Home Archive by category Fresh News (Page 282)

ಪುತ್ತೂರು: ವೀರಮಂಗಲ ದಂಡಿ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರು ಅವಭೃಯ ಸ್ನಾನಕ್ಕೆ ತೆರಳುವ ಶಾಂತಿಗೋಡು ಗ್ರಾಮದ ವೀರಮಂಗಲ ದಂಡಿ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ದೇವರು ಅವಭೃತ ಸ್ನಾನಕ್ಕೆ ತೆರಳುವ ರಸ್ತೆಯನ್ನು ಯಾಕೆ ಕಾಂಕ್ರಿಟೀಕರಣ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ಕಳೆದ ಏಳು ವರ್ಷಗಳಿಂದ ಇಲ್ಲಿನವರ

* ಮೂಡುಬಿದಿರೆ: ಶ್ರೀ ರಾಮನ ಮಂದಿರ ನಿರ್ಮಾಣಕ್ಕಾಗಿ ಬೆಳುವಾಯಿಯಲ್ಲಿ ನಿರಂತರ ಬೆಳಗಿದ ನಂದಾದೀಪ

ಮೂಡುಬಿದಿರೆ : ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮನ ಮಂದಿರವು ಯಾವುದೇ ಅಡೆತಡೆಯಿಲ್ಲದೆ ನಿರ್ಮಾಣವಾಗಬೇಕೆಂಬ ಸಂಕಲ್ಪದೊಂದಿಗೆ ಬೆಳುವಾಯಿಯ ಮನೆಯೊಂದರ ದೇವರ ಕೋಣೆಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ “ನಂದಾದೀಪ” ನಿರಂತರ ಬೆಳಗುತ್ತಿದೆ. 2020 ರ ಆಗಸ್ಟ್ 4ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಯಿತು. ಆ ದಿನದಿಂದಲೇ ಬಿಜೆಪಿಯ ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಬೆಳುವಾಯಿ ಮತ್ತು ಅವರ

ಕೋಲ್ಪೆ: ಭರವಸೆಯ ಬೆಳಕು ಸಮಿತಿ ಕಚೇರಿ ಉದ್ಘಾಟನೆ

ನೆಲ್ಯಾಡಿ: ಭರವಸೆಯ ಬೆಳಕು ಸಮಿತಿ ಕೋಲ್ಪೆ ಇದರ ಕಚೇರಿ ಉದ್ಘಾಟನೆ ಕಾರ್ಯಕ್ರಮ ಬಹು ಇರ್ಷಾದ್ ದಾರಿಮಿ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಮುದರ್ರಿಸ್ ಕೋಲ್ಪೆ. ಕೋಲ್ಪೆ ಜಮಾಹತ್ ಅಧ್ಯಕ್ಷರಾದ ಕೆ.ಕೆ ಅಬೂಬಕ್ಕರ್. ಭರವಸೆಯ ಬೆಳಕು ಸಮಿತಿಯ ಅಧ್ಯಕ್ಷರಾದ ಯು.ಕೆ.ಅಬ್ದುಲ್ ಹಮೀದ್. ಕಲಂದರ್ ಷಾ ದಪ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೋಲ್ಪೆ. ಮಿಲೇನಿಯಂ ಬ್ರದರ್ಸ್ ಅಧ್ಯಕ್ಷರಾದ

ಕೊಕ್ಕಡ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಡಿಕೆ, ಬಾಳೆ ಕೃಷಿ ಧ್ವಂಸ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸಮೀಪದ ವಡ್ರಳಿಕೆ ಎಂಬಲ್ಲಿ ಕಾಡಾನೆ ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿದೆ. ರಫಾಯಲ್ ಸ್ಟ್ರೆಲ್ಲಾ ಎಂಬವರ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಅಡಿಕೆ, ಬಾಳೆ ಕೃಷಿಯನ್ನು ಧ್ವಂಸ ಮಾಡಿದ್ದು, ಇದರಿಂದಾಗಿ ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ.ಪದೇ ಪದೇ ಈ ರೀತಿಯ ದಾಳಿಯಿಂದ ಕೃಷಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ, ಕೃಷಿ ನಷ್ಟದ ಬಗ್ಗೆ

*ವಿಟ್ಲ: ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ಶ್ರೀದೇವರ ದರ್ಶನ ಬಲಿಸೇವೆ

ವಿಟ್ಲ: ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ಶ್ರೀ ಕ್ಷೇತ್ರದಲ್ಲಿ ದರ್ಶನ ಬಲಿಸೇವೆಯು ನಡೆಯಿತು. ಜನವರಿ 14 ರಂದು ಧ್ವಜರೋಹಣ ಮೂಲಕ ವರ್ಷಾವಧಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅದೇ ದಿನ ರಾತ್ರಿ ಲಕ್ಷದೀಪೋತ್ಸವ, ಉತ್ಸವ ಬಲಿ, ಪ್ರತಿನಿತ್ಯ ರಾತ್ರಿ ನಿತ್ಯೋತ್ಸವ ನಡೆಯುತ್ತಿದೆ. 18ರಂದು ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮಿಸಿ, ರಾತ್ರಿ ಬಯ್ಯದ ಬಲಿ ನಡೆದಿದೆ. ಜ.20ರಂದು ಹೂತೇರು

