ಗುಜರಾತ್ ಪೋಲೀಸರಿಗೆ ಜೈಲೇ ಗತಿ
ಜನರನ್ನು ಕಂಬಕ್ಕೆ ಕಟ್ಟಿ ಹೊಡೆಯಲು ನಿಮಗೆ ಅಧಿಕಾರ ಇದೆಯೇ? ಹೋಗಿ ಜೈಲು ಸಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗವಾಯಿಯವರು ಕೋಪದಿಂದ ಹೇಳಿದರು. ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷಿತ ಪೋಲೀಸರಿಗೆ ಛೀಮಾರಿ ಹಾಕಿತು.
ಇನ್ಸ್‍ಪೆಕ್ಟರ್ ಎ. ವಿ. ಪರ್ಮಾರ್, ಸಬ್ ಇನ್ಸ್‍ಪೆಕ್ಟರ್ ಡಿ. ಬಿ. ಕುಮಾವತ್ ಮತ್ತು ಇಬ್ಬರು ಕಾನ್‍ಸ್ಟೇಬಲ್‍ಗಳು ಶಿಕ್ಷಿತ ಪೋಲೀಸರು. ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ಸಂದೀಪ್ ಮೆಹ್ತಾ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಸದರಿ ಮೇಲ್ಮನವಿ ಸಲ್ಲಿಸಿದ್ದ ಪೋಲೀಸರಿಗೆ ಛೀಮಾರಿ ಹಾಕಿತು.
ಈ ಪೋಲೀಸರು ಪ್ರಕರಣವೊಂದರಲ್ಲಿ ಮುಸ್ಲಿಂ ಆರೋಪಿಗಳನ್ನು ಬಂಧಿಸಿ ಕಂಬಕ್ಕೆ ಕಟ್ಟಿ ಹೊಡೆದಿತ್ತು. ಸದರಿ ಪ್ರಕರಣದಲ್ಲಿ 2023ರ ಅಕ್ಟೋಬರ್ 19ರಂದು ಗುಜರಾತ್ ಹೈಕೋರ್ಟ್ ತಪ್ಪಿತಸ್ಥ ಪೋಲೀಸರಿಗೆ 14 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಮನವಿ ಮೇರೆಗೆ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿ ಮೇಲ್ಮನವಿಗೆ ಅವಕಾಶ ನೀಡಿತ್ತು. ಈಗ ಸುಪ್ರೀಂ ಕೋರ್ಟ್ ಪೋಲೀಸರಿಗೆ ಛೀಮಾರಿ ಹಾಕಿ ನಡೆಯಿರಿ ಕೋರ್ಟಿಗೆ ಎಂದು ಹೇಳಿದೆ. ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿ, ಅದರ ವೀಡಿಯೋ ಮಾಡಿ ಈ ಪೋಲೀಸರು ಕೇಕೆ ಹಾಕಿದ್ದು ತೀವ್ರ ಟೀಕೆಗೆ ಒಳಗಾಗಿತ್ತು.