Home Archive by category mangaluru (Page 5)

ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಮಂಗಳೂರಿನ ಯುವಕರು

ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್- 2023 ಆಗಿ ಹೊರಹೊಮ್ಮಿದರು. ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾದಿಂದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ – 2023

ಮಂಗಳೂರು: ನೆಕ್ಸಾ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್ ಮೇಳ

ಮಾರುತಿ ಸುಜುಕಿಯ ಗ್ರಾಂಡ್ ವಿತಾರ ಕಾರು ಒಂದು ಫುಲ್ ಟ್ಯಾಂಕ್‌ನಲ್ಲಿ 1436 ಕಿ.ಮೀ ಮೈಲೇಜು ನೀಡುವುದರೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದಾಖಲೆ ಬರೆದಿದ್ದು, ಮಂಗಳೂರಿನ ನೆಕ್ಸಾ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್‌ಗಳು ಘೋಷಿಸಲಾಗಿದೆ.ಪ್ರತಿ ಖರೀದಿಯ ಮೇಲೆ ರೂ.79100ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ನಗರದ ಮೇರಿಹಿಲ್ ಏಪೋರ್ಟ್ ರಸ್ತೆಯ ಸುಮಿತ್ ಅಪಾರ್ಟ್‌ಮೆಂಟ್

ಸಂತ ಜೆರೋಸಾ ಶಾಲೆಯ ಜೊತೆಗೆ ನಿಂತ ಕಾನ್ಫರೆನ್ಸ್ ಆಫ್ ರಿಲಿಜಿಯಸ್ ಆಫ್ ಇಂಡಿಯಾ ( CRI )

ಫೆಬ್ರವರಿ 10, 2024 ರಂದು ತೆರೆದುಕೊಂಡ ದುರದೃಷ್ಟಕರ ಮತ್ತು ದುಃಖಕರ ಘಟನೆಗಳ ಮಧ್ಯೆ, CRI ಮಂಗಳೂರು ಘಟಕವು ಸೇಂಟ್ ಜೆರೋಸಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆ ಮತ್ತು ಅದರ ಆಡಳಿತದ ಜತೆಗೆ ಇದೆ. ಸೇಂಟ್ ಜೆರೋಸಾ ಶಾಲೆಯು ಇಂಗ್ಲಿಷ್ ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪಗಳನ್ನು ಎದುರಿಸಿತು ಹಾಗೂ ಶಾಲಾ ಸಮುದಾಯಕ್ಕೆ ಸವಾಲಿನ ವಾತಾವರಣವನ್ನು ಸೃಷ್ಟಿಸಿತು.CRI ಮಂಗಳೂರು ಘಟಕವು ಯಾವುದೇ ರೀತಿಯ ಅನ್ಯಾಯದ ವರ್ತನೆಯನ್ನು ಖಂಡಿಸುತ್ತದೆ ಮತ್ತು ಸತ್ಯ ಮತ್ತು

ಕರಾವಳಿಗೆ ಭರಪೂರ ಕೊಡುಗೆ: ಮಂಜುನಾಥ ಭಂಡಾರಿ

ಮಂಗಳೂರು: ರಾಜ್ಯ ಸರಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಅಯವ್ಯಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ 3ಸಾವಿರ

ರಾಜ್ಯದ ಆರ್ಥಿಕತೆಗೆ ಚೈತನ್ಯ: ಹರೀಶ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಶಕೆಯೇ ಆರಂಭವಾಗಿದೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಆರ್ಥಿಕತೆಗೆ ಚೈತನ್ಯ ತುಂಬಿದೆ ಎಂದು ವಿಧಾನ ಪರಿಷತ್‌ನ ಸದಸ್ಯರೂ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು. ಅವರು ರಾಜ್ಯ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಜನಸಾಮಾನ್ಯರು, ಮಧ್ಯಮ ವರ್ಗದವರ ಆರ್ಥಿಕತೆಗೆ ಚೈತನ್ಯ ನೀಡಿದ್ದು,

