ಮಂಗಳೂರು: ಉರ್ವ ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಹಸ್ರ ಕಲಶ ಸಹಿತ ಬ್ರಹ್ಮಕಲಶ ಪೂರಣಂ
ಮಂಗಳೂರಿನ ಉರ್ವ ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ನಡೆಯಿತು.
ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ವೈದಿಕ ವಿಧಿ-ವಿಧಾನಗಳು ನೆರವೇರಿದವು. ಪುಣ್ಯಾಹಃ ಪ್ರಾತ ಕಾಲ 2 ಗಂಟೆಯಿಂದ ಸಹಸ್ರಕಲಶ ಸಹಿತ ಬ್ರಹ್ಮಕಲಶ ಪೂರಣಂ, ಗೋಪೂಜೆ, 5.15ರಿಂದ ಪಂಚಗವ್ಯ ಪುಣ್ಯಾಹಃ ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನೆರವೇರಿತು. ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮ ಕುಂಭಾಭಿಷೇಕ, ವಿಶೇಷ ಮಂತ್ರನ್ಯಾಸಗಳು, ಪರಿವಾರ ದೇವರುಗಳಿಗೆ ವಿಶೇಷ ಕಲಶಾಭಿಷೇಕಗಳು, ವಿಶೇಷ ಸಾನಿಧ್ಯ ಪ್ರಾರ್ಥನೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಬ್ರಹ್ಮಶ್ರೀ ಕೋಡಿಕಲ್ ಸುಬ್ರಹ್ಮಣ್ಯ ತಂತ್ರಿಗಳು ಮಾಹಿತಿ ನೀಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಪಾರ ಭಕ್ತ ಸಮೂಹವೇ ಸೇರಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.