ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳ ಆಹ್ವಾನ ಮಂಗಳೂರು; ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ ವಾಚಕಿಯರ ಸಂಘವು 2022-23ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದೆ. ನವೆಂಬರ್ 10ರೊಳಗೆ ಕೃತಿಗಳನ್ನು ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ. 1) ರಾಜ್ಯ ಮಟ್ಟದ `ಸಾರಾ’ ದತ್ತಿ
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಯೂನಿಟ್ ಉದ್ಘಾಟನೆಯ ಅಂಗವಾಗಿ ನಗರದ ಯೆಯ್ಯಾಡಿ ಕೊಂಚಾಡಿಯಲ್ಲಿಂದು ಕರ್ಣಾಟಕ ಬ್ಯಾಂಕ್‍ನ ಡಿಜಿಟಲ್ ಬ್ಯಾಂಕ್ ಘಟಕ ಉದ್ಘಾಟನೆಗೊಂಡಿತು. ನೂತನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಹೊಸದಿಲ್ಲಿಯ ಹಣಕಾಸು ಸಚಿವಾಲಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಜೊತೆ
ವಿಶ್ವ ತುಳು ಲಿಪಿ ದಿನದ ಅಂಗವಾಗಿ ನಗರದ ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಮುಂಭಾಗದಲ್ಲಿ ‘ತುಳು ದಿಬ್ಬಣ’ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮಾತನಾಡಿ, ಇಂದು ನಾವು ಮಲಯಾಳಂಗೆ ತುಳುಲಿಪಿಯನ್ನು ಮಾರುವ ಕಾಲ ಬಂದಿದೆ. ಆದರೆ, ಮಲಯಾಳಂಗೆ ಲಿಪಿಯನ್ನು ನೀಡಿರುವ ಭಾಷೆ ತುಳು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಮಂಗಳೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದರೆ ದೀಪಾವಳಿ ಸಂದರ್ಭದಲ್ಲಿ ಅಬ್ಬರದ ಪಟಾಕಿಗಳದ್ದೇ ಕಾರುಬಾರು. ಆದರೆ ಈ ಬಾರಿಯ ದೀಪಾವಳಿಗೆ ಸದ್ದೇ ಮಾಡದ, ಪರಿಸರಕ್ಕೆ ಹಾನಿಯಾಗದ ಪಟಾಕಿಗಳು ಮಾರುಕಟ್ಟೆಗೆ ಬಂದಿದೆ. ಈ ಪರಿಸರಸ್ನೇಹಿ ಪಟಾಕಿ ಹೇಗಿರುತ್ತೆ ಗೊತ್ತಾ ಈ ಸ್ಟೋರಿ ನೋಡಿ ಇದು ಈ ಬಾರಿಯ ದೀಪಾವಳಿಗೆ ಮಾರುಕಟ್ಟೆಗೆ ಬಂದಿರುವ ಪರಿಸರ ಸ್ನೇಹೀ ಪಟಾಕಿಗಳು. ಇಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಎಲ್ಲಾ ಪಟಾಕಿಗಳೂ
ಬೈಂದೂರು :ಯು.ಎ.ಇ.ಯಲ್ಲಿ ನಡೆದ ಅಂತಾರಾಷ್ಟ್ರೀಯ ಕಿವುಡರ ಟಿ-20 ಕ್ರಿಕೆಟ್ 2022ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿದ ಕಿವುಡರ ಭಾರತ ಕ್ರಿಕೆಟ್ ತಂಡದ ಸದಸ್ಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಹುಂಚನಿ ಚಿಕ್ಕ ಹಳ್ಳಿಯ ಪ್ರತಿಭೆ ಪ್ರಥ್ವಿರಾಜ್ ಶೆಟ್ಟಿ ಯವರನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ವೃತ್ತದಿಂದ ಬೈಂದೂರು ತಾಲೂಕಿನ ಗೋಳಿ ಹೊಳೆ ಗ್ರಾಮದ ವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು, ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ
