Home Archive by category karavali (Page 42)

ರಿವೋಲ್ಟ್ ಕಂಪನಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಲಗ್ಗೆ

ದ್ವಿಚಕ್ರ ವಾಹನಗಳ ಮಾರಾಟ ಕ್ಷೇತ್ರದಲ್ಲಿ ಗ್ರಾಹಕರ ಮನ ಗೆದ್ದಿರುವ ಮಂಗಳೂರಿನ ವೆಸ್ಟ್ ಕೋಸ್ಟ್ ಶೋ ರೂಮ್ ನ ಸಹಬಾಗಿತ್ವದಲ್ಲಿ ಮಂಗಳೂರಿನಲ್ಲಿ ರಿವೋಲ್ಟ್ ಕಂಪನಿಯ ಎಲೆಕ್ಟಿಕಲ್ ಬೈಕ್ ಶೋರೂಮ್ ಶುಭರಂಭಗೊಳ್ಳಲಿದೆ.ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಪ್ರತಿದಿನ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದೆ.

ಬಂಟ್ವಾಳ : ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋ ಪೂಜಾ ಕಾರ್ಯಕ್ರಮ

ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ ಬಂಟ್ವಾಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಇದರ ವತಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಗೋ ಪೂಜೆ ಬಡಗ ಕಾಜೆಕಾರ್ ಗ್ರಾಮದ ಸುಧಾಕರ್ ಶಣೈ ಖಂಡಿಗ ಇವರ ಮನೆಯಲ್ಲಿ ನಡೆಯಿತು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶಣೈ,ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಸ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಪಾಣೆ ಮoಗಳೂರು ಬ್ಲಾಕ್ ಕಾಂಗ್ರೆಸ್

ದಕ್ಷಿಣ ಕನ್ನಡ : ತುಳು ನಾಟಕೋತ್ಸವದ ಆಮಂತ್ರಣ ಪ್ರತಿಕೆ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಘಟಕದ ತುಳುನಾಟಕ ಕಲಾವಿದರ ಒಕ್ಕೂಟ ವತಿಯಿಂದ ಅ.29ರಿಂದ ನ.04ರವರೆಗೆ ಸ್ಪರ್ಶಾ ಕಲಾಮಂದಿರದಲ್ಲಿ ತುಳು ನಾಟಕೋತ್ಸವ-2022 ನಡೆಯಲಿದ್ದು, ಇದರ ಆಮಂತ್ರಣ ಪ್ರತಿಕೆಯನ್ನು ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ, ಶುಭಾ ಹಾರೈಸಿದ್ರು. ಈ ವೇಳೆ ಬಂಟ್ವಾಳ ಸಂಚಾಲಕರಾದ ಸುಭಾಶ್ಚಂದ್ರ ಜೈನ್, ಸಮಿತಿ ಸದಸ್ಯರಾದ ಮಂಜುವಿಟ್ಲ, ದಿವಾಕರದಾಸ್, ಸಂಪತ್ ಬಿ.ಆರ್. ಅಂಚನ್ ಶಶಿಧರ್

ಮಂಗಳೂರು: ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನಕ್ಕೆ ಚಾಲನೆ

ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಮಂಗಳೂರಲ್ಲಿ ಚಾಲನೆ ಸಿಕ್ಕಿತ್ತು. ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಇರುವ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ಆವರಣದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಡಾ|ಧರ್ಮಪಾಲನಾ ಸ್ವಾಮೀಜಿ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಇಂತಹ ಒಂದು ಕಾರ್ಯಕ್ರಮ ಮಾಡ್ತಿರೋದು

ಬೀಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನ-ದುರ್ಗಾಪರಾಮೇಶ್ವರ ಮಂಡಳಿ ಶಿವಪುರ ಕುಂಪಲ ಭಜನಾ ಸಂಕೀರ್ತನೆ 

ಮಂಗಳೂರಿನ ಬೀಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನ ಅದ್ಯಪಾಡಿಯಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಬಿಬಿಲಚ್ಚಿಲ್ ನಲ್ಲಿ ನಡೆಯುತ್ತಿರುವ 108 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆಯು ಜರಗುತ್ತಿದ್ದೂ ನಿನ್ನೆ ಶ್ರೀ ದುರ್ಗಾಪರಾಮೇಶ್ವರ ಮಂಡಳಿ ಶಿವಪುರ ಕುಂಪಲ. ಇವರಿಂದ ಭಜನಾ ಸೇವೆ ನಡೆಯಿತು.

ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ವಿಚಾರವಾಗಿ ಗಡಿನಾಡ ಕನ್ನಡಿಗರು ಗರಂ

ಮಂಜೇಶ್ವರ: ತಲಪಾಡಿ ಟೋಲ್ ಗೇಟಿನಲ್ಲಿ ಕರ್ನಾಟಕದ 5 ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿಯನ್ನು ನೀಡಿದ ರೀತಿಯಲ್ಲಿ ಗಡಿನಾಡ ಕನ್ನಡಿಗರು ವಾಸವಾಗಿರುವ ಕೇರಳದ 5 ಕಿ.ಲೋ. ಮೀಟರ್ ವ್ಯಾಪ್ತಿಯಲ್ಲಿರುವವರಿಗೂ ಉಚಿತ ಪ್ರಯಾಣಕ್ಕೆ ಅನುಮತಿ ಕೋರಿ ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷರು ಎಲ್ಲಾ ಸದಸ್ಯರು ಹಾಗೂ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಸಂಘಟನಾ ಕಾರ್ಯಕರ್ತತರು ವಿವಿಧ ರಾಜಕೀಯ ಪಕ್ಷಗಳ ನೇತಾರರು ಜೊತೆಯಾಗಿ ತಲಪಾಡಿ ಟೋಲ್ ಗೇಟಿಗೆ ತೆರಳಿ

ಮೂಡಬಿದ್ರೆ : ತುಳುನಾಡ ಕೊಡಿ ಧ್ವಜಸ್ಥಂಭ ಲೋಕಾರ್ಪಣೆ

ನೇತಾಜಿ ಬ್ರಿಗೇಡ್ ಮೂಡುಬಿದಿರೆ ಇದರ ಮೂರನೇ ವರ್ಷದ ದೀಪಾವಳಿ ಉತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಬಳಿ ಇರುವ ಚಿಣ್ಣರ ಉದ್ಯಾನವನದಲ್ಲಿ ಮೊದಲ ಬಾರಿ “ತುಳುನಾಡ ಕೊಡಿ ಧ್ವಜಸ್ಥಂಭವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಲೋಕಾರ್ಪಣಿಗೊಳಿಸಿದರು. ತುಳು ಭಾಷೆಯನ್ನು ಸಂವಿಧಾನದ ಆರ್ಟಿಕಲ್ 347 ಪ್ರಕಾರ ಅಧಿಕೃತ ಮಾಡುವ ಬಗ್ಗೆ ಮತ್ತು ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡುವ ವಿಧೇಯಕವನ್ನು ಜಿಲ್ಲೆಯ ಎಲ್ಲಾ ಶಾಸಕರುಗಳು ಮುಂದಿನ ಅಧಿವೇಶನದಲ್ಲಿ

ವಿಟ್ಲ : ಹೈಟೆಕ್ ಅಕ್ರಮ ಮರಳು ದಂಧೆ : ಲಾರಿಗಳನ್ನು ತಡೆ ಹಿಡಿದು ಪ್ರತಿಭಟನೆ

ವಿಟ್ಲ: ಬರಿಮಾರಿನಲ್ಲಿ ಹೈಟೆಕ್ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಸಾರ್ವಜನಿಕರು ಲಾರಿಗಳನ್ನು ತಡೆ ಹಿಡಿದು ಪ್ರತಿಭಟಿಸಿದ್ದಾರೆ. ಎಗ್ಗಿಲ್ಲದೆ ಮರಳು ಮಾಫಿಯಾ ನಡೆಯುತ್ತಿದ್ದು ಪಂ.ಅಧ್ಯಕ್ಷೆಯ ನೇತೃತ್ವದಲ್ಲಿ ಸ್ಥಳೀಯರು ಬರಿಮಾರಿನಲ್ಲಿ ಮರಳು ಲಾರಿಗಳನ್ನು ತಡೆದುಹಿಡಿದ್ದಾರೆ. ಈ ವೇಳೆ ಲಾರಿ ತಡೆದ ಕಾರ್ಯಕರ್ತರಿಗೆ ಲಾರಿಗಳನ್ನು ಬಿಡುವಂತೆ ಬಿಜೆಪಿ ಮುಖಂಡರಿಂದಲೂ, ಪೆÇಲೀಸರಿಂದ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೋಟು, ಕ್ರೇನ್ ಬಳಸಿ ಹೈಟೆಕ್

ಪುತ್ತೂರು : ಕಾಂತಾರ ಚಲನಚಿತ್ರ ವೀಕ್ಷಿಸಲಿರುವ ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲೆ, ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ದೈವ ನರ್ತಕರು, ದರ್ಶನ ಪಾತ್ರಿಗಳೊಂದಿಗೆ, ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸಲ್ಲಿದ್ದಾರೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯಿಂದ ಮೂಡಿಬಂದ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು

ಮೂಡುಬಿದಿರೆ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಇಲ್ಲಿನ ಪೇಪರ್ ಮಿಲ್ಲ್ ಬಳಿಯ ನಿವಾಸಿ ಜಾನ್ ಫೆರ್ನಾಂಡಿಸ್ (57ವ) ಎಂಬವರು ತನ್ನ ಮನೆಯಲ್ಲಿ ಮಂಗಳವಾರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜಾನ್ ಅವರು ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ನಂತರ ಊರಿಗೆ ಬಂದ ನಂತರ ಪಾಶ್ವ ವಾಯುಗೆ ಸಿಲುಕಿ ಚಿಕಿತ್ಸೆ ಪಡೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಂಡಿದ್ದ ಅವರು ಮನೆಯ ಬಳಿಯಲ್ಲೇ ಫಾಸ್ಟ್ ಫುಡ್ ಅಂಗಡಿ ನಡೆಸುವುದಾಗಿ ಹೇಳಿಕೊಂಡಿದ್ದರು. ಆದರೆ ಮಂಗಳವಾರ