ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕುದ್ರೋಳಿಯ 6 ವಿದ್ಯಾರ್ಥಿಗಳಿಗೆ ಫಾತಿಮಾ ಇಸ್ಲಾಮಿಕ್ ಸೆಂಟರ್‍ನಲ್ಲಿ ಅಭಿನಂದನಾ ಕಾರ್ಯಕ್ರಮ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮತ್ತು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಕುದ್ರೋಳಿ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಕುದ್ರೋಳಿಯ 6 ವಿದ್ಯಾರ್ಥಿಗಳಿಗೆ ಕುದ್ರೋಳಿಯ ಫಾತಿಮಾ ಇಸ್ಲಾಮಿಕ್ ಸೆಂಟರ್‍ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಆಯಿಷಾ ಸಫಾ ಅವರ ಪವಿತ್ರ ಕುರ್ ಆನ್ ಪಠಣದೊಂದಿಗೆ ಆರಂಭಗೊಂಡಿತು. ನಂತರ ಎಸ್ ಐ ಓ ಮಂಗಳೂರು ನಗರ ಅಧ್ಯಕ್ಷರಾದ ಮುಹಮ್ಮದ್ ಸಲ್ಮಾನ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯಕ್ಕೆ 2 ನೇ ಟಾಪರ್ ಆದ ಇಲ್ಹಾಮ್ ರಫೀಕ್ (597 ಅಂಕಗಳು), ರಾಜ್ಯಕ್ಕೆ 10 ನೇ ಟಾಪರ್ ಆದ ನಿಯಾಫ್ ಅಹ್ಮದ್ (589 ಅಂಕಗಳು), ಶೆಹಜಾನ್ ಅಹ್ಮದ್ (576 ಅಂಕಗಳು), ಫಾತಿಮಾ ಸಾನಿಯಾ (564 ಅಂಕಗಳು), ಸಲ್ಮಾನ್ ಫಾರಿಶ್ (561 ಅಂಕಗಳು), ಸಾರಾ ರೋಶೈನ್ (552 ಅಂಕಗಳು) ಇವರಿಗೆಲ್ಲ ಸನ್ಮಾನಿಸಲಾಯಿತು. ಸನ್ಮಾನಿತ ವಿದ್ಯಾರ್ಥಿಗಳು ತಮ್ಮ ಅನುಭವ, ಅನಿಸಿಕೆ ಮತ್ತು ಮುಂದಿನ ಗುರಿಯ ಕುರಿತಾಗಿ ಮಾತನಾಡಿದರು.

ಕುದ್ರೋಳಿ ಕಾಪೆರ್Çೀರೇಟರ್ ಶಂಶುದ್ದೀನ್ ಕುದ್ರೋಳಿ, ಜಮಾ’ಅತೆ ಇಸ್ಲಾಮಿ ಹಿಂದ್ ಕುದ್ರೋಳಿ ವರ್ತುಲ ಸಂಚಾಲಕ ಮಕ್ಬೂಲ್ ಕುದ್ರೋಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಹಿತವಚನಗಳನ್ನು ನುಡಿದರು. ಎಸ್ ಐ ಓ ದ.ಕ ಜಿಲ್ಲಾಧ್ಯಕ್ಷ ನಿಹಾಲ್ ಮುಹಮ್ಮದ್ ಸಮಾರೋಪ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಎಸ್ ಐ ಓ ಕುದ್ರೋಳಿ ಘಟಕ ಅಧ್ಯಕ್ಷ ಮುಝಾಹಿರ್ ಅಹ್ಮದ್, ಜಿ ಐ ಓ ಕುದ್ರೋಳಿ ವರ್ತುಲ ಸಂಚಾಲಕಿ ಹಲೀಮಾ ಆಲಿಯ ಅಮೀರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾರ ಅಫ್ರಾ ಆಸಿಫ್ ನಿರೂಪಿಸಿದರು.

Related Posts

Leave a Reply

Your email address will not be published.