ಮಂಗಳೂರು: ಟಾಟಾ ಸಮೂಹದ ತನಿಷ್ಕ್ ಜ್ಯುವೆಲ್ಲರಿ ಮಳಿಗೆ ಮರು ಆರಂಭ

ಭಾರತದ ಅತಿ ದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ಟಾಟಾ ಸಮೂಹದ ತನಿಷ್ಕ್ ಚಿನ್ನಾಭರಣದ ಭವ್ಯ ಮಳಿಗೆಯು ಮಂಗಳೂರಿನಲ್ಲಿ ಮರು ಆರಂಭಗೊಂಡಿತು.ಟಾಟಾ ಸಮೂಹವು ತನ್ನ ರಿಟೇಲ್ ಉದ್ಯಮವಾದ ತನಿಷ್ಕ್ ಜ್ಯುವೆಲ್ಲರಿಯನ್ನು ಮಂಗಳೂರಿನಲ್ಲಿ ಮರು ಆರಂಭಿಸಿದ್ದು, ಟಾಟಾ ಸನ್ಸ್ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಭಾಸ್ಕರ್ ಭಟ್ ಹಾಗೂ ರೀಜನಲ್ ಬಿಸ್ನೆಸ್ ಹೆಡ್ ಅಜಯ್ ದ್ವಿವೇದಿ ಅವರು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಟಾಟಾ ಸನ್ಸ್ ಪ್ರೈವೆಟ್

ಮಂಗಳೂರು: ಜೆರೂಸಾ ಶಾಲೆ ಪ್ರಕರಣ, ಜಾಲ ತಾಣ ಅಪಪ್ರಚಾರ : ಸೆನ್ ಠಾಣೆಗೆ ದೂರು ನೀಡಿದ ಮಾಜೀ ಕೌನ್ಸಿಲರ್‌ ಅಪ್ಪಿ

ಮಂಗಳೂರು ವೆಲೆನ್ಸಿಯಾದ ಜೆರೂಸಾ ಶಾಲೆಯ ಪ್ರಕರಣ ಸಂಬಂಧವಾಗಿ ಕೆಲವರು ಜಾಲ ತಾಣಗಳ ಮೂಲಕ ಸಮಾಜದ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಕೌನ್ಸಿಲರ್ ಅಪ್ಪಿ ಅವರು ಸೆನ್ ಠಾಣೆಗೆ ದೂರು ನೀಡಿದರು. ವಾಟ್ಸ್‌ ಆ್ಯಪ್ ವಾಯ್ಸ್ ಮೆಸೇಜ್, ತಿರುಚಿದ ಫೋಟೋ ಮೆಸೇಜ್ ಎಂದು ಹರಿದಾಡುತ್ತಿವೆ. ವೈರಲ್ ಆಗುತ್ತಿರುವ ಇವು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಗಲಭೆ ಎಬ್ಬಿಸುವ ಉದ್ದೇಶದಿಂದ ಕೂಡಿವೆ. ಕೂಡಲೆ ಇವುಗಳ ವಿರುದ್ಧ ಕ್ರಮ

ಮಂಗಳೂರು: ಉರ್ವ ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮಕಲಶ ಪೂರಣಂ

ಮಂಗಳೂರಿನ ಉರ್ವ ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ನಡೆಯಿತು. ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ವೈದಿಕ ವಿಧಿ-ವಿಧಾನಗಳು ನೆರವೇರಿದವು. ಪುಣ್ಯಾಹಃ ಪ್ರಾತ ಕಾಲ 2 ಗಂಟೆಯಿಂದ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣಂ, ಗೋಪೂಜೆ, 5.15ರಿಂದ ಪಂಚಗವ್ಯ ಪುಣ್ಯಾಹಃ ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನೆರವೇರಿತು. ಶ್ರೀ ಮಾರಿಯಮ್ಮ

ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರು ತಾಲೂಕಿನ ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವರಾಮ್ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ,ಶೇಖರ್ ಪೂಜಾರಿ,ಗಂಗಾಧರ ಪೂಜಾರಿ,ಬಜ್ಪೆ ಯುವವಾಹಿನಿ ಘಟಕದ

ಗುಡ್ಡೆ ಹೋಟೆಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಹೆಮ್ಮುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗಾಗಿ ನೆರವು

ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ,ಎಸ್.ಎಮ್. ಡಿ .ಸಿ.ಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಜನತೆ ತಮ್ಮ