ಉಜಿರೆ, ಫೆ.4: ಸಾಂಪ್ರದಾಯಿಕ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರತರಾಗಬೇಕು. ವಿಭಿನ್ನ ಶೈಲಿಯ ಸುದ್ದಿಗಳನ್ನು ಬರೆದಾಗ ಮಾತ್ರ ಮಾಧ್ಯಮರಂಗದಲ್ಲಿ ಯಶಸ್ಸು ಸಾಧ್ಯ ಎಂದು ಸನ್ಮಾರ್ಗ ಪತ್ರಿಕೆಯ ಪತ್ರಕರ್ತ ಎ.ಕೆ. ಕುಕ್ಕಿಲ ಬಂಟ್ವಾಳ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾರಾ ಅಬೂಬಕ್ಕರ್
ಬಂಟ್ವಾಳ: ಮೇರಮಜಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ಜನರು ಹಾಗೂ ರೈತರ ಬಹುಬೇಡಿಕೆಯ ಮೇರಮಜಲುವಿನಿಂದ ಬಡ್ಡೂರು ಕಾನ ಸಂಪರ್ಕ ರಸ್ತೆ ಅಭಿವೃದ್ಧಿ, ಕಿರು ಸೇತುವೆ ನಿರ್ಮಾಣ, ಮಯ್ಯಾಡಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಕುಟ್ಟಿಕಳ ರಸ್ತೆಗೆ ಡಾಮರೀಕರಣ ಸೇರಿದಂತೆ ವಿವಿಧ ರಸ್ತೆ ನಿರ್ಮಾಣ ಕೆಲಸಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ “BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಿತ್ರ ನಟ ಅರವಿಂದ್ ಬೋಳಾರ್ ರವರು ಆಯ್ಕೆಯಾಗಿದ್ದಾರೆ. ಅರವಿಂದ ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ, ಕೊಂಕಣಿ ಮಲೆಯಾಳಂ ಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯಾರಿ ಭಾಷಾ ಪಾತ್ರದಲ್ಲಿಯೂ ಸೈ ಎನಿಸಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಎಂಬಲ್ಲಿ ತಂದೆ ಕೃಷ್ಣಪ್ಪ ಮತ್ತು ತಾಯಿ
ಮೂಡುಬಿದಿರೆ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅಭಿವೃದ್ಧಿಯ ನೆಪದಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ.ಇದನ್ನೆಲ್ಲಾ ಹೋಗಲಾಡಿಸಿ ಭ್ರಷ್ಟಚಾರ ಮುಕ್ತ ಮೂಡುಬಿದಿರೆಯನ್ನಾಗಿ ರೂಪುಗೊಳಿಸಲು ಕಾಂಗ್ರೆಸ್ ನ ಎಂಎಲ್ ಎ ಬರಬೇಕು ಎಂದು ಮಾಜಿ ಸಚಿವ, ಕೆಪಿಸಿಸಿಯ ರಾಜ್ಯ ಉಪಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಬಲಾಢ್ಯ ನಾಯಕರುಗಳು ಜನವರಿ 22 ರಂದು ಮಂಗಳೂರಿಗೆ
ರಾಮನಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಪೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ. ಪ್ರಸನ್ನ ಭಟ್ (26) ಮೃತ ಯುವಕ. ಜನವರಿ 1 ರಂದು ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಮೃತ ಪ್ರಸನ್ನ ಭಟ್ ಅವರು ಮಾವತ್ತೂರು ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕನಕಪುರ ಗಾಮಾಂತರ ಪೆÇಲೀಸ್ ಠಾಣೆ
ಬೆಳ್ತಂಗಡಿ ತಾಲೂಕಿನ ಶಿಬಾಜೆ ಕುರುಂಜಿ ಗ್ರಾಮದ ತೋಟದ ಕಾರ್ಮಿಕನಾಗಿ ದುಡಿಯುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಗೈದಿರುವ ಆರೋಪಿಗಳ ಮೇಲೆ ಕೊಲೆ, ದರೋಡೆ, ಹಲ್ಲೆ, ದಲಿತ ದೌರ್ಜನ್ಯ ದಾಖಲಾದರೂ ರಾಜಕೀಯ ಒತ್ತಡಕ್ಕೆ ಒಳಗಾದ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸದೆ ರಕ್ಷಣೆಗೆ ಮುಂದಾಗಿರುವ ಘಟನೆ ನಡೆದಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಜರುಗಿಸಬೇಕೆಂದು ಮೊಗೇರ ಸಂಘ ಮತ್ತು ದಲಿತ ಸಂಘಗಳು ಒತ್ತಾಯಿಸಿವೆ. ಈ
ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಘಟನೆ ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ಶನಿವಾರ ರಾತ್ರಿ ನಡೆದಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.ಮೃತ ವ್ಯಕ್ತಿಯನ್ನು ಕಾಟಿಪಳ್ಳ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಚೂರಿ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಲೀಲ್ ಅವರು ಚಿಕಿತ್ಸೆ ಫಲಕಾರಿಯಾಗದೆ
ಮಂಗಳೂರು: ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತ ನಾಯ್ಕ (38) ಅವರು ಹೃದಯಾಘಾತದಿಂದ ವಿಧಿವಶರಾದರು. ತಮ್ಮ ಊರು ಬಾಗಲಕೋಟೆಗೆ ಹೋಗಿದ್ದ ವೇಳೆ ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ. 2008ರ ಬ್ಯಾಚ್‌ನಲ್ಲಿ ಅವರು ಪೊಲೀಸ್ ಇಲಾಖೆಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಈ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗವಾಹಿನಿ ಜೈ ಶ್ರೀ ರಾಮ್ ಶಾಖೆ ಎಡಪದವು ಇದರ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆಯ ಅಂಗವಾಗಿ 10 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ.“ಸುವರ್ಣ ಸೇವಾ ಸಂಭ್ರಮ” ಡಿಸೆಂಬರ್ 18 ರಂದು ಬೆಳ್ಳಿಗೆ 9:30 ಕ್ಕೆ ಸರಿಯಾಗಿ ಶ್ರೀ ರಾಮ ಮಂದಿರದ ಪಟ್ಟಾಭಿರಾಮ ಸಭಾಭವನ ಎಡಪದವಿನಲ್ಲಿ ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮ ಹಾಗೂ ಸೇವಾ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿರುವುದು.
ನಾನು ಆಢಳಿತ ಪಕ್ಷದ ಪ್ರತಿನಿಧಿಯಾಗಿದ್ದರೂ..ಜನರಿಗೆ ಸಮಸ್ಯೆಯೊಡ್ಡುವ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ನೊಂದಿಗೆ ವಿಲಿನಗೊಳ್ಳಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಎಂಬುದಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದ್ದಾರೆ.ಕಾಪುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಈ ಟೋಲ್ ಗೇಟ್ ಗಳು ಅಸ್ತಿತ್ವಕ್ಕೆ ಬಂದಿದ್ದವುಗಳು, ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ಗೆ 60 ಕೀ.ಮೀ. ಅಂತರ ಇರ