ಒಂಟಿ ನಟ ನಟಿಸಿದ ಜಗತ್ತಿನ ಮೊದಲ ಚಲನಚಿತ್ರ

1931ರ ಆಲಂ ಆರಾ ಚಿತ್ರದಲ್ಲಿ ಒಂದು ಹಾಡು ಹಾಡಿ ಕೊರ್ಶಿದ್ ಮಿನೋಶರ್ ಹೋಮ್ಜಿ ಭಾರತದ ಮೊದಲ (ಮಹಿಳಾ)ಹಿನ್ನೆಲೆ ಗಾಯಕಿ ಎನಿಸಿದರು.

1935ರಲ್ಲಿ ಬಂದ ದೂಪ್ ಚಾವೋ ಚಿತ್ರದಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯನ ಅಳವಡಿಸಿಕೊಳ್ಳಲಾಯಿತು.
1937ರ ಕಿಸಾನ್ ಕನ್ಯಾ ದೇಶದ ಮೊದಲ ಬಣ್ಣದ ಚಿತ್ರ. 1921ರ ಭಕ್ತ ವಿಧುರ ಚಿತ್ರದಲ್ಲಿ ರೌಲೆಟ್ ಕಾಯ್ದೆ ರಾಜಕೀಯ ವಿಚಾರ ಇದ್ದುದಕ್ಕೆ ಮದರಾಸು, ಕರಾಚಿ ಪ್ರಾಂತ್ಯಗಳಲ್ಲಿ ಅದನ್ನು ನಿಷೇಧಿಸಲಾಗಿತ್ತು.

1933ರ ಮಲಯಾಳದ ಮಾರ್ತಾಂಡ ವರ್ಮ ಮುತ್ತಿಕ್ಕುವ ದೃಶ್ಯ ಇದ್ದ ಭಾರತದ ಮೊದಲ ಸಿನಿಮಾ.1917ರ ಲಂಕಾದಹನ ಚಿತ್ರದಲ್ಲಿ ಅಣ್ಣಾ ಸಾಲುಂಕೆ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದರು. 1934ರ ರೂಪ್‍ಲೇಖಾ ಫ್ಲಾಶ್‍ಬ್ಯಾಕ್ ಇದ್ದ ಮೊದಲ ಸಿನಿಮಾ. 1950ರ ಹನ್ಸ್ತೇ ಆನ್ಸೂ ವಯಸ್ಕರಿಗೆ ಮಾತ್ರ ಸರ್ಟಿಫಿಕೇಟ್ ಪಡೆದ ಮೊದಲ ಭಾರತೀಯ ಚಿತ್ರ.

1964ರ ಯಾದೇನ್ ನಟ ಸುನಿಲ್ ದತ್ ಒಬ್ಬರೇ ನಟಿಸಿದ ಜಗತ್ತಿನ ಮೊದಲ ಚಿತ್ರ.

Related Posts

Leave a Reply

Your email address will not be published.