ದೇರಳಕಟ್ಟೆ: ಕಣಚೂರು ಆಸ್ಪತ್ರೆಯಲ್ಲಿ ಮಂಗಳೂರು ವಿವಿಯ ಸಿಎಎಸ್ಕೆ ಎಮ್ಎಸ್ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ಮನೋವಿಜ್ಞಾನ ಶಿಬಿರ

ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮನೋವೈದ್ಯಶಾಸ್ತ್ರ ವಿಭಾಗದ ತಜ್ಞರ ಸಹಕಾರದೊಂದಿಗೆ ದಕ್ಷಿಣ ಕೆನರಾದ ಕ್ಯಾಥೋಲಿಕ್ ಸಂಘದ ಸಹಯೋಗದೊಂದಿಗೆ ಪ್ರಥಮ ವರ್ಷದ ಕೈಗಾರಿಕಾ ಮನೋವಿಜ್