ರಿವೋಲ್ಟ್ ಕಂಪನಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಲಗ್ಗೆ
ದ್ವಿಚಕ್ರ ವಾಹನಗಳ ಮಾರಾಟ ಕ್ಷೇತ್ರದಲ್ಲಿ ಗ್ರಾಹಕರ ಮನ ಗೆದ್ದಿರುವ ಮಂಗಳೂರಿನ ವೆಸ್ಟ್ ಕೋಸ್ಟ್ ಶೋ ರೂಮ್ ನ ಸಹಬಾಗಿತ್ವದಲ್ಲಿ ಮಂಗಳೂರಿನಲ್ಲಿ ರಿವೋಲ್ಟ್ ಕಂಪನಿಯ ಎಲೆಕ್ಟಿಕಲ್ ಬೈಕ್ ಶೋರೂಮ್ ಶುಭರಂಭಗೊಳ್ಳಲಿದೆ.ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಪ್ರತಿದಿನ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿದೆ. ಅಂತೆಯೇ ದ್ವಿಚಕ್ರವಾಹನಗಳ ಮಾರಾಟ ಕ್ಷೇತ್ರದಲ್ಲಿಯೇ ಹೆಸ್ರು ಪಡೆದುಕೊಂಡಿರುವ ರಿವೋಲ್ಟ್ ಕಂಪನಿಯು ತನ್ನ ನೂತನ ಶೋರೂಂ ಅನ್ನು ಮಂಗಳೂರಲ್ಲಿ ಆರಂಭಿಸಿದೆ. ನಗರದ ಬೆಂದೂರುವೆಲ್‌ನ ಎಸ್.ಸಿ.ಎಸ್ ಆಸ್ಪತ್ರೆಯ ರಸ್ತೆಯಲ್ಲಿ ನೂತನ ರಿವೋಲ್ಟ್ ವೆಸ್ಟ್ ಕೋಸ್ಟ್ ಶೋ ರೂಮ್‌ಗುರುವಾರದಂದು ಮಧ್ಯಾಹ್ನ 3 ಗಂಟೆಗೆ ಶುಭಾರಂಭಗೊಳ್ಳಲಿದೆ. ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಎಲೆಕ್ಟಿçಕಲ್ ಬೈಕ್ ಶೋ ರೂಮ್ ಶುಭಾರಂಭಗೊಳ್ಳುತ್ತಿದ್ದು ಗಣ್ಯರ ಸಮುಖದಲ್ಲಿ ನಾಳೆ ಮಾರುಕಟ್ಟೆಗೆ ರಿವೋಲ್ಟ್ ಕಂಪನಿಯ ಎಲೆಕ್ಟಿçಕಲ್ ಬೈಕ್ ಲಗ್ಗೆ ಇಡುತ್ತಿದೆ.ಉದ್ಘಾಟನಾ ಸಮಾರಂಭದಲ್ಲಿ ರಿವೋಲ್ಟ್ ಮೋಟರ‍್ಸ್ನ ಎವಿಪಿ ಮಾನವ್ ಮೆಹ್ರಾ, ರಿವೋಲ್ಟ್ ಮೋಟರ‍್ಸ್ನ ಜಿ.ಎಂ ಶ್ರೀಧರ್ ಕಾಕಿಲೇಟಿ, ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ನವೀನ್ ಆರ್. ಡಿಸೋಜಾ ಹಾಗೂ ವಿ4ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಇನ್ನು ಈಗಾಗಲೇ ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದು, ಜೊತೆಗೆ ಮುಂಗಡ ಬುಕಿಂಗ್ ತೆರೆದಿದ್ದು ನಾಳೆಯಿಂದ ಗ್ರಾಹಕರು ಶೋ ರೂಮ್‌ಗೆ ಭೇಟಿ ನೀಡಿ ವಾಹನ ಖರೀದಿಸಬಹುದು