ಮಂಗಳೂರು: ಗ್ಯಾಲಕ್ಸಿ ಯುನಿಸೆಕ್ಸ್ ಸಲೋನ್ ಶುಭಾರಂಭ

ಮಂಗಳೂರಿನ ನವಭಾರತ್ ಸರ್ಕಲ್‌ನ ಗುಲಾಬಿ ಶ್ರೀಪಾದ್ ಎನ್‌ಕ್ಲೇವ್‌ನಲ್ಲಿ ಸುಸಜ್ಜಿತವಾದ ಗ್ಯಾಲಕ್ಸಿ ಯುನಿಸೆಕ್ಸ್ ಸಲೂನ್ ಶುಭಾರಂಭಗೊಂಡಿತು.ನೂತನ ಸಲೂನನ್ನು ಗಣ್ಯರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಡಿಪುವಿನ ಸೂರಜ್ ಪಿಯು ಕಾಲೇಜಿನ ಚೇರ್‌ಮ್ಯಾನ್ ಡಾ. ಮಂಜುನಾಥ್ ರೇವಣ್ಕರ್ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಸುಸಜ್ಜಿತ ಮಾದರಿಯಲ್ಲಿ ಗ್ಯಾಲಕ್ಸಿ ಸಲೋನ್ ಕಾರ್ಯಾರಂಭಗೊಂಡಿರುವುದು ಸಂತಸದ ವಿಚಾರ ಎಂದರು.

ನ್ಯಾಯವಾದಿ ಕೆಪಿಎ ಶುಕೂರು ಅವರು ಮಾತನಾಡಿ, ಹಸೀಮ್ ಮತ್ತು ಅವರ ತಂಡದ ಸಹಕಾರದಲ್ಲಿ ಗ್ಯಾಲಕ್ಸಿ ಯುನಿಸೆಕ್ಸ್ಸಲೋನ್ ಉ ದ್ಘಾಟನೆಗೊಂಡಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಮಂಗಳೂರು ಪಾಲಿಕೆ ಸದಸ್ಯರಾದ ಸಂಶುದ್ದೀನ್ ಅವರು ಮಾತನಾಡಿ, ಹಸೀಮ್ ಅವರ ಅವಿರತ ಶ್ರಮದಿಂದ ಇದೀಗ 5ನೇ ಶಾಖೆ ಆರಂಭಗೊಂಡಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿ ನೂತನ ಸಲೋನ್ಗೆ ಶುಭಹಾರೈಸಿದರು.

ಗ್ಯಾಲಕ್ಸಿ ಯುನಿಸೆಕ್ಸ್ ಸಲೋನ್ನ ಮ್ಯಾನೇಜರ್ ಎಲ್ವೀರಾ ಡಿ ಸೋಜಾ ಅವರು ಅತಿಥಿಗಳನ್ನು ಸ್ವಾಗತಿಸಿ, ಗ್ಯಾಲಕ್ಸಿ ಯುನಿಸೆಕ್ಸ್ ಸಲೋನ್ ೫ನೇ ಶಾಖೆ ಆರಂಭಗೊಂಡಿದೆ. ಇಲ್ಲಿ ಹೇರ್ ಕಲರಿಂಗ್, ಹೇರ್ ರಿಬಾಂಡಿಂಗ್, ಪೇಶಿಯಲ್, ಐಬ್ರೋಸ್, ಪೆಡಿಕ್ಯೂರ್, ಮೆನಿಕ್ಯೂರ್ ಇನ್ನಿತರ ಮಾಡಿಕೊಡಲಾಗುತ್ತಿದೆ ಎಂದರು.

ಇದೇ ವೇಳೆ ಗಣ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ಯಾಲಕ್ಸಿ ಯುನಿಸೆಕ್ಸ್ ಸಲೋನ್ ಎಂ.ಡಿ. ಹಸೀಮ್, ಕೆಪಿಸಿಸಿ ಜನರಲ್ ಸೆಕ್ರೆಟ್ರಿ ವಹುಬ್ ಕುದ್ರೋಳಿ, ಮಹಮ್ಮದ್ ಯಾಸೀನ್, ಮುಜೈರ್ ಅಹಮ್ಮದ್, ವೀರೇಶ್ ಮತ್ತಿತರರು ಉಪಸ್ಥಿರಿದ್ದರು.