ಕಡಬ : ಬೃಹತ್ ಗಾತ್ರದ ಕಾಡುಕೋಣದ ಮೃತದೇಹ ಪತ್ತೆ
ಬೃಹತ್ ಗಾತ್ರದ ಕಾಡುಕೋಣದ ಮೃತದೇಹವು ಕಡಬ ಸಮೀಪದ ಕೋಡಿಂಬಾಳದ ಪುಳಿಕುಕ್ಕು ಎಂಬಲ್ಲಿ ಶನಿವಾರದಂದು ಕಂಡುಬಂದಿದೆ. ಪುಳಿಕುಕ್ಕು ಸೇತುವೆಯ ಬಳಿ ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಾಡುಕೋಣದ ಮೃತದೇಹವು ಕಂಡುಬಂದಿದ್ದು, ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಇಲಾಖೆಯವರು ಕಾಡುಕೋಣದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.