ಮೂಡುಬಿದರೆಯಲ್ಲಿ ಬೀಡಿ ಕಾರ್ಮಿಕರಿಂದ ಪ್ರತಿಭಟನೆ
ಮೂಡುಬಿದಿರೆ: ಬೀಡಿ ಕಾರ್ಮಿಕರಿಗೆ 2015ರಿಂದ 2018ರ ತನಕ ಮೂರು ವರ್ಷಗಳ ಬಾಕಿ ಇರುವ ತುಟ್ಟಿ ಭತ್ತೆ ಮೊತ್ತವನ್ನು ನೀಡಲು ಒತ್ತಾಯಿಸಿ ಮತ್ತು 2018ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ಕೂಲಿ ಪಾವತಿಗಾಗಿ ಆಗ್ರಹಿಸಿ ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ವತಿಯಿಂದ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್, ಮೂಡುಬಿದಿರೆ ಡಿಪೆÇೀ ಬಳಿ ಪ್ರತಿಭಟನೆ ನಡೆಸಿದರು.
ಬೀಡಿ ಫೆಡರೇಶನ್ ನ ಜಿಲ್ಲಾಧ್ಯಕ್ಷ ವಸಂತ ಆಚಾರಿ ಪ್ತತಿಭಟನೆಯನ್ನುದ್ದೇಶಿಸಿ ಮಾತನಾಡಿ, ಬೀಡಿ ಮಾಲೀಕರು ಕಾರ್ಮಿಕರಿಗೆ 2015ರಿಂದ ಪ್ರತಿ ಸಾವಿರ ಬೀಡಿಗೆ ರೂ 12.75 ರಂತೆ ತುಟ್ಟಿ ಭತ್ತೆಯನ್ನು ನೀಡಲು ನೀಡಲು ಆದೇಶ ನೀಡಿದೆ. ಆದುದರಿಂದ ಬೀಡಿ ಮಾಲಿಕರು 2015ರಿಂದ 3 ವರ್ಷಗಳಿಂದ ನೀಡಲು ಬಾಕಿ ಇರುವ ತುಟ್ಟಿ ಭತ್ತೆಯನ್ನು ಲೆಕ್ಕಹಾಕಿ ನೀಡಬೇಕೆಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ರಿ) ಇದರ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗಿರಿಜಾ, ರೈತ ಸಂಘದ ಮೂಡುಬಿದಿರೆ ಅಧ್ಯಕ್ಷ ಸುಂದರ ಶೆಟ್ಟಿ, ಸಿಐಟಿಯುನ ಮೂಡುಬಿದಿರೆ ಅಧ್ಯಕ್ಷ ಶಂಕರ್, ಪದಾಧಿಕಾರಿಗಳಾದ ಕೃಷ್ಣಪ್ಪ, ಜಲಜ, ಕಲ್ಯಾಣಿ, ಬೇಬಿ ಹಾಗೂ ಬೀಡಿ ಕಾರ್ಮಿಕರು ಭಾಗವಹಿಸಿದ್ದರು.