ಗುಂಡ್ಲುಪೇಟೆ : ಜನಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆ
ಮುಂಬರುವ 2023 ರ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ರ‍್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಆಗಮಿಸಲಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ತಿಳಿಸಿದರು.ನಾಳೆ ಮಧ್ಯಾಹ್ನ 3ಗಂಟೆಗೆ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದು ಸಂಘಟನಾತ್ಮಕ ಸಭೆಯಾಗಿದ್ದು ವಿವಿಧ ಬೂತ್ ಮಟ್ಟದ ಪಧಾಧಿಕಾರಿಗಳು ಮತ್ತು ಮುಖಂಡರಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದರು. ನoತರ ಕಾರ್ಯಕರ್ತರ ಜೊತೆ ಮಾತನಾಡಲಿದ್ದು ಬೂತ್ ಗಳನ್ನು ಎ.ಬಿ.ಸಿ.ಎಂದು ರ‍್ಗೀಕರಣ ಮಾಡಲಾಗಿದ್ದು ಯಾವ ಯಾವ ಬೂತ್ ಗಳಲ್ಲಿ ಹೇಗೆ ಸಂಘಟನೆಯನ್ನು ಬಲಪಡಿಸಿ ಕಾರ್ಯ ನಿರ್ವಹಿಸಿ ಪಕ್ಷ ಸಂಘಟಿಸಬೇಕು ಎನ್ನುವುದನ್ನ ತಿಳಿಸಲಿದ್ದಾರೆ ಎಂದರು.
ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ ಮಾಜಿ ಮುಖ್ಯ ಮಂತ್ರಿ ಸಿ.ಎಂ.ಯಡಿಯೂರಪ್ಪ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲು ನೇತ್ರತ್ವದಲ್ಲಿ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದರಾಜು, ಮಹೇಶ್ ತೆಂಗಿನಕಾಯಿ, ಕೊಳ್ಳೇಗಾಲದ ಶಾಸಕರಾದ ಮಹೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ಪಕ್ಷದ ಸಂಘಟನೆಗೆ ಸಂಬoಧಿಸಿದತೆ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಎಲ್ಲಾ ಬೂತ್ ಮಟ್ಟದ ಅಧ್ಯಕ್ಷರುಗಳಿಗೆ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು ನಂತರ ಮುಖಂಡರು ಮತ್ತು ಕರ‍್ಯಕರ್ತರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಹಾಗೂ ಚುನಾವಣಾ ಸನ್ನಿವೇಶದಲ್ಲಿ ಪಕ್ಷದ ಮತ್ತು ಕಾರ್ಯಕರ್ತರ ಪಾತ್ರದ ಬಗ್ಗೆ ರಾಜ್ಯಧ್ಯಕ್ಷರ ಪೂರ್ವ ಭಾವಿಸಭೆ ಮಾಡಲಿದ್ದಾರೆ ಎಂದು ತಿಳಿಸಿದರು..