ಅಯೋಧ್ಯೆಯಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಮುಖಂಡರು

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದಲ್ಲೂ ರಾಮಮಂದಿರದ ಉದ್ಘಾಟನೆ ಸಂಭ್ರಮ ಮನೆ ಮಾಡಿದೆ. ರಾಮಲಲ್ಲಾ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ಭಾಗಿಯಾಗಲು ಮಂಗಳೂರಿನಿಂದ ಬಿಜೆಪಿಯ ಜಿಲ್ಲಾ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿಯವರೂ ತೆರಳಿದ್ದಾರೆ. ಅವರ ಜೊತೆಗೆ ಡಾ. ಡಿ ವಿರೇಂದ್ರ ಹೆಗ್ಗಡೆ, ಡಾ. ಕಲ್ಲಡ್ಕ ಪ್ರಭಾಕರ್ ಭಟ್, ನಿಟ್ಟೆ ಸಂಸ್ಥೆಯ ವಿಶಾಲ್ ಹೆಗ್ಡೆ, ಎಂ.ಬಿ. ಪುರಾಣಿಕ್ ದಂಪತಿ, ಸೇರಿದಂತೆ ಜಿಲ್ಲೆಯ ಎಲ್ಲಾ

ಮುಂಬೈ: ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ – 2024

ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ 2023-24 ಎಂಬ ಕಾರ್ಯಕ್ರಮವು ಮುಂಬೈನ ಯೂನಿವರ್ಸಿಟಿ ಸ್ಪೋರ್ಟ್ಸ್ ಗ್ರೌಂಡ್ ನ್ಯೂ ಮರೀಸ್ ಲೈನ್ಸ್‌ನಲ್ಲಿ ನಡೆಯಲಿದೆ. ಈ ಕ್ರೀಡೋತ್ಸವವು ಬೆಳಿಗ್ಗೆ 7.30ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಂಬೈ ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಹರಿಕಥಾ

ಚಿನ್ನದ ಗಂಟಿನ ದೇಶಗಳು

ಭಾರತದಲ್ಲಿ 15 ದಿನಗಳಲ್ಲಿ ಚಿನ್ನದ ಬೆಲೆ 1,650 ರೂಪಾಯಿ ಕಡಿಮೆ ಆಗಿದೆ ಎಂಬುದು ಸುದ್ದಿ. ಹಿಂದೆ ಸಾವಿರಗಟ್ಟಲೆ ಏರಿದ್ದು ಹಳಸಿದ ಸುದ್ದಿ. ಇದರ ನಡುವೆ ಫೋರ್ಬ್ಸ್ 2023ರ ಆಧಾರದ ಮೇಲೆ 2024ರಲ್ಲಿ ಲೋಕದ ಸ್ವರ್ಣ ಸಾಮ್ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ಅನ್ನದಾತುರಕಿಂತ ಚಿನ್ನದಾತುರ ಮೇಲೆ, ಅದನ್ನೂ ಮೀರಿಸಿದ್ದು ಹೆಣ್ಣು ಗಂಡೊಲವು, ಅದನ್ನು ಮೀರಿಸುವುದು ಮನ್ನಣೆ ಸನ್ಮಾನದ ತುಡಿತ ಎನ್ನಲಾಗಿದೆ. ಚಿನ್ನದಾತುರವನ್ನು ಪ್ಲಾಟಿನಂ ಕೆಲವೆಡೆ ಮುರಿದಿದೆ. ಹೆಣ್ಣು

ಸುಳ್ಯ: ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ

ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆಗಳ ತರಬೇತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ 2024ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯು ಲಭಿಸಿದೆ. ಸವಣೂರಿನಲ್ಲಿ ನಡೆಯುತ್ತಿರುವ ಯುವಜನ ಮೇಳದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್

ಮಂಗಳೂರು : ಜ.20ರಂದು ರಾಮ ನಾಮಂ ಗೀತೆಯ ಧ್ವನಿ ಸುರುಳಿ, ಚಿತ್ರೀಕರಣದ ಬಿಡುಗಡೆ

ಮಂಗಳೂರು ಉರ್ವಸ್ಟೋರ್‌ನ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್, ಅರ್ಪಿಸುವ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ರಾಮ ನಾಮಂ ಗೀತೆಯ ಧ್ವನಿ ಸುರುಳಿ ಮತ್ತು ಚಿತ್ರೀಕರಣ ಬಿಡುಗಡೆ ಕಾರ್ಯಕ್ರಮವು ಜ.20ರಂದು ರಾತ್ರಿ 8.30ಕ್ಕೆ ಶ್ರೀ ರಾಮ ಭಜನಾ ಮಂದಿರ ಕೊಲ್ಯ ಮತ್ತು ವಿ4 ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಅಮಿತ್ ಕುಮಾರ್ ಬೆಂಗ್ರೆ ಅವರ ಮಾರ್ಗದರ್ಶನದಲ್ಲಿ ರಾಗ ಸಂಯೋಜನೆ ಮತ್ತು ಗಾಯನದಲ್ಲಿ ಪ್ರೀತಮ್ ಕುಮಾರ್ ಕೊಲ್ಯ,