ಅರಬ್ಬಿ ಸಮುದ್ರದಲ್ಲಿ ನೀರು ಪಾಲಾಗಿದ್ದ ಮೀನುಗಾರನ ರಕ್ಷಣೆ
ಅರಬ್ಬಿ ಸಮುದ್ರದಲ್ಲಿ ಸಮುದ್ರ ಪಾಲಾಗಿದ್ದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವನನ್ನು ಗಂಗೊಳ್ಳಿ ಮೀನುಗಾರರ ರಕ್ಷಿಸಿದ ಘಟನೆ ನಡೆದಿದೆ.
ಸುಮಾರು 25 ವರ್ಷಪ್ರಾಯದ ಮುರುಗನ್ ಎಂಬಾತ ಸದ್ಯ ಪವಾಡ ಸದೃಶ್ಯವಾಗಿ ಬದುಕುಳಿದ ಮೀನುಗಾರ. ಗಂಗೊಳ್ಳಿಯಿಂದ ಮೀನುಗಾರಿಕೆ ಕತೆಗಳಿದ್ದ 30 ಜನರಿದ್ದ ಬೋಟ್ ನವರಿಗೆ ಸುಮಾರು 14 ನಾಟಿಕಲ್ ಮೈಲ್ ದೂರದಲ್ಲಿ ವ್ಯಕ್ತಿಯೋರ್ವ ಸಮುದ್ರದಲ್ಲಿ ಈಜುತ್ತಿರುವುದು ಕಂಡುಬಂದಿದೆ. ಹತ್ತಿರಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸಮುದ್ರದ ಅಲೆಗಳ ನಡುವೆ ವ್ಯಕ್ತಿ ಓರ್ವ ಸಂಕಷ್ಟ ಪಡೆಯುತ್ತಿರುವುದನ್ನು ಕಂಡು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ವ್ಯಕ್ತಿಯನ್ನ ವಿಚಾರಿಸಿದಾಗ ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ನಿಂದ ರಾತ್ರಿ ವೇಳೆ ಬಿದ್ದಿರುವುದಾಗಿ ವ್ಯಕ್ತಿ ತಿಳಿಸಿದ್ದಾನೆ. ಅಲ್ಲದೆ ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿಕೊಂಡೆ ಬದುಕುಳಿದ ಈತನನ್ನು ಗಂಗೊಳ್ಳಿಯ ಮೀನುಗಾರರು ರಕ್ಷಣೆ ಮಾಡಿ ಕರೆತರುವಾಗ ಆತನಿಗಾಗಿ ಹುಡುಕುತ್ತಿದ್ದ ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ನವರಿಗೆ ಆತನನ್ನ ಒಪ್ಪಿಸಿದ್ದಾರೆ. ಸದ್ಯ ಮೀನುಗಾರರು ರಕ್ಷಣೆ ಮಾಡಿದ ಯುವಕನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು ಆತನ ಆತ್ಮಸ್ಥೈರ್ಯದ ಬಗ್ಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.