ಸರ್ವರ್ ಗೆ ಕಾದು ಕುಳಿತ ಗೃಹಲಕ್ಷ್ಮೀಯರು

ರಾಜ್ಯ ಸರಕಾರದ ಮಹಾತ್ವಾಕಾಂಶಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಶಕ್ತಿತುಂಬುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು ರೂ 2000 ಸಾವಿರ ರೂ ನೀಡುವ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ದೊರೆತಿದೆ .

ಪ್ರತೀ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ 1 ನಲ್ಲಿ ಒಂದು ದಿನಕ್ಕೆ 60ಮಂದಿ ಅರ್ಹ ಮಹಿಳೆಯರಿಗೆ ಸಮಯ ಮತ್ತು ದಿನಾಂಕ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ನಿಗದಿ ಪಡಿಸಿದ ಸ್ಥಳ ಮತ್ತು ಸಮಯದಲ್ಲಿ ನೊಂದಾಯಿಸಲು ಅವಕಾಶ ನೀಡಲಾಗಿದೆ .

ಇಂದು 1 ಗಂಟೆ ತನಕ ಹಲವಾರು ಕೇಂದ್ರ ಮತ್ತು ಗ್ರಾಮ ಪಂಚಾಯತಿಗೆ ಬೇಟಿ ನೀಡಿದಾಗ ಎಲ್ಲಾ ಕಡೆ ಸರ್ವರ್ ಸಮಸ್ಯೆ ಕಂಡು ಬಂದು ಮಹಿಳೆಯರು ಕಾದು ಕುಳಿತ ದೃಷ್ಯ ಕಂಡು ಬಂದಿದೆ . ಬೆಳಗಿನಿಂದ ಸಮಯಕ್ಕೆ ಸರಿಯಾಗಿ ಮಹಿಳೆಯರು ಬಂದರೂ ಕೂಡ ಒಂದು ನೊಂದಣೆ ಕೂಡಾ ಆಗದೆ ಕಾದು ಕುಳಿತಿರುವ ಘಟನೆ ಹೆಚ್ಚು ಕಂಡು ಬಂದಿದ್ದು ಸರ್ವರ್ ವೇಗ ಹೆಚ್ಚಿಸ ಬೇಕಾಗಿದೆ ಎಂದು ಒತ್ತಾಯ ಕೇಳಿ ಬಂದಿದೆ .

Related Posts

Leave a Reply

Your email address will not be published.