ಕಾವೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಸಬಲೀಕರಣ ಗೃಹ ಕಾರ್ಮಿಕ ಒಕ್ಕೂಟದ ವತಿಯಿಂದ ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಎ.ಜೆ ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.

ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಸುಮಂತ್ ರಾವ್ ಉಚಿತ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹರಿಶ್ಚಂದ್ರ ಶಿಬಿರದ ಅಧ್ಯಕ್ಷ ವಹಿಸಿದರು.

ಶಿಬಿರದಲ್ಲಿ ದಂತ ತಪಾಸಣೆ ಹಾಗೂ ಚಿಕಿತ್ಸೆ ಸಾಮಾನ್ಯ ರೋಗ ತಪಾಸಣೆ ಗಂಟಲು,ಕಿವಿ, ಮೂಗು ತಪಾಸಣೆ, ಉಚಿತ ಇಸಿಜಿ ಪರೀಕ್ಷೆ, ಮಧುಮೇಹ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಿಸಲಾಯಿತು.
ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಶಿಬಿರ ಸಂಯೋಜಕ ಪ್ರವೀಣ್ ಕುಮಾರ್, ಡಾ. ಚೇತನ, ಡಾ.ದೇವಿ ಶ್ರೀ, ಉದ್ಯಮಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಮಹಿಳಾ ಸಬಲೀಕರಣ ಗೃಹ ಕಾರ್ಮಿಕ ಒಕ್ಕೂಟದ ದ.ಕ ಜಿಲ್ಲಾ ಸಂಚಾಲಕಿ ಡಾ.ಸಂಸದ್ ಸ್ವಾಗತಿಸಿದರು. ಕವಿತಾ ಸುರೇಶ್ ವಂದಿಸಿದರು. ಹನಿಷ ಸವಾದ್ ಕಾರ್ಯಕ್ರಮ ನಿರೂಪಿಸಿದರು.
