ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಅವರು ಮತಪ್ರಚಾರ ಮಾಡಿದರು. ಶಿಕ್ಷಕರ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲೆಂದು ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು
ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ಮುಖಂಡನ ಭಾವಚಿತ್ರ ಮುದ್ರಿಸಲ್ಪಟ್ಟಿದೆ! ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ.ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಬದಲು ಬಿಜೆಪಿ
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಅಕ್ರಮ ಮಳಿಗೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಕೊಡುತ್ತೇವೆ. ಇದನ್ನೇಲ್ಲಾ ಕೆಡವಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಯಶ್‌ಪಾಲ್ ಸುವರ್ಣ ಅವರು ತಯಾರಿದ್ದಾರೆಯೇ. ಈ ಬಗ್ಗೆ ಅವರು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಎಸ್.ಡಿ.ಪಿ.ಐ ವಕ್ತಾರ ರಿಯಾಝ್ ಕಡಂಬು ಅವರು ಸವಾಲು ಹಾಕಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಂತವಾಗಿರುವ
ಬಂಟ್ವಾಳ: ಇರ್ವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ ಕುಕ್ಕೆರೋಡಿ ಎಂಬಲ್ಲಿ ಒಣ ಅಡಿಕೆ ಸುಲಿಯುವ ಯಾಂತ್ರೀಕೃತ ಘಟಕ ನಡೆಸುತ್ತಿರುವುದರಿಂದ ಸ್ಥಳೀಯ ಜನವಸತಿ ಪ್ರದೇಶದ ಜನರಿಗೆ ವಿಷಪೂರಿತ ಧೂಳು ಮತ್ತು ಶಬ್ದಮಾಲಿನ್ಯದಿಂದ ಜನರ ಜೀವನಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರಾದ ಜಯಚಂದ್ರ ಪೂಜಾರಿ ಆರೋಪಿಸಿದರು. ಅವರು ಮಂಗಳವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಕುಕ್ಕೆರೋಡಿಯಲ್ಲಿ ಕಳೆದ ಹಲವು ಸಮಯಗಳಿಂದ ಅಡಿಕೆ ಸುಲಿಯುವ ಫ್ಯಾಕ್ಟರಿ
ರೆಮಲ್ ಚಂಡಮಾರುತದ ಕಾರಣದಿಂದಾಗಿ ಮಿಜೋರಾಂ, ಅಸ್ಸಾಂಗಳಲ್ಲೂ ಭಾರೀ ಮಳೆ ಹಾಗೂ ಭೂಕುಸಿತದಿಂದ 31 ಮಂದಿ ಮರಣ ಹೊಂದಿದ್ದಾರೆ. ಮಿಝೋರಾಂನಲ್ಲಿ 27 ಮತ್ತು ಅಸ್ಸಾಂನಲ್ಲಿ ನಾಲ್ವರು ಮೃತರಾಗಿದ್ದಾರೆ. ಐಜ್ವಾಲ್ ಹೊರವಲಯದ ಗಣಿ ಕುಸಿತದಲ್ಲಿ ಹದಿನಾಲ್ಕು ಜನರು ಸತ್ತಿದ್ದಾರೆ. ಲಿಮೆನ್, ಸಲೇ, ಫ್ಯಾಲಗ್, ಬಬಾಲ್ ಮೊದಲಾದ ಕಡೆ 13 ಜನ ಎಂದು 27 ಮಂದಿ ಮರಣಿಸಿದ್ದಾರೆ. ಐಜ್ವಾಲ್ ಗಣಿ ಕುಸಿತದಲ್ಲಿ 12 ಮಂದಿ ನಾಪತ್ತೆಯಾಗಿದ್ದು, ಕುಸಿದ ಮಣ್ಣುಗಳಡಿ ಅವರಿಗಾಗಿ ಹುಡುಕಾಟ
ಪ್ರಧಾನಿ ಮೋದಿಯವರ ಸರಕಾರವು 22 ಮಂದಿ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿ, ಹಿಮಾಚಲ ಪ್ರದೇಶಕ್ಕೆ 9,000 ಕೋಟಿ ರೂಪಾಯಿ ನೆರೆ ಪರಿಹಾರ ನೀಡದೆ ತಾರತಮ್ಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದರು. ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿಯವರು ಪ್ರವಾಹ ಪರಿಹಾರ ನೀಡದೆಯೇ ಮೋದಿಯವರು ನೆರೆ ಪರಿಹಾರ ನೀಡಿದ್ದು ಬೇರೆಯದಕ್ಕೆ ಬಳಕೆ ಮಾಡಿದ್ದಾರೆ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಅಷ್ಟೇ
ಕಾಪುವಿನ ಕ್ರೆಸೆಂಟ್ ಇಂಟರ್ನಾ್ಯಷನಲ್ ಸ್ಕೂಲ್ ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿ ವತಿಯಿಂದ ಪರಿಸರ ಉಳಿಸಿ – ಬೆಳೆಸುವ ಅಭಿಯಾನ ಪ್ರಯುಕ್ತ ಪರಿಸರ ಪ್ರಜ್ಞೆ ಬೆಳೆಸುವುದರ ಜತೆಗೆ ಪ್ರಕೃತಿ ಸಮತೋಲನ ಕಾಯ್ದುಕೊಂಡು ಉತ್ತಮ ಮಳೆ ಬೆಳೆ ಬರಲು ಸಹಾಯವಾಗುವಂತೆ ರಾಜ್ಯಾಧ್ಯಕ್ಷರಾದ ಶೈಖ್ ಅಬ್ದುಲ್ ವಾಹಿದ್ ಉಡುಪಿಯವರ ನೇತೃತ್ವದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕೇಂದ್ರ
ಮಂಗಳೂರಿನ ಹೃದಯ ಭಾಗವಾದ ಎಂ.ಜಿ. ರಸ್ತೆಯಲ್ಲಿ ಮತ್ತೆ ಕೊಳಚೆ ನೀರು ಹರಿಯುತ್ತಿದೆ. ಬೆಸೆಂಟ್ ಕಾoಪ್ಲೇಸ್ನ ಡ್ರೈನೇಜ್ನೀರನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಂ. ಜಿ. ರಸ್ತೆಯಲ್ಲಿ ಡ್ರೈನೇಜ್ ನೀರು ಮತ್ತೆ ಹರಿಯಲಾರಂಬಿಸಿದೆ. ಈ ಹಿಂದೆ ಡ್ರೈನೇಜ್ ನೀರು ಹರಿಯುವ ಬಗ್ಗೆ ವಿ4 ನ್ಯೂಸ್‌ನಲ್ಲಿ ಸಮಗ್ರವಾದ ವರದಿ ಬಿತ್ತಿರಿಸಿ, ಪಾಲಿಕೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ಪೆರುವಾಜೆ ಗ್ರಾಮದ ಸದಸ್ಯರಾದ ಶ್ರೀನಿವಾಸ ನಾಯ್ಕ ಇವರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೇಲ್ಚಾವಣಿಯಿಂದ ಕೆಳಗಡೆ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದು ಮಲಗಿದ ಸ್ಥಿತಿಯಲ್ಲಿರುತ್ತಾರೆ ಇವರಿಗೆ ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ಸಿಗುವಂತಹ ವಾಟರ್ ಬೆಡ್ ನ್ನು ವಿತರಿಸಲಾಗಿದೆ ಈ ಸಂದರ್ಭದಲ್ಲಿ ಶ್ರೀ ಜಲದುರ್ಗ ದೇವಿ ದೇವಸ್ಥಾನ ಪೆರುವಾಜೆ ಮಾಜಿ
ಚಲನಚಿತ್ರೋತ್ಸವದಲ್ಲಿ ಭಾರತದ ಪಾಯಲ್ ಕಪಾಡಿಯಾರ ಕಿರು ಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಚಿತ್ರವು ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ಕಿರುಚಿತ್ರ ವಿಭಾಗದಲ್ಲಿ ಪಾಯಲ್‌ರ ಈ ಚಿತ್ರವು ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಮುಂಬಯಿ ಮೂಲದ ಪಾಯಲ್‌ರಿಗೆ ಕಿರುಚಿತ್ರ ತಯಾರಿಕೆ ಮತ್ತು ಪ್ರಶಸ್ತಿ ಹೊಸತಲ್ಲ. 2021ರ ಕಾನ್ ಚಿತ್ರೋತ್ಸವದಲ್ಲಿ ಅವರ ‘ನೈಟ್ ಆಫ್ ನೋಯಿಂಗ್ ನತಿಂಗ್’ ಗೋಲ್ಡನ್ ಐ ಪ್ರಶಸ್ತಿ ಪಡೆದಿತ್ತು.




























