ಕಾರ್ಮಿಕ ಕಾನೂನುಗಳನ್ನು ಸಂಹಿತೆಗಳನ್ನಾಗಿಸಿ ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

ಸಮಾಜದಲ್ಲಿ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡಿ ಅದನ್ನು ಸಂಹಿತೆಗಳನ್ನಾಗಿಸುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ.ಒಂದು ಕಡೆ ಬೆಲೆಯೇರಿಕೆಯ ಸಂಕೇತವಾದರೆ,ಮತ್ತೊಂದು ಕಡೆ ದಿನವಿಡೀ ದುಡಿದರೂ ಕನಿಷ್ಠ ಕೂಲಿಯಿಲ್ಲದೆ ಪರದಾಡುವಂತಹ ದುಸ್ಥಿತಿ ಒದಗಿ ಬಂದಿದೆ.ಸಾಮಾಜಿಕ ಭದ್ರತೆಯಿಲ್ಲದ ಅಸಂಘಟಿತ ಕ್ಷೇತ್ರದ ಕಾರ್ಮಿಕರ ಬದುಕು ಹೇಳತೀರದಾಗಿದೆ ಎಂದು CITU ದ. ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಸೇರಿದ್ದ ಜನತೆಯನ್ನುದ್ದೇಶಿಸಿ ಹೇಳಿದರು

ಅವರು CITU ನೇತೃತ್ವದಲ್ಲಿ ಮುಡಿಪುನಲ್ಲಿ ಜರುಗಿದ ಉಳ್ಳಾಲ ತಾಲೂಕು ಮಟ್ಟದ ಎರಡು ದಿನಗಳ ವಾಹನ ಪ್ರಚಾರ ಜಾಥಾದ ಮೊದಲ ದಿನದ ಕೊನೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ CITU ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೊಟ್ಟುರವರು ಮಾತನಾಡುತ್ತಾ, ತೀವ್ರವಾದ ಬಡತನ,ನಿರುದ್ಯೋಗ, ಉದ್ಯೋಗ ಕಡಿತದಿಂದ ಜನತೆಯ ಆದಾಯ ಕಡಿತವಾಗಿ ಸುಮಾರು 20 ಕೋಟಿ ಭಾರತೀಯರು ಬಡತನದಲ್ಲಿದ್ದಾರೆ.ಪೌಷ್ಠಿಕ ಆಹಾರ ಸಿಗದೆ ಅಪೌಷ್ಠಿಕತೆ ಮತ್ತು ಹಸಿವಿನ ಸಾವುಗಳು ಹೆಚ್ಚುತ್ತಿದೆ.ಸದ್ಯಕ್ಕೆ ಭಾರತ ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಇಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಭೆಯಲ್ಲಿ CITU ಜಿಲ್ಲಾ ನಾಯಕರಾದ ಜಯಂತ ನಾಯಕ್ ,ಸುಂದರ ಕುಂಪಲ, ರೊಹಿದಾಸ್,ಜನಾರ್ದನ ಕುತ್ತಾರ್,ಚಂದ್ರಹಾಸ ಪಿಲಾರ್,ವಿಲಾಸಿನಿ ತೊಕ್ಕೊಟ್ಟು,ವಿಶ್ವನಾಥ್ ,DYFI ನಾಯಕರಾದ ರಝಾಕ್ ಮೊಂಟೆಪದವು,ರಫೀಕ್ ಹರೇಕಳ,ಅಶ್ರಫ್,ಇಬ್ರಾಹಿಂ ಮದಕ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.