ಹೋಟೆಲ್ ಡಿಂಕಿ ಡೈನ್‍ನಲ್ಲಿ ಜುಲೈ 17ರಂದು ಆಟಿ ಅಮಾವಾಸ್ಯೆಯ ಉಚಿತ ಕಷಾಯ ವಿತರಣೆ
ಹೋಟೆಲ್ ಡಿಂಕಿ ಡೈನ್‍ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನದ ವತಿಯಿಂದ ಆಟಿದ ಅಮಾವಾಸ್ಯೆಯ ಪ್ರಯುಕ್ತ ಉಚಿತ ಹಾಲೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿಯ ವಿತರಣಾ ಕಾರ್ಯಕ್ರಮ ಜುಲೈ 17ರಂದು ಹಮ್ಮಿಕೊಳ್ಳಲಾಗಿದೆ. ನಗರದ ಕದ್ರಿಯಲ್ಲಿರುವ ಡಿಂಕಿ ಡೈನ್ ಹೋಟೆಲ್‍ನ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ವಿತರಿಸಲಿದ್ದಾರೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತುಳು ವಾಗ್ಮಿ ದಯಾನಂದ ಕತ್ತಲ್‍ಸಾರ್ ತಿಳಿಸಿದ್ದಾರೆ