ಮಣಿಪಾಲ: ಆಟೋ ಚಾಲಕ ಪ್ರಯಾಣಿಕರು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ ಮೊಬೈಲ್ ಹಾಗೂ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಅ. 19 ರಂದು ಮಣಿಪಾಲದಲ್ಲಿ ನಡೆದಿದೆ.ಆಟೋ ಚಾಲಕರು ಎಂದರೇ ಸ್ವಲ್ಪ ದೂರ ಸಂಚಾರ ಮಾಡಲು ಸಾಕಷ್ಟು ದುಡ್ಡು ಕೇಳುತ್ತಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವುದು ಸಹಜ. ಆದರೆ ಖಾಕಿ ತೊಟ್ಟು ಆಟೋ ಚಾಲನೆ ಮಾಡುವ
ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ಸಮಯದಿಂದ ಸರೋಜಾ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸರೋಜಾ ಸಂಜೀವ್ ಅವರು ಕೊನೆಯುಸಿರೆಳೆದಿದ್ದಾರೆ.
ಇದೇ ಸೋಮವಾರದಿಂದ ವಿಮಾನಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬರುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿನ 3 ಸೇರಿ ಒಟ್ಟು ೩೫ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕಾರಣಕ್ಕೆ ವಿಮಾನಗಳನ್ನು ಬೇರೆಡೆ ತಿರುಗಿಸಿದೆ, ಇಲ್ಲವೇ ತುರ್ತಾಗಿ ಅಲ್ಲೇ ಕೆಳಕ್ಕೆ ಇಳಿಸಲಾಯಿತು. ಕಳೆದ 24 ಗಂಟೆಗಳಲ್ಲಿ ಮೂರು ಪ್ರಮುಖ ವಿಮಾನ ಯಾನಗಳು ತತ್ತರಿಸಿವೆ. ವಿಸ್ತಾರ ಸೇವೆಯ ಲಂಡನ್ ದಿಲ್ಲಿ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ. ಜೈಪುರ ದುಬಾಯಿ, ಬೆಂಗಳೂರು
ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ತನ ಸ್ವಾಸ್ಥ್ಯ ಕೇಂದ್ರ ಆರಂಭಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕೋಲಾಜಿಸ್ಟ್ ಡಾ. ಹರೀಶ್ ಅವರು ಹೇಳಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಕ್ಯಾನ್ಸರ್ ಆರೈಕೆಗಾಗಿ ಅತ್ಯುತ್ತಮ ದರ್ಜೆಯ ಚಿಕಿತ್ಸೆಯನ್ನು
ಉಳ್ಳಾಲ : ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಚಿತ್ರ ತೆಗೀತಾ ಇದ್ದೇನೆ, ಸಿಟಿ ಲೈಫ್ಸ್ ಅನ್ನುವ ಶೀರ್ಷಿಕೆಯಡಿ ನಡೆಸುವ ಚಿತ್ರವನ್ನು ತಾನೇ ನಿರ್ದೇಶಿಸಲಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ರಾತ್ರಿ ಸಂದರ್ಶನಗೈದು
ಉಳ್ಳಾಲ: ಮನೆ ಅಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಪೆಟ್ರೋಲ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಕುಂಪಲ ಸಮೀಪದ ವಿದ್ಯಾನಗರ ಎಂಬಲ್ಲಿ ತಡರಾತ್ರಿ ಸಂಭವಿಸಿದೆ. ಐಟಿಐ ವಿದ್ಯಾರ್ಥಿ ರಾಕೇಶ್ ಎಂಬವರಿಗೆ ಸೇರಿದ ಸ್ಕೂಟರ್ ಬೆಂಕಿಗೆ ಆಹುತಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ಟಿವಿಎಸ್ ಎಂಟಾರ್ಕ್ ಸ್ಕೂಟರನ್ನು ರಾಕೇಶ್ ಖರೀದಿಸಿದ್ದು, ಮೊದಲ ತಿಂಗಳ ಸಾಲದ ಕಂತನ್ನು ಕಟ್ಟಿದ್ದರು. ತಡರಾತ್ರಿ 12.30ರ ಸುಮಾರಿಗೆ ಇದ್ದಕ್ಕಿಂತೆ ಸ್ಕೂಟರ್ ಗೆ ಬೆಂಕಿ ಆವರಿಸಿ, ಬೆಂಕಿಯ
ಪುತ್ತೂರು: ರಾಜ್ಯದಲ್ಲಿ 12ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಅನಧಿಕೃತ ಬಿಪಿಎಲ್ ಕಾರ್ಡ್‌ಗಳೆಂದು ಗುರುತಿಸಲಾಗಿದ್ದು, ಇವುಗಳನ್ನು ರದ್ದು ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ. ಇದರ ವಿರುದ್ಧ ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು. ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರಿಗೆ ಬಂದಿದ್ದ
ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಜಂಟಿ ಆಶ್ರಯದಲ್ಲಿ ಆಧಾರ್ ಸೇವಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು, ಹಳೆಯಂಗಡಿ ಪ್ರಾಯೋಜಕತ್ವದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 17.10.2024ನೇ
ಮಂಗಳೂರು: ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಸಿಸಿಯ ಹಿರಿಯ ಸಮನ್ವಯಕಾರರನ್ನಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆದೇಶಿಸಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಬಿ.ಕೆ. ಹರಿಪ್ರಸಾದ್, ಗೌರವ್ ಗೊಗಾಯ್, ಮೋಹನ್ ಮರ್ಕಮ್ ಅವರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.
ನಾಟೆಕಲ್ : ಬಸ್ -ಕಾರು ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಲ್ಕಟ್ಟ ಸಮೀಪದ ತಿರುವಿನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಆಸೀಫ್ ಕಲ್ಕಟ್ಟ ಇವರ ಬಲಗೈ, ಭುಜದ ಮೂಲೆಗಳು ಮುರಿತಕ್ಕೊಳಗಾಗಿದ್ದರೆ, ಅರಾಫತ್ ಇನೋಳಿ ಎಂಬವರ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ಉಳಿದಂತೆ ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಎನ್ .ಎಸ್ ಟ್ರಾವೆಲ್ಸ್ ಬಸ್ಸು ವಿರುದ್ಧ




























