ಆಂಧ್ರಪ್ರದೇಶ : ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿ ಉಡಾವಣೆ

ಎಕ್ಸ್ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್ ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಿದೆ. ಇದು ಮೊದಲ ಸಂಪೂರ್ಣ ವೈಜಾನಿಕ ಉಪಗ್ರಹವಾಗಿದೆ.
