ಎ.16ರಂದು ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -4ರ ಎರಡನೇ ಸುತ್ತಿನ ಫರ್ಪಾಮೆನ್ಸ್
ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಸನ್ ಪ್ರೀಮಿಯಮ್ ರಿಫೈಂಡ್ ಸನ್ ಫ್ಲವರ್ ಆಯಿಲ್ ಪ್ರೆಸೆಂಟ್ಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -4ರ ಎರಡನೇ ಸುತ್ತಿನ ಫರ್ಪಾಮೆನ್ಸ್ ಎ.16ರಂದು ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಹೇಳಿದರು.
ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿಆ ದಿನ ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿ.ಎನ್.ಆರ್ ಗೋಲ್ಡ್ ಬಂಟ್ವಾಳ ಇದರ ಮಾಲಕ, ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ, ಸಿದ್ಧಕಟ್ಟೆಯ ಅನಂತ ಪದ್ಮ ಹೆಲ್ತ್ ಸೆಂಟರ್‌ನ ಡಾ. ಸುದೀಪ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳುಕೂಟದ ಬಂಟ್ವಾಳದ ಅಧ್ಯಕ್ಷ ಎ.ಸಿ. ಭಂಡಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪ ಗೊಂಬೆ ಬಳಗದ ಕಲ್ಲಡ್ಕ ಇದರ ರಮೇಶ್ ಕೆ. ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಜಯರಾಮ್ ಆಚಾರ್ಯ ಇವರಿಗೆ ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧಾನ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎoದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸ್ಪರ್ಶಾ ಕಲಾಮಂದಿರದ ಮಾಲಕರಾದ ಸುಭಾಶ್ಚಂದ್ರ ಜೈನ್, ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್.ಕೆ. ನಯನಾಡು, ಪ್ರಮುಖರಾದ ಸೀತರಾಮ ಶೆಟ್ಟಿ, ಶೇಷಪ್ಪ ಟಿ. ಮೂಲ್ಯ, ಸುಕುಮಾರ್ ಬಂಟ್ವಾಳ, ನಾರಾಯಣ ಸಿ. ಪೆರ್ನೆ, ಪರಮೇಶ್ವರ ಮೂಲ್ಯ, ದೇವಿಪ್ರಸಾದ್ ಶೆಟ್ಟಿ ದಾಮೋದರ ಏರ್ಯ ಮೊದಲಾದವರು ಉಪಸ್ಥಿತರಿದ್ದರು.