ಶೆಡ್ ನಲ್ಲಿನ ಕಟ್ಟಿಗೆ ರಾಶಿಯಲ್ಲಿ ಅವಿತುಕೊಂಡ ಕಾಳಿಂಗ ಸರ್ಪ

ದೀಪಾವಳಿ ಬಲಿಪಾಡ್ಯದ ಸಂಭ್ರಮದ ನಡುವೆಯೇ ಮನೆಯೊಂದರ ಶೆಡ್ ನಲ್ಲಿನ ಕಟ್ಟಿಗೆ ರಾಶಿಯಲ್ಲಿ ಅವಿತುಕೊಂಡು ಭಯಭೀತಿ ಉಂಟುಮಾಡಿದ ಕಾಳಿಂಗ ಸರ್ಪವೊಂದನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಮಲವಂತಿಗೆ ಗ್ರಾಮದಿಂದ ವರದಿಯಾಗಿದೆ.

ಬುಧವಾರ ಬೆಳಗ್ಗೆ ಹಬ್ಬದ ಸಂಭ್ರಮದಲ್ಲಿದ್ದ ಮಲವಂತಿಗೆ ಗ್ರಾಮದ ತಾರಿದಡಿ ಬಾಬು ಗೌಡ ಅವರ ಮನೆಯ ಕಟ್ಟಿಗೆ ಸಂಗ್ರಹ ಮಾಡಿದ ಶೆಡ್ ನಲ್ಲಿ ಭಯಂಕರ ಉದ್ದದ ಕಾಳಿಂಗ ಸರ್ಪವೊಂದನ್ನು ಮನೆಮಂದಿ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಲಾಯಿಲ ಗ್ರಾಮದ ಉರಗ ಪ್ರೇಮಿ ಸ್ನೇಕ್ ಅಶೋಕ್ ಕುಮಾರ್ ಅವರಿಗೆ ತಿಳಿಸಲಾಯಿತು. ತಕ್ಷಣ ತೆರಳಿದ ಸ್ನೇಕ್ ಅಶೋಕ್ ಕುಮಾರ್ ಅವರು ಬಾರಿ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಣೆ ಮಾಡಿದ್ದಾರೆ. ಆ ಮೂಲಕ ಹಬ್ಬದ ಸಂದರ್ಭದಲ್ಲಿ ಭಯಭೀತಿ ಉಂಟುಮಾಡಿದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.
