Home Archive by category Fresh News (Page 796)

ಬಂಟ್ವಾಳದ ಮುಕ್ಕುಡದಲ್ಲಿ ಮತ್ತೆ ಭೂಕುಸಿತ

ಬಂಟ್ವಾಳ: ಇತ್ತಿಚೆಗೆ ಭೂ ಕುಸಿತ ಉಂಟಾಗಿ 3 ಮಂದಿ ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮೃತಪಟ್ಟ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ಹೆನ್ರಿ ಕಾರ್ಲೋ ಅವರ ಮನೆಗೆ ಇದ್ದ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಇತ್ತೀಚೆಗೆ ಭೂ ಕುಸಿತ ಆದ ಸಂದರ್ಭ ಗುಡ್ಡ ಬಿರುಕು ಬಿಟ್ಟಿತ್ತು. ಭಾರಿ ಮಳೆಗೆ ಮಣ್ಣು ಮೆದುಗೊಂಡು

ವಿಪರೀತ ಮಳೆಯಿಂದಾಗಿ ಮನೆಕುಸಿತ : ಬೀದಿಪಾಲಾಗುವ ಪರಿಸ್ಥಿತಿಯಲ್ಲಿ ಬಡ ಕುಟುಂಬ

ಪುತ್ತೂರು : ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮಂಜಲ್ಪಡ್ಪು ಜನತಾ ಕಾಲೋನಿಯ ನಿವಾಸಿ ವಸಂತ ಹೆಗ್ಡೆ ಅವರ ಮನೆ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಈ ಬಡ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸಂತ ಅವರ ತಾಯಿ ಅನಾರೋಗ್ಯ ಮತ್ತು ಮಾನಸಿಕ ಪೀಡಿತರಾಗಿದ್ದು, ವಸಂತ ಅವರು ಕೂಲಿ ಕೆಲಸ ಮಾಡಿಕೊಂಡು ಸಂಸಾರದ ನಿರ್ವಹಣೆ ಮಾಡುತ್ತಿದ್ದರು, ಹಂಚು, ಸಿಮೆಂಟು ಶೀಟು ಅಳವಡಿಕೆಯೊಂದಿಗೆ ಸ್ವಲ್ಪಭಾಗ ತಾರಸಿ ಮಾಡಿರುವ ವಸಂತ ಹೆಗ್ಡೆ ಅವರ ಮನೆಯ

ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ: ಅಪಾಯ ಸ್ಥಿತಿಯಲ್ಲಿದೆ ಹತ್ತಕ್ಕೂ ಅಧಿಕ ಮನೆಗಳು

• ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ವಿಚಾರ • ಮಂಗಳೂರಿನಲ್ಲಿ ಮಳೆ ಅನಾಹುತದ ನಡುವೆ ಹೆಚ್ಚಾದ ಕಡಲ್ಕೊರೆತ • ಮಂಗಳೂರಿನ ಬೈಕಂಪಾಡಿ, ಮೀನಕಳಿಯ ಭಾಗದಲ್ಲಿ ಕಡಲ್ಕೊರೆತ • ಕಡಲ್ಕೊರೆತದ ತೀವ್ರತೆಗೆ ಮೀನುಗಾರರ ಹರಾಜು ಕೇಂದ್ರ ಸಮುದ್ರ ಪಾಲು • ಭಾರೀ ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಹರಾಜು ಕೇಂದ್ರ • ಕಾಂಕ್ರೀಟ್ ರಸ್ತೆಯ ಅಡಿಭಾಗವನ್ನೇ ಕೊಚ್ಚಿಕೊಂಡು ಹೋಗಿರೋ ಅಲೆಗಳು • ಮತ್ತಷ್ಟು ಅಲೆಯ ಅಬ್ಬರ ಹೆಚ್ಚಾದ್ರೆ ಇಡೀ ಕಾಂಕ್ರೀಟ್ ರಸ್ತೆ

ನಳಿನ್ ಕುಮಾರ್ ಮಹಾ ಜಾತಿವಾದಿ : ಸತ್ಯಜಿತ್ ಸುರತ್ಕಲ್ ಆರೋಪ

ನಾರಾಯಣ ಗುರು ನಿಗಮ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟ ವಿಚಾರ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಬಿಲ್ಲವ ಸಮುದಾಯವನ್ನು ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ಸ್ಥಳೀಯ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅವರನ್ನು ಕೇಳಿದರೆ, ಸಿಎಂ ನಮ್ಮ ಮಾತು ಕೇಳುತ್ತಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಅವರಿಗೆ . ಹೇಳಿದ್ದೇನೆ ಆದರೆ ಸ್ಪಂದನೆ

