ಬಸ್ಸೇರಿದ ಶ್ವಾನ : ಶ್ವಾನದ ನಿಷ್ಠೆಗೆ ಜನರ ಮೆಚ್ಚುಗೆ!
ಉಡುಪಿ : ಶ್ವಾನ ಅಂದ್ರೆ ಎಲ್ರಿಗೂ ಇಷ್ಟ. ಅದರ ನಿಷ್ಠೆ ಮತ್ತು ಪ್ರೀತಿಯೂ ಪ್ರಶ್ನಾತೀತ. ಉಡುಪಿ ನಗರದ ಆಸುಪಾಸಿನಲ್ಲಿ ನಡೆದ ಶ್ವಾನನಿಷ್ಠೆಯ ಪ್ರಸಂಗವೊಂದು, ಶ್ವಾನ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ತನ್ನನ್ನು ಆರೈಕೆ ಮಾಡುವ ಮನೆ ಕೆಲಸದಾಕೆಯ ಜೊತೆಯಲ್ಲಿ ಈ ಶ್ವಾನ ಕೂಡ ಬಸ್ಸನ್ನೇರಿದೆ. ಈ ಮಹಿಳೆ ಮನೆಯೊಂದರಲ್ಲಿ ಮನೆ ಕೆಲಸ ಮಾಡುತ್ತಾರೆ. ಮನೆ ಕೆಲಸದ ಮಹಿಳೆಯ ಜೊತೆಯಲ್ಲಿ ಮಾಲೀಕರ ಮನೆಯ ಶ್ವಾನವೂ ಬಂದಿದೆ.ಆಕೆ ಬಸ್ ಹತ್ತುವಾಗ ಶ್ವಾನವೂ ಹತ್ತಿದೆ.
ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ ನಿಂದ ಕೆಳಗಿಳಿಯಲು ಒಪ್ಪಲಿಲ್ಲ. ಕಂಡಕ್ಟರ್ ಶ್ವಾನವನ್ನು ಇಳಿಸಲು ಮುಂದಾದಾಗ, ಸಿಟ್ಟಿನಿಂದ ಬೌ ಬೌ ಅಂತ ಹೇಳಿ ಬಸ್ಸಲ್ಲೇ ಕುಳಿತಿದೆ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ ನ ಹಿಂಬದಿಯಿಂದ ಇಳಿದಾಗ ಶ್ವಾನ ಕೂಡ ಬಸ್ನಿನಿಂದ ಕೆಳಗೆ ಇಳಿದಿದೆ. ತನ್ನನ್ನು ಪ್ರೀತಿಯಿಂದ ಸಲಹುತ್ತಿರುವ ಮನೆ ಕೆಲಸದಾಕೆಯ ಜೊತೆಗಿನ ಶ್ವಾನದ ಈ ಬಾಂಧವ್ಯ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.