ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಗೆ ಭಾಜನವಾದ `ಜೀಟಿಗೆ’
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ತುಳುನಾಡಿನ ದೈವಾರಾಧನೆ ಮತ್ತು ಅದರ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ `ಜೀಟಿಗೆ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ.
ಮಲಯಾಳಂ ನಿರ್ದೇಶಕ ಜಯರಾಜ್ ಜತೆ ಪಳಗಿದ ಸಂತೋಷ್ ಮಾಡ ನಿರ್ದೇಶನದ ಚೊಚ್ಚಲ ಚಿತ್ರವನ್ನು ನಿರ್ಮಾಣ ಮಾಡಿರುವುದು ಅರುಣ್ ರೈ ತೋಡಾರ್. ಪರಂಪರಾಗತವಾಗಿ ದೈವದ ನರ್ತನ ಸೇವೆ ಮಾಡುತ್ತ ಬಂದಿರುವ ತನಿಯಪ್ಪ, ತನ್ನ ಮಗನಿಗೆ ಈ ಚಾಕರಿ ಬೇಡ ಎಂದು ವಿದ್ಯಾಭ್ಯಾಸ ಕೊಡಿಸಿ ವಿದೇಶಕ್ಕೆ ಕಳುಹಿಸುವುದು, ಗುತ್ತಿನ ಮನೆಯಲ್ಲಿ ದೈವಕ್ಕೆ ಕೋಲ ಕಟ್ಟುವುದಿಲ್ಲ ಎನ್ನುವುದು, ಮಗನ ಮದುವೆ ಮುರಿದು ಬೀಳುವುದು, ಬಾಲ್ಯದ ನೆನಪುಗಳ ಜತೆ ಒಂಟಿ ವೇದನೆ, ಜತೆಗೆ ಕರೊನಾ ಮಹಾಮಾರಿ ಜನರ ಜೀವನದ ಮೇಲೆ ಬೀರುವ ಪರಿಣಾಮ, ತಳಮಳವನ್ನು ಸರಳ ಮತ್ತು ಮನಮುಟ್ಟುವ ಹಾಗೆ ಸಿನಿಮಾ ನಿರ್ಮಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ಕಲಾವಿದರಾದ ಕುಸೇಲ್ದರಸೆ ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಜೆ.ಪಿ. ತೂಮಿನಾಡ್, ಚೇತನ್ ರೈ ಮಾಣಿ, ಅರುಣ್ ರೈ, ಶಶಿರಾಜ್ ಕಾವೂರು, ಸತ್ಯಜೀವನ್ ಸೋಮೇಶ್ವರ ಮೊದಲಾದವರು ನಟಿಸಿದ್ದಾರೆ. ಶಶಿರಾಜ್ ಕಾವೂರು ಚಿತ್ರಕತೆ- ಸಂಭಾಷಣೆ ಬರೆದಿದ್ದು, ಉನ್ನಿ ಮಾಡವುರ್ ಕ್ಯಾಮರಾದಲ್ಲಿ ತುಳುನಾಡನ್ನು ಸುಂದರವಾಗಿ ಚಿತ್ರಿಸಿದ್ದಾರೆ. ನಾಡೋಜ ಅಮೃತ ಸೋಮೇಶ್ವರ ಅವರ ಸಾಹಿತ್ಯ, ಸ್ಯಾಕ್ಸೋಫೆÇೀನ್ ಜಯರಾಮ್ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ.