ಕಡಬದಲ್ಲಿ ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ಮನವಿ

ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರು ಬುಧವಾರ ಸುಬ್ರಹ್ಮಣ್ಯಕ್ಕೆ ಹೋಗಿ ಮಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಸಂಜೆ ಕಡಬದಲ್ಲಿ ಸಾರ್ವಜನಿರಿಂದ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿಯವರು ಕಡಬಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದರೂ ಸುಬ್ರಹ್ಮಣ್ಯದಿಂದ ಹೊರಡುವಾಗ ತಡವಾಗಿರುವುದರಿಂದ ಕಡಬದ ಕಾರ್ಯಕ್ರಮ ರದ್ದು ಗೊಳಿಸಿದ್ದರು. ಜಿಲ್ಲಾಧಿಕಾರಿಯವರ ಕಾರು ಕಡಬಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಕಾರು ತಡೆದು ನಿಲ್ಲಿಸಿ ಮನವಿ ಸಲ್ಲಿಸಿದರು. ಸಾರ್ವಜನಿಕರ ಪರವಾಗಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮನವಿ ಸಲ್ಲಿಸಿ ಕಡಬ ಸರಕಾರಿ ಕಛೇರಿಗಳ ಸಮಸ್ಯೆಯ ಇತರ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಯವರ ಗಮನ ಸೆಳೆದರು.

ಕಡಬದಲ್ಲಿ ಅಲ್ಪ ಸಂಖ್ಯಾತರ ದಪನ ಭೂಮಿ 1921 ರಲ್ಲಿ ಮಂಜೂರಾಗಿದ್ದರೂ ಈ ವರೆಗೆ ಪಹಣಿಯಾಗಲಿಲ್ಲ. ತಕ್ಷಣ ಪಹಣಿ ಮಾಡುವರೇ ಆದೇಶ ನೀಡಬೇಕು, ಕಡಬ ತಾಲೂಕು ಘೋಷಣೆಯಾಗಿ ಐದು ವರ್ಷವಾದರೂ ಎಲ್ಲಾ ಸರಕಾರಿ ಇಲಾಖೆಗಳು ಇಲ್ಲಿ ಅನುಷ್ಠಾನವಾಗಿಲ್ಲ. ಮುಖ್ಯವಾಗಿ ತೋಟಗಾರಿಕಾ ಇಲಾಖೆ, ಜೇನು ಕೃಷಿ ಇಲಾಖೆ, ಸೇರಿದಂತೆ ಬಹುತೇಕ ಇಲಾಖೆಗಳು ಇನ್ನೂ ಕಾರ್ಯಾಚರಿಸಲು ಪ್ರಾರಂಭಿಸಿಲ್ಲ, ಉಪಖಜಾನೆ ಆರಂಭವಾದರೂ ಅಲ್ಲಿ ಸಿಬ್ಬಂದಿಗಳೇ ಇಲ್ಲ. ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಯಂತ್ರ ಹಾಗೂ ಎಕ್ಸರೇ ಯಂತ್ರ ಇದ್ದರೂ ಅದಕ್ಕೆ ಸಿಬ್ಬಂದಿ ಇಲ್ಲ. ಕಡಬದಲ್ಲಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ವಸತಿ ನಿಲಯದ ನೂತನ ಕಟ್ಟದ ಸುಮಾರು2.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದರೂ ಅದನ್ನು ಉದ್ಘಾಟಿಸಿಲ್ಲ,ಇಂತಹ ಹತ್ತು ಹಲವಾರು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇತ್ತೀಚೆಗೆ ಕಡಬ ತಾಲೂಕಿನ ಕೆಲವು ಗ್ರಾಮಗಳಲ್ಲಿ ಆನೆ ದಾಳಿಯಿಂದಾಗಿ ಈ ಭಾಗದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಆನೆ ಹಾವಳಿ ಪ್ರದೇಶದ ರೈತರಿಗೆ ಕೋವಿ ಪರವಾಣಿಗೆ ನೀಡಬೇಕು ಎಂದು ಮೀರಾ ಸಾಹೇಬ್ ಅಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಯವರು ನೂತನ ತಾಲೂಕು ಅನುಷ್ಟಾನ ಆಗುವಾಗ ಹಂತಹoತವಾಗಿ ಸರಕಾರಿ ಕಛೇರಿಗಳು ಪ್ರಾರಂಭವಾಗುತ್ತದೆ ಎಲ್ಲಾ ಸರಕಾರಿ ಕಛೇರಿಗಳನ್ನು ಆರಂಭಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಉಪ ತಹಸೀಲ್ದಾರ್ ಮನೋಹರ ಕೆ.ಟಿ, ಗೊಪಾಲ್ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.