ಮಂಗಳೂರು : ಜ.20ರಂದು ರಾಮ ನಾಮಂ ಗೀತೆಯ ಧ್ವನಿ ಸುರುಳಿ, ಚಿತ್ರೀಕರಣದ ಬಿಡುಗಡೆ

ಮಂಗಳೂರು ಉರ್ವಸ್ಟೋರ್‌ನ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್, ಅರ್ಪಿಸುವ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ರಾಮ ನಾಮಂ ಗೀತೆಯ ಧ್ವನಿ ಸುರುಳಿ ಮತ್ತು ಚಿತ್ರೀಕರಣ ಬಿಡುಗಡೆ ಕಾರ್ಯಕ್ರಮವು ಜ.20ರಂದು ರಾತ್ರಿ 8.30ಕ್ಕೆ ಶ್ರೀ ರಾಮ ಭಜನಾ ಮಂದಿರ ಕೊಲ್ಯ ಮತ್ತು ವಿ4 ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮಿತ್ ಕುಮಾರ್ ಬೆಂಗ್ರೆ ಅವರ ಮಾರ್ಗದರ್ಶನದಲ್ಲಿ ರಾಗ ಸಂಯೋಜನೆ ಮತ್ತು ಗಾಯನದಲ್ಲಿ ಪ್ರೀತಮ್ ಕುಮಾರ್ ಕೊಲ್ಯ, ಸಾಹಿತ್ಯದಲ್ಲಿ ಪೂರ್ಣಿಮ ಪ್ರೀತಮ್ ಕೊಲ್ಯ, ಸಂಗೀತ ನಿರ್ದೇಶನ ಉಸ್ತಾದ್ ರಫೀಕ್ ಖಾನ್, ತಬಲದಲ್ಲಿ ಶ್ರೀದತ್ ಪ್ರಭು, ಕೊಳಲು ವರುಣ್ ರಾವ್, ಕ್ಯಾಡ್ ಮೀಡಿಯಾ ಶಿನೋಯ್ ವಿ ಜೋಸೆಫ್ ಅವರು ಸಹಕರಿಸಿದ್ದಾರೆ.
ಇನ್ನುಳಿದಂತೆ ಮಹಿಮ್ ಶ್ರೀರಾಮ್, ನಿಧಿ, ಮೌಲ್ಯ, ಸಾಕ್ಷಿ, ಆಶ್ನಿ, ರಿದ್ಯಾ, ತನಿಷಾ ತ್ವಿಷಾ ಅವರು ಹಿನ್ನಲೆ ಗಾಯನದಲ್ಲಿ ಸಹಕರಿಸಿದ್ದು, ರಾಮ ನಾಮಂ ಅದ್ಭುತವಾಗಿ ಮೂಡಿಬಂದಿದೆ. ಇಂದು ಅಂದರೆ ಜನವರಿ 20ರಂದು ರಾತ್ರಿ 8.30ಕ್ಕೆ ವಿ4 ನ್ಯೂಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆಗೊಳ್ಳಲಿದೆ.
