ಜನ್ಮದಿನದಂದೇ ಮಣ್ಣಲ್ಲಿ ಮಣ್ಣಾದ ಫಾಜೀಲ್

ಸುರತ್ಕಲ್ ಸಮೀಪದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಗುರುವಾರ ರಾತ್ರಿ ಕೊಲೆಯಾದ ಮಂಗಳಪೇಟೆಯ ನಿವಾಸಿ ಫಾಝಿಲ್ ನ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ ಮಂಗಳಪೇಟೆ ಜುಮ್ಮಾ ಮಸೀದಿಯಲ್ಲಿ ನಡೆದಿದೆ. ಸಾವಿವಾರು ಜನರ ನಡುವ ಫಾಝಿಲ್ ಮೃತದೇಹವನ್ನು ಮೆರವಣಿಗೆಯಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಪೋಲೀಸ್ ಬಿಗಿ ಭದ್ರತೆಯಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿತು. ಪೋಲೀಸ್ ಆಯುಕ್ತ ಎನ್ ಶಶಿಕುಮಾರ್, ಹಾಸನದ ಎಸ್ ಪಿ ಹರಿರಾಂ ಶಂಕರ್ ಭದ್ರತೆಯ ಉಸ್ತುವಾರಿ ವಹಿಸಿದ್ದರು.

ಮುಂಜಾನೆ ಏಳು ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ಫಾಝಿಲ್ ಮೃತದೇಹವನ್ನು ಚೊಕ್ಕಬೆಟ್ಟು ಕಾಟಿಪಳ್ಳ ಮಾರ್ಗವಾಗಿ ಮನೆಗೆ ತರಲಾಯಿತು. ಚೊಕ್ಕಬೆಟ್ಟು- ಕಾಟಿಪಳ್ಳ ಗಣೇಶಪುರದವರೆಗೆ ಆಂಬುಲೆನ್ಸ್ ಮೂಲಕ ಮೆರವಣಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಯಿತು. ಸಾವಿರಾರು ಸಮುದಾಯ ಬಾಂಧವರಿಂದ ಅಂತಿಮ ದರ್ಶನದ ಬಳಿಕ ಕಬರಿಸ್ತಾನಕ್ಕೆ ಮೃತದೇಹ ತರಲಾಯಿತು. ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ಫಾಝಿಲ್ ದಫನ ಕಾರ್ಯ ನೆರವೇರಿತು. ಸುರತ್ಕಲ್ ಎಂಅರ್‍ಪಿಎಲ್ ರಸ್ತೆಯ ಮಂಗಳಪೇಟೆಯಲ್ಲಿ ಫಾಝಿಲ್ ಮನೆ ಸಮೀಪದ ಮುಹಿಯುದ್ದೀನ್ ಜುಮಾ ಮಸೀದಿಯ ದಪನಭೂಮಿಯಲ್ಲಿ ಅಂತ್ಯಕ್ರಿಯೆ ಪೂರ್ಣವಾಯಿತು. ತನ್ನ ಜನ್ಮದಿನದಂದೇ ಫಾಝಿಲ್ ಮಣ್ಣಲ್ಲಿ ಮಣ್ಣಾದರು.
ಫಾಝಿಲ್ ಮನೆಗೆ ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಮೊಯಿದ್ದೀನ್ ಬಾವ, ಐವನ್, ಡಿಸೋಜಾ ಭೇಟಿ ನೀಡಿ ಕುಟುಂಭಿಕರಿಗೆ ಸಾಂತ್ವನ ಹೇಳಿದರು.ಶುಕ್ರವಾರದ ಪ್ರಾರ್ಥನೆ ಇರುವುದರಿಂದ ಸುರತ್ಕಲ್ ಪಣಂಬೂರು, ಮೂಲ್ಕಿ ಪ್ರದೇಶದಲ್ಲಿ ಸೆಕ್ಷನ್ ಜಾರಿಯಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ಪ್ರಮುಖ ಪ್ರಮುಖ ಸ್ಥಳದಲ್ಲಿ ಪೆÇಲೀಸರು ನಾಕಾಬಂದಿ ನಡೆಸಿದ್ದಾರೆ. ಔಷಧ, ಹಾಲು ಅಂಗಡಿ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ.
