Home Archive by category Fresh News (Page 610)

ಉಳ್ಳಾಲ ಸೈಯದ್ ಮದನಿ ದರ್ಗಾಕ್ಕೆ ಡಾ. ಜಿ. ಪರಮೇಶ್ವರ್ ಭೇಟಿ

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಇತಿಹಾಸ ಪ್ರಸಿದ್ಧ ಉಳ್ಳಾಲ ಸೈಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿದರು. ಮಂಗಳೂರು ದಕ್ಷಿಣ  ಮಾಜಿ ಶಾಸಕ ಜೆ.ಆರ್ ಲೋಬೊ, ಕೆಪಿಸಿಸಿಯ ಪ್ರೊ. ರಾಧಾಕೃಷ್ಣ , ಕೆಪಿಸಿಸಿ ಸೆಕ್ರೆಟರಿಗಳಾದ ಹುಸೈನ್ , ಜಿ.ಎ.ಬಾವಾ, ಟಿ.ಕೆ ಸುಧೀರ್, ಡಾ.ಅಭಿಲಾಷ್ ಕೂಡ ಭೇಟಿ ನೀಡಿದ್ದು, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಳವು ಪ್ರಕರಣದ ಆರೋಪಿಯ  ಬಂಧನ

ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಇರುವ ಮಾರಿಗುಡಿಗೆ ನುಗ್ಗಿ ಗದ್ದುಗೆ ಮಂಟಪದಲ್ಲಿದ್ದ ಮೂರು ಕಾಣಿಕೆ ಡಬ್ಬಗಳನ್ನು ಕಳವುಗೈದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.  ಹೆಜಮಾಡಿಯ ಕೊಕ್ರಾಣಿ ಗ್ರಾಮದ ಕಕ್ವಾ ನಿವಾಸಿ ವಿಜಯ ಯಾನೆ ಕೊಕ್ರಾಣಿ ವಿಜಯ್ ಬಂಧಿತ ಆರೋಪಿ. ಈತ ಜ.15ರಂದು ರಾತ್ರಿ ಮೂಡುಬಿದಿರೆಯ ಮಾರಿಗುಡಿಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದ ಈ ಬಗ್ಗೆ ಮೂಡುಬಿದಿರೆ

ಪೊಲೀಸರ ಕೊಲೆ ಯತ್ನ-ಐವರು ಅಪಹರಣಕಾರರು ಸಿನಿಮೀಯ ಮಾದರಿಯಲ್ಲಿ ಸೆರೆ

ಮಂಗಳೂರಿನಲ್ಲಿ ಸಿನಿಮಾ ರೀತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣವೊಂದನ್ನು ಪೊಲೀಸರೂ ಅದೇ ಸ್ಟೈಲ್ ನಲ್ಲಿ ಭೇದಿಸಿದ್ದಾರೆ.ಹಣಕ್ಕಾಗಿ ಇಬ್ಬರನ್ನು ಕಿಡ್ನಾಪ್ ಮಾಡಿ ಡೀಲ್ ಕುದುರಿಸಿದ್ದ ಅಪಹರಣಕಾರರು ದಾರಿ ಮಧ್ಯೆಯೇ ಪೊಲೀಸ್ ಬಲೆಗೆ ಬಿದ್ದಿದ್ದಾರೆ.ಗೋಲ್ಡ್ ಬಿಸ್ಕೇಟ್ ಹಾಗೂ ಹಣ ದೋಚಲು ಯತ್ನಿಸಿದ ಖದೀಮರು ಇದೀಗ ಜೈಲು ಕಂಬಿ ಎಣಿಸಿತ್ತಿದ್ದಾರೆ. ಹಣಕ್ಕಾಗಿ ಜನ ಏನು ಬೇಕಾದ್ರು ಮಾಡ್ತಾರೆ ಅನ್ನೋದು ಆಗ್ಗಾಗ್ಗೆ ಸಾಬೀತಾಗುತ್ತಿದೆ. ಮಂಗಳೂರಿನಲ್ಲಿ ಇದೇ ರೀತಿ ಹಣದ ಆಸೆಗೆ

