ಜೈನ ಮುನಿಯ ಹತ್ಯೆ ಪ್ರಕರಣ : ಕಡಬದಲ್ಲಿ ಜೈನ ಸಮುದಾಯದವರಿಂದ ಪ್ರತಿಭಟನೆ

ಹಿರೇಕೋಡಿ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮುನಿಶ್ರೀ ಮಹಾರಾಜರ ಹತ್ಯೆಯನ್ನು ಖಂಡಿಸಿ, ಘಟನೆಯ ಸಮಗ್ರ ತನಿಖೆಗಾಗಿ ಮತ್ತು ಮುಂದಿನ ದಿನಗಳಲ್ಲಿ ಜೈನ ಮುನಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಆಗ್ರಹಿಸಿ ಕಡಬ ತಾಲೂಕಿನ ಜೈನ ಸಮಾಜ ಬಾಂಧವರು ಕಡಬ ತಾಲೂಕು ಆಡಳಿತ ಸೌಧದ ಮುಂದೆ ಮೌನ ಪ್ರತಿಭಟನೆ ನಡೆಸಿದರು.

ಕಡಬದ ಸಿ.ಎ.ಬ್ಯಾಂಕ್ ವಠಾರದಿಂದ ಕಡಬದ ಮುಖ್ಯರಸ್ತೆಯಲ್ಲಿ ಮೌನ ಮೆರವಣಿಗೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಕಡಬ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡೆಪ್ಪುಣಿಗುತ್ತು ಕೆ.ಮಹಾವೀರ ಜೈನ್ ಅಹಿಂಸೆ, ಬದುಕು ಮತ್ತು ಬದಕಲು ಬಿಡು ಎಂಬ ತತ್ವವನ್ನು ಸದಾ ತಮ್ಮ ಬದುಕಿನಲ್ಲಿ ಪಾಲಿಸುವ ಅಲ್ಪಸಂಖ್ಯಾತರಾದ ಜೈನ ಸಮುದಾಯದವರು ಸದಾ ಸಂಯಮದಿಂದ ಎಲ್ಲರ ಜೊತೆ ಶಾಂತಿ ಸಮಾಧಾನದಿಂದ ಬದುಕುವವರು. ದಿಗಂಬರ ಮುನಿಗಳಂತೂ ಸರ್ವಸ್ವವನ್ನೂ ತ್ಯಾಗ ಮಾಡಿ ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಠಿಣ ವೃತ ನಿಯಮಗಳನ್ನು ಪಾಲಿಸುವವರು. ಅಂತಹ ಮುನಿವರ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.

ಶೆಟ್ಟಿಮೂಲೆ ಶ್ರೇಯಾಂಶ ಶೆಟ್ಟಿ ಪಂಜ, ಧನ್ಯಕುಮಾರ್ ರೈ ಉಪ್ಪಿನಂಗಡಿ, ಡಾ|ಜಯಕೀರ್ತಿ ಜೈನ್ ಧರ್ಮಸ್ಥಳ, ಇಚ್ಲಂಪಾಡಿ ಬಸದಿಯ ಆಡಳಿತ ಸಮಿತಿ ಅಧ್ಯಕ್ಷ ಶುಭಕರ ಹೆಗ್ಗಡೆ, ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಜಿನೇಂದ್ರ ಇಂದ್ರ, ಧರಣೇಂದ್ರ ಇಂದ್ರ, ಅಕ್ಷಯಕುಮಾರ್, ಚಂದ್ರಶೇಖರ ಶೆಟ್ಟಿ ಕೂರಟ, ಮಂಜುಳಾ, ಸುರಭಿ ಜಯಕುಮಾರ್, ರಾಜಕುಮಾರ್ ಶೆಟ್ಟಿ, ದೀಪಿಕಾ ರವೀಂದ್ರ ಆರಿಗ, ನಾಗಕನ್ನಿಕಾ, ರವಿರಾಜ ಶೆಟ್ಟಿ, ನೆಲ್ಯಾಡಿ ಬಸದಿಯ ಸುಮಂತ್, ಪಾರ್ಶ್ವನಾಥ ಶೆಟ್ಟಿ, ಮರ್ದಾಳ ಬಸದಿಯ ಅನೂಪ್‍ಕುಮಾರ್, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Related Posts

Leave a Reply

Your email address will not be published.