ಇಂಡಿಯಾದ ಹೆಸರು ಕೆಡಿಸುವ ಫೇಕ್ ನ್ಯೂಸ್
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟದವರು ಗುಂಪು ಫೋಟೋ ತೆಗೆಸಿಕೊಳ್ಳುವಾಗ ಮುಸ್ಲಿಮರ ಆಜಾನ್ ಹಾಕಿದ್ದರು, ಎಚ್ಚರ ಎಂಬ ಪೋಸ್ಟ್ ಒಂದು ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅದು ಸುಳ್ಳು ಸುದ್ದಿ ಎಂದು ಕ್ವಿಂಟ್ ಫ್ಯಾಕ್ಟ್ ಚೆಕ್ ಹೇಳಿದೆ.
ಇಲ್ಲಿ ಈ ಪೋಸ್ಟ್‌ಗೆ ಬಳಸಿದ ವೀಡಿಯೋ ಆಗಸ್ಟ್ 31, ಸೆಪ್ಟೆಂಬರ್ 1ರಂದು ಮುಂಬಯಿಯಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಸಭೆಯದ್ದಾಗಿದೆ. ವೇದಿಕೆಯಲ್ಲಿ ಆ ಬ್ಯಾನರ್ ಇದೆ. ಈ ಸುದ್ದಿ ಆಗ ಎಲ್ಲ ಪತ್ರಿಕೆ, ಟೀವಿಗಳಲ್ಲಿ ಬಂದಿತ್ತು. ಬೇರೆಯವರೂ ತೆಗೆದು ಹರಿಯಬಿಟ್ಟಿದ್ದರು. ಆದರೆ ಅವು ಆಜಾನ್ ಹೊಂದಿಲ್ಲ. ಈಗ ಆ ವೀಡಿಯೋಗೆ ಆಜಾನ್ ಕಲಬೆರಕೆ ಮಾಡಿ ಫೇಕ್ ನ್ಯೂಸ್ ಬಲೆಗೇರಿಸಲಾಗಿದೆ.