ಸರ್ಕಸ್ ತುಳು ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆ – circus tulu film
ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ “ಸರ್ಕಸ್” ತುಳು ಸಿನಿಮಾ ಭಾರತ್ ಮಾಲ್ ನ ಬಿಗ್ ಸಿನಿಮಾಸ್‍ನಲ್ಲಿ ಬಿಡುಗಡೆಗೊಂಡಿತು. ಸಿನಿಮಾ ಬಿಡುಗಡೆಗೂ ಮುನ್ನ ಅದ್ಧೂರಿ ಮೆರವಣಿಗೆ ನಡೆಯಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪೆÇ್ರೀತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ ಎಂದರು. ತುಳು ಚಿತ್ರರಂಗಕ್ಕೆ ಕೆ.ಎನ್. ಟೇಲರ್ ಅವರಂತಹ ಹಿರಿಯರಿಂದ ಇಂದಿನ ಯುವ ಕಲಾವಿದರ ತನಕ ನೂರಾರು ಮಂದಿ ದುಡಿದಿದ್ದಾರೆ. ಅವರೆಲ್ಲರ ಶ್ರಮದಿಂದ ತುಳು ಸಿನಿಮಾಗಳು ತುಳುವರ ಪ್ರೀತಿಯನ್ನು ಗಳಿಸಿದೆ. ಸಿನಿಮಾವನ್ನು ನೋಡಿ ಬೆನ್ನುತಟ್ಟಿ ಪೆÇ್ರೀತ್ಸಾಹಿಸಿ” ಎಂದರು.
ಬಳಿಕ ಮಾತಾಡಿದ ಭೋಜರಾಜ್ ವಾಮಂಜೂರು, “ಸರ್ಕಸ್ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಗಿರಿಗಿಟ್ ಬಳಿಕ ಮತ್ತೊಮ್ಮೆ ಅದೇ ತಂಡದ ಮೂಲಕ ನಾವೆಲ್ಲರೂ ಜೊತೆಯಾಗಿ ನಟಿಸಿದ್ದೇವೆ ಎಂದರು.
ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತಾಡಿ, “ಸರ್ಕಸ್ ಚಿತ್ರ ತುಳುನಾಡಿನಲ್ಲಿ ಸಕ್ಸಸ್ ಆಗಲಿ. ಇನ್ನಷ್ಟು ತುಳು ಚಿತ್ರಗಳು ಬಿಡುಗಡೆಗೊಂಡು ತುಳುವರ ಮನಗೆಲ್ಲಲಿ” ಎಂದು ಶುಭ ಹಾರೈಸಿದರು. ಅರ್ಜುನ್ ಕಾಪಿಕಾಡ್ ಮಾತಾಡಿ, “ತುಳು ಚಿತ್ರರಂಗದಲ್ಲಿ ಸರ್ಕಸ್ ಸಿನಿಮಾ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ಸು ಕಾಣಲಿ” ಎಂದರು.
