ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನದ ವೇಳೆ ಕೊಚ್ಚಿಹೋದ ಮಹಿಳೆ : ಶವ ಪತ್ತೆ

ಬೈಂದೂರು : ಕೊಲ್ಲೂರಿಗೆ ಯಾತ್ರಾರ್ಥಿಗಳಾಗಿ ಬಂದು, ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲುಜಾರಿ ನದಿಪಾಲಾದ ಮಹಿಳೆಯ ಶವ ಇಂದು ಭಾನುವಾರ ಮಧ್ಯಾನ್ಹ ನಡೆದಿದೆ. ಘಟನಾ ಸ್ಥಳದಿಂದ ಮೂರೂವರೆ ಕಿ. ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮುಳುಗು ತಜ್ಞ , ಸಾಹಸಿಗ ಈಶ್ವರ್ ಮಲ್ಪೆ ಅವರು ಸತತ ಪರಿಶ್ರಮದಿಂದ ಹರಿವ ನೀರಿನ ಸೆಳೆತವನ್ನೂ ಜಯಿಸಿ, ಸಾಹಸದಿಂದ ಶವ ಪತ್ತೆಹಚ್ಚಿದ್ದಾರೆ.
ಹೌದು ಆದರೆ, ಈಶ್ವರ್ ಅವರು ತಮ್ಮ ಸಂಗಡಿಗರೊಂದಿಗೆ ಛಲ ಬಿಡದೆ, ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಶೋಧ ಕಾರ್ಯಾಚರಣೆ ನಡೆಸಿ ಮಹಿಳೆಯ ಶವವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನದಿ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮತ್ತು ರಾತ್ರಿಯ ಸಮಯ ಬೆಳಕಿನ ಕೊರತೆಯಿಂದ ಅವರಿಗೆ ಶವವನ್ನು ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಶವವನ್ನು ಭದ್ರವಾಗಿ ಹಗ್ಗದಿಂದ ಮರಕ್ಕೆ ಬಿಗಿದು ಮರಳಿ ಬಂದಿದ್ದಾರೆ ಎನ್ನಲಾಗಿದೆ.ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈಶ್ವರ್ ಮಲ್ಪೆ ನೇತೃತ್ವದ ಸಾಹಸಿಗರ ತಂಡದವರು ಶವ ಪತ್ತೆಹಚ್ಚಿದ್ದಾರೆ.
