ಎಲ್ಲಿಯ ಗಾಜನೂರು, ಎಲ್ಲಿಯ ಪೇರೂರು ಸಂಬಂಧ

ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೂ, ಜಾರ್‌ಕುಮಾರ್ ಅವರ ಪೇರೂರು ಗ್ರಾಮಕ್ಕೂ ಏನು ಸಂಬಂಧ? ಈ ಪ್ರಶ್ನೆ ಹಲವರ ಹುಬ್ಬೇರಿಸಬಹುದು.

ಪೇರೂರು ಪೆರಿಯ ಊರು. ಪೆರಿಯ ಪಿರಿಯ ಪ್ರಾಯದ ಹಳೆಯ ಊರು. ಹಾಗಾಗಿ ತೆಂಕಣ ಭಾರತದ ಇನ್ನೂರಕ್ಕೂ ಹೆಚ್ಚು ಪೇರೂರು (ಕನ್ನಾಡಿನ ಕೆಲವೆಡೆ ಹೇರೂರು ಆಗಿದೆ) ಗ್ರಾಮಗಳು ನದಿಯ ದಡಗಳಲ್ಲಿಯೇ ಇವೆ.
ಗಾಜನೂರುಗಳು ಕೂಡ ಹಲವು ಇದ್ದು ಅವು ಕೂಡ ನದಿ ತೊರೆಯ ನೆರೆಯ ಊರುಗಳಾಗಿವೆ.

ಗಾಜಿನ ಬಳೆ ತಯಾರಿಸುತ್ತಿದ್ದ ಊರುಗಳು ಗಾಜನೂರುಗಳು. ಮಣ್ಣಿನ ಬಳೆಗಳು ಎಂದೂ ಹೇಳುತ್ತಿದ್ದರು. ಅದಕ್ಕೆ ಹತ್ತಿರವಾಗಿ ಕಾಜಿ, ಕಾಜರ ಬರುವ ಊರುಗಳೂ, ಕಾಜಂಗಡಿ, ಬಳೆಯೂರು ಮೊದಲಾದ ಊರುಗಳೂ ಇವೆ.

ಗಾಜಿನ ಬಳೆ ತಯಾರಿಸಲು ಉತ್ತಮ ಮರಳು ಮಣ್ಣು ಬೇಕು. ಹಾಗಾಗಿ ಈ ಗಾಜನೂರುಗಳು ಎಲ್ಲ ನದಿ, ತೊರೆಗಳ ನೆರೆಯ ಊರುಗಳಾಗಿವೆ.

ಲೋಕದ ಇತಿಹಾಸದಲ್ಲಿ ನೂರಾರು ವಿಷಯಗಳು ಬದಲಾಗಿವೆ, ಬದಲಾಗುತ್ತಲೇ ಇವೆ. ಇನ್ನೂ ಬದಲಾಗುತ್ತವೆ.

Related Posts

Leave a Reply

Your email address will not be published.