ಪುತ್ತೂರು : ಓಮ್ನಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ , ದ್ವಿಚಕ್ರ ವಾಹನ ಸವಾರನಿಗೆ ಗಾಯ

ಪುತ್ತೂರು ತಾಲ್ಲೂಕು ಬಪ್ಪಳಿಗೆಯ ಬಲ್ನಾಡ್ ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಅಪಘಾತ- ಆಕ್ಟಿವಾ ಸವಾರನಿಗೆ ಗಾಯ.ಪುತ್ತೂರು ತಾಲೂಕಿನ ಬಪ್ಪಳಿಗೆಯ ಬಲ್ನಾಡ್ ಸಂಪರ್ಕ ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಬಲ್ನಾಡ್ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು, ಪುತ್ತೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ಒಂದನ್ನು ಹಿಂದಿಕ್ಕುವ ಭರದಲ್ಲಿದ್ದ ಆಕ್ಟಿವಾಗೆ ದಿಕ್ಕಿಯಾಗಿದೆ. ಘಟನೆಯಿಂದ

ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿ , ಪುತ್ತೂರಿನ ನಗರಸಭೆಯ ವಾರ್ಡ್ ಸದಸ್ಯರು ಸಹಕಾರ ನೀಡಬೇಕು : ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ

ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದ್ದಾರೆ. ಜು.1 ರಿಂದಲೇ ಇದರ ಅನುಷ್ಠಾನಕ್ಕೆ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಾಗೃತಿ ಹಾಗೂ ಪಾಲನೆಯಲ್ಲಿ ನಗರಸಭೆಯ ಎಲ್ಲಾ ವಾರ್ಡಗಳ ಸದಸ್ಯರು ಸಹಕಾರ ನೀಡಬೇಕು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ ಮಾಡಿದ್ದಾರೆ. ನಗರಸಭಾ ಸಾಮಾನ್ಯ ಸಭೆಯು ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. 2016ರಲ್ಲಿ ಏಕ ಬಳಕೆ

ಬಂಟ್ವಾಳದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಅವಲೋಕನ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ ನೀಡಿದ ಶಾಸಕರು

ಬಂಟ್ವಾಳ : ಕ್ಷೇತ್ರದ 39 ಗ್ರಾ.ಪಂ.ನ ಪಿಡಿಒ, ಗ್ರಾಮಕರಣಿಕರು, ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ತಮ್ಮ ಬಿ.ಸಿ.ರೋಡಿನ ಕಚೇರಿಯಿಂದ ತಹಶೀಲ್ದಾರ್, ತಾ.ಪಂ.ಇಒ ಹಾಗು ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೂಗೂಲ್ ಮೀಟ್ ಮೂಲಕ ಸಂವಾದ ನಡೆಸಿದರು. ಗ್ರಾ.ಪಂ.ವ್ಯಾಪ್ತಿಯಲ್ಲಿರುವ ವಿವಿಧ ಸಮಸ್ಯೆಯನ್ನು ಆಲಿಸಿದ ಶಾಸಕರು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಇಒ ರಾಜಣ್ಣ ಅವರು ಪರಿಹಾರದ ನಿಟ್ಟಿನಲ್ಲಿ ಸೂಕ್ತ ಸಲಹೆ,

ಮಳೆಯಿಂದಾಗಿ ಪೆರುವಾಜೆಯ ನಾಗನಮಜಲಿನಲ್ಲಿ ರಸ್ತೆಯಲ್ಲಿ ಬಿರುಕು : ಪೆರುವಾಜೆ ಗ್ರಾಮದ ನೋಡೆಲ್ ಅಫೀಸರ್‍ಗಳು ಭೇಟಿ, ಪರಿಶೀಲನೆ

ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಮೂರನೆಯ ವಾರ್ಡಿನ ನಾಗನ ಮಜಲು ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ವರದಿಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಶ್ರೀಮತಿ ಅನಿತಾ ಲಕ್ಷ್ಮಿ ಆದೇಶದ ಮೇರೆಗೆ ಪೆರುವಾಜೆ ಗ್ರಾಮದ ನೋಡಲ್ ಆಫೀಸರ್ ಗಳಾದ ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಹಾಗೂ ಮೆಸ್ಕಾಂ ಅಧಿಕಾರಿ ಪ್ರಸಾದ್ ಕೆ.ವಿ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