ಗಣರಾಜ್ಯೋತ್ಸವ ಪರೇಡ್‌: ನೌಕಾಪಡೆ ತಂಡಕ್ಕೆ ಮಂಗಳೂರಿನ ದಿಶಾ ಅಮೃತ್‌ ನೇತೃತ್ವ

 ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ಮಂಗಳೂರಿನ ದಿಶಾ ಅಮೃತ್‌ ಅವರು ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸುವರು. ಈ ತುಕಡಿಯಲ್ಲಿ ನೌಕಾಪಡೆಯ 144 ಯುವ ಯೋಧರು ಮತ್ತು “ನಾರಿಶಕ್ತಿ’ ಸ್ತಬ್ಧಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರರು ಭಾಗಿಯಾ ಗುವರು. ಅಮೃತಾ ಅವರ ಜತೆಗೆ ಸಬ್‌ ಲೆ| ವಲ್ಲಿ ಮೀನಾ ಎಸ್‌. ಸಹ ಇರುವರು.

ರಾಜ್ಯವನ್ನು ಚೋರ ಗುರು ಶಿಷ್ಯರು ಆಳುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸುರತ್ಕಲ್: “ರಾಜ್ಯದಲ್ಲಿ ಬಿಜೆಪಿ ಸರಕಾರ ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಕಂಟ್ರಾಕ್ಟರ್ ಅಸೋಷಿಯೇಷನ್ ಶಾಸಕರು 40% ಕಮಿಷನ್ ತಗೊಳ್ಳೋದನ್ನು ಒಪ್ಪಿಕೊಂಡಿದೆ. ಇವರದ್ದು ಬರೀ ಸುಳ್ಳುಗಳ ಸರಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಳ್ತಾ ಇದ್ದಾರೆ. ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ”

ಮಂಗಳೂರಿನಲ್ಲಿ ಹೊಚ್ಚ ಹೊಸ ಶೋರೂಂ ಆಗಿ ಕಂಗೊಳಿಸುತ್ತಿರುವ ಜೋಸ್ ಆಲುಕ್ಕಾಸ್

ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹೆಸರಾಂತ ಜ್ಯುವೆಲ್ಲರಿ ಗ್ರೂಪ್ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ನವೀಕೃತಗೊಂಡಿದ್ದು, ಹೊಚ್ಚ ಹೊಸ ಶೋರೂಂನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೋಸ್ ಆಲುಕ್ಕಾಸ್ ಬ್ರ್ಯಾಂಡ್ ಕಳೆದ 58 ವರ್ಷಗಳಿಂದ ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥಕವಾಗಿದೆ. ವಿಶಿಷ್ಠವಾದ ಕಾರ್ಯಾಚರಣೆ ವ್ಯವಸ್ಥೆ ಮತ್ತು ದೂರದೃಷ್ಟಿಯೊಂದಿಗೆ ಈ ಬ್ರ್ಯಾಂಡ್ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ಬಲವಾದ ಪರಂಪರೆಯನ್ನು ಸ್ಥಾಪಿಸಿದೆ. ಇದೀಗ ಮಂಗಳೂರು

ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ

ಕಾಂಚನ ಸಮೂಹ ಸಂಸ್ಥೆಯ ಉಡುಪಿಯ ಕಡಿಯಾಳಿ ಶೋರೂಮ್‍ನಲ್ಲಿ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಉಡುಪಿಯ ಕಡಿಯಾಳಿ ಕಾಂಚನ ಸಮೂಹ ಸಂಸ್ಥೆಯ ಶೋರೂಂನಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಬಿಗ್‍ಬಾಸ್ ಸೀಸನ್ 9ರ ವಿಜೇತ, ನಟ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಅವರು ನೂತನ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ

ಕುಂಜತ್ತೂರು : ಪೊಲೀಸರಿಂದ ವಿದ್ಯಾರ್ಥಿಗಳಿಗೆ ಸಂರಕ್ಷಣೆಯ ಪಾಠ

ಮಂಜೇಶ್ವರ: ಕುಂಜತ್ತೂರು ಮಹಾಲಿಂಗೇಶ್ವರ ವಿದ್ಯಾನಿಕೇತನ ವಿದ್ಯಾರ್ಥಿಗಳು ಮಂಜೇಶ್ವರ ಪೆÇಲೀಸ್ ಠಾಣೆಗೆ ಬೇಟಿ ನೀಡಿ ಎಸ್‍ಐ ಸುಮೇಶ್ ಹಾಗೂ ಸಜಿಮನ್ ರವರೊಂದಿಗೆ ಸ್ವಯಂ ರಕ್ಷಣೆ ಕುರಿತಂತೆ ಪಾಠ ಕಲಿತರು. ವಿದ್ಯಾರ್ಥಿಗಳ ಪ್ರತಿಯೊಂದು ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಉತ್ತರವನ್ನು ನೀಡಿದ ಠಾಣೆ ಎಸ್.ಐ ಸುಮೇಶ್ ಹಾಗೂ ಸಜಿಮನ್ , ವಿದ್ಯಾರ್ಥಿನೀಯರ ಮೇಲೆ ಅತ್ಯಾಚಾರ,ಬಲತ್ಕಾರಗಳು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಉದಾಹರಣೆಗಳಿದ್ದು ಇವುಗಳನ್ನು ತಡೆಯಲು

2022ನೇ ಸಾಲಿನ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರಕಟ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖಿಲ ಭಾರತ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ 2022 ಪುರುಷ ಮತ್ತು ಮಹಿಳಾ ಈ ಎರಡು ವಿಭಾಗಗಳಲ್ಲಿ ಪ್ರಕಟವಾಗಿವೆ.ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಸೇವೆಗೈಯುವ ಕೊಂಕಣಿ ಭಾಷಿಕರನ್ನು ಗುರುತಿಸಿ ಗೌರವಿಸುವ ಈ ಪುರಸ್ಕಾರವನ್ನು 2014ರಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈಯವರ 80ನೇ ಜನ್ಮದಿನದಂದು ದಾನಿ ಟಿ.ವಿ. ಮೋಹನದಾಸ ಪೈ

ಶಂಕುಸ್ಥಾಪನೆಗೊಂಡು ಸ್ತಬ್ಧಗೊಂಡಿದ್ದ ಹಾರಾಡಿ ಕ್ರಾಸ್ ರೈಲು ನಿಲ್ದಾಣ ರಸ್ತೆ ಮತ್ತೆ ಆರಂಭಗೊಂಡ ಕಾಮಗಾರಿ

ಪುತ್ತೂರು: ಕಳೆದ ನವೆಂಬರ್ 2ರಂದು ಶಂಕುಸ್ಥಾಪನೆಗೊಂಡ ಬಳಿಕ ಎರಡೂವರೆ ತಿಂಗಳು ಸ್ತಬ್ದಗೊಂಡಿದ್ದ ಹಾರಾಡಿ ಕ್ರಾಸ್- ರೈಲು ನಿಲ್ದಾಣ ರಸ್ತೆಯ ಅಭಿವೃದ್ಧಿ ಕಾಮಗಾರಿ ಇದೀಗ ಚಾಲನೆ ಪಡೆದುಕೊಳ್ಳುತ್ತಿದೆ. ಶುಕ್ರವಾರ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ಅಧಿಕಾರಿಗಳ ತಂಡ ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸಿತು. ಕೆಲಸ ಆರಂಭಗೊಳ್ಳುತ್ತಿದೆ ಎಂದು ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು. ನ.2ರಂದು ಶಂಕುಸ್ಥಾಪನೆಯಾದ ಬೆನ್ನಲ್ಲೇ ಕೆಲಸ ಆರಂಭಗೊಳ್ಳಬೇಕಿತ್ತು.