ಸಮಾರಂಭದಲ್ಲಿ ಪ್ರಕಾಶ್ ಪಾಂಡೇಶ್ವರ್, ವಾಲ್ಟರ್ ನಂದಳಿಕೆ, ವಿ.ಜಿ.ಪಾಲ್, ತಮ್ಮ ಲಕ್ಷ್ಮಣ, ರೂಪೇಶ್ ಶೆಟ್ಟಿ, ರಚನಾ ರೈ, ಸುಧಾಕರ ಶೆಟ್ಟಿ ಮುಗ್ರೋಡಿ, ಅನಿಲ್ ಶೆಟ್ಟಿ, ಮಂಜುನಾಥ್ ಅತ್ತಾವರ, ಸಂಪತ್ ಶೆಟ್ಟಿ, ಭೋಜರಾಜ್ ವಾಮಂಜೂರ್, ಸಚಿನ್ ಎ ಎಸ್ ಉಪ್ಪಿನಂಗಡಿ, ಅನಿಲ್ ದಾಸ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪ್ರಕಾಶ್ ತೂಮಿನಾಡ್, ಪ್ರದೀಪ್ ಆಳ್ವ ಕದ್ರಿ, ಸಾಯಿಕೃಷ್ಣ ಕುಡ್ಲ, ರಾಜಗೋಪಾಲ್ ರೈ, ದಿವಾಕರ್ ಪಾಂಡೇಶ್ವರ, ನಾರಾಯಣ ಪೂಜಾರಿ, ತಾರಾನಾಥ ಶೆಟ್ಟಿ ಬೋಳಾರ, ಮುಖೇಶ್ ಹೆಗ್ಡೆ, ಇಸ್ಮಾಯಿಲ್ ಮೂಡುಶೆಡ್ಡೆ, ಲಾಯ್ ವೇಲೆಂಟೈನ್ ಸಲ್ದಾನ, ಚಂದ್ರಹಾಸ್ ಉಳ್ಳಾಲ್, ನವೀನ್ ಶೆಟ್ಟಿ ಎಡ್ಮೆಮಾರ್, ನವೀನ್ ಶೆಟ್ಟಿ, ಅಥರ್ವ ಪ್ರಕಾಶ್, ಆನಂದ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಸ್ ಚಿತ್ರಕ್ಕೆ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜುನಾಥ ಅತ್ತಾವರ ಬಂಡವಾಳ ಹೂಡಿದ್ದಾರೆ. ರೂಪೇಶ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ನಟಿ ರಚನಾ ರೈ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ, ಪಂಚಮಿ ಭೋಜರಾಜ್, ರೂಪ ವರ್ಕಾಡಿ, ಪ್ರದೀಪ್ ಆಳ್ವ ಕದ್ರಿ, ನಿತೇಶ್ ಶೆಟ್ಟಿ ಎಕ್ಕಾರ್ ಅಭಿನಯಿಸಿದ್ದಾರೆ.
ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಹಾಡಿಗೆ ಲೋಯ್ ವಾಲೆಂಟೈನ್ ಸಲ್ದಾನ ಇವರ ಸಂಗೀತವಿದೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. “ಗಿರಿಗಿಟ್” ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ, ನಿರಂಜನ್ ದಾಸ್ ಕ್ಯಾಮರಾ, ರಾಹುಲ್ವ ಸಿಸ್ಠ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.
ಸರ್ಕಸ್ ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಕೊಪ್ಪದಲ್ಲಿ ಜೆಎಂಜೆ ಟಾಕೀಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್, ಕಾಸರಗೋಡಿನಲ್ಲಿ ಕೃಷ್ಣ, ಮುಳ್ಳೇರಿಯದಲ್ಲಿ ಕಾವೇರಿ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆ ಕಂಡಿತು.
ಅದೇ ರೀತಿ ದುಬಾಯಿ, ಅಬುದಾಬಿ, ಅಜ್ಮಾನ್, ಶಾರ್ಜಾ, ಓಮಾನ್, ಮಸ್ಕತ್, ಕತಾರ್, ಮೊದಲಾದ ದೇಶಗಳಲ್ಲಿ ಸರ್ಕಸ್ ಸಿನಿಮಾ ತೆರೆಕಂಡಿದೆ.
ಬೆಳಿಗ್ಗೆ ನೆಹರೂ ಮೈದಾನದಿಂದ ಭಾರತ್ ಮಾಲ್ ವರೆಗೆ ಸರ್ಕಸ್ ತಂಡದಿಂದ ಅದ್ದೂರಿ ಮೆರವಣಿಗೆ ನಡೆಯಿತು. ಸರ್ಕಸ್ ಸಿನಿಮಾದ ಕಲಾವಿದರೊಂದಿಗೆ ತುಳು ಚಿತ್ರರಂಗದ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕೊಂಬು ಕಹಳೆ, ವಾದ್ಯ, ಕಲ್ಲಡ್ಕದ ಗೊಂಬೆಯನ್ನು ಬಳಸಲಾಗಿತ್ತು. ದಾರಿಯುದ್ದಕ್ಕೂ ಸರ್ಕಸ್ ಸಿನಿಮಾಕ್ಕೆ ಜೈಕಾರಗಳನ್ನು ಕೂಗಲಾಯಿತು. ಬಾರೀ ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು ಭಾಗಿಯಾಗಿದ್ದರು.