಪರ್ಧೆಯು ನಡೆಯಿತು. ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗಿನ 175 ಮಂದಿ ವಿದ್ಯಾರ್ಥಿ
ಕಡಬ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ ಪಡೆದು ಕಡಬ ತಾಲೂಕಿಗೆ ಪ್ರಥಮ, ಲವ್ಯಶ್ರೀ 475 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಶಿವಾನಿ ಡಿ ಎ 463
ಕಾರ್ಕಳದ ಅನಂತಶಯನ ರಸ್ತೆಯ ಧರ್ಮಶ್ರೀ ಜೆರಾಕ್ಸ್ ಬಳಿ ಇರುವ ಕಟ್ಟಡದ ಹತ್ತಿರ ಬೈದೆರ್ಲೆ ನೈಸರ್ಗಿಕ ಗಿಡಮೂಲಿಕಾ ಕೇಂದ್ರದ ಶುಭಾರಂಭವು ಜ.24ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಶುಭಕೋರುವಂತೆ ಶ್ರೀಮತಿ ಮತ್ತು ಶ್ರೀ ಸುಧಾಕರ್ ಎಂ. ಪೂಜಾರಿ ಹಾಗೂ ಮಕ್ಕಳು ರೆಂಜಾಳ ಕಾರ್ಕಳ ಅವರು ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ ಬಿ ಫೌಂಡೇಶನ್‌ನ ಎಂ.ಬಿ. ಸದಾಶಿವರವರ ಸಹಯೋಗದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ “ಅರೆಭಾಷೆ ಕಾಮಿಡಿ “(ಹಾಸ್ಯ) ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಫೆ.16ರಂದು ನಡೆಯಲಿದೆ ಈ ಬಗ್ಗೆ ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ




