ಪಚ್ಚನಾಡಿ, ಕಾವೂರು, ಕದ್ರಿಪದವು, ದೇರೆಬೈಲು, ತಿರುವೈಲ್, ಕುಡುಪು ಸೇರಿಸಿ 6 ವಾರ್ಡ್ ಗಳ ನಾಗರಿಕರಿಗಾಗಿ ಸರಕಾರಿ ಸೇವಾ ಸೌಲಭ್ಯಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. 1200 ರಷ್ಟು ನಾಗರಿಕರು ಭಾಗವಹಿಸಿದ, 30 ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಾಹನ, ಸರಕಾರದ ಹಲವು ಯೋಜನೆಗಳ ಸಹಾಯಧನದ ಚೆಕ್
ಮಂಗಳೂರು, ಅ. 17: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ದ ಅಕ್ಟೋಬರ್ 18 ರಂದು ನಡೆಯುವ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಹೋರಾಟಗಾರರಿಗೆ ಪೊಲೀಸ್ ನೋಟೀಸ್ ಜಾರಿಗೊಳಿಸಿ ಬೆದರಿಸುವ ತಂತ್ರಗಳಿಗೆ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ಸಿಪಿಐಎಂ ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಇಂದು 17-10-2022 ನಗರದ ಮಿನಿವಿಧಾನ ಸೌಧದ ಮುಂಭಾಗ ಸಮಾನ ಮನಸ್ಕ ಸಂಘಟನೆಗಳಿಂದ ಪೊಲೀಸರ ಕ್ರಮವನ್ನು ಖಂಡಿಸಿ , ನ್ಯಾಯಯುತ ಹೋರಾಟವನ್ನು
ವಿಟ್ಲ: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ನೇರಳಟ್ಟೆ ಸಮೀಪ ವ್ಯಕ್ತಿಯೊಬ್ಬರು ಬಿದ್ದು ತೀವ್ರ ಗಾಯಗೊಂಡ ಮತ್ತು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲೆಂದು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆತಂದಾಗ ದಾರಿ ಮಧ್ಯೆ ಮೃತಪಟ್ಟ ಘಟನೆ ಅ.16ರಂದು ರಾತ್ರಿ ನಡೆದಿದೆ. ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೈಲು ನೇರಳಕಟ್ಟೆ ಸಮೀಪ ನಿಧಾನವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ರೈಲ್ವೇ ಹಳಿಗೆ
ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೋಯ್ಯದಿದ್ದಾರೆ. ಹೆದ್ದಾರಿ ಪಕ್ಕದ ಬಾಡಿಗೆ ರೂಮ್‌ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್‌ಗೆ ಬೀಗ ಹಾಕಿ ಊರಿಗೆ ಹೋಗಿದ್ದು, ಭಾನುವಾರ ಮುಂಜಾನೆ ೫-೩೦ರ ಸುಮಾರಿಗೆ ರೂಮ್ ಕಡೆಗೆ ಬಂದಾಗ ಮಂದ ಬೆಳಕಿನಲ್ಲಿ ಮನೆಮಂದೆ ವ್ಯಕ್ತಿಯೊಬ್ಬರು ನಿಂತಿದ್ದು
ಮಂಗಳೂರು: ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕುಡ್ಲ ರನ್ ಮ್ಯಾರಥಾನ್ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯಿತು. ಕುಡ್ಲ ರನ್‌ಗೆ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಕಾರ್ಡಿಯೋಲಜಿಸ್ಟ್ ಡಾ. ಪುರುಷೋತ್ತಮ್, ಕಾರ್ಡಿಯೋಲಜಿಸ್ಟ್ ಡಾ. ಮಂಜುನಾಥ್ ಬಿ ವಿ, ಕಾರ್ಡಿಯೋ ತೆರಪಿ ಸರ್ಜರಿ ಡಾ. ಜಯಶಂಕರ್ ಮಾರ್ಲ ಸೇರಿ ಚಾಲನೆ ನೀಡಿದರು.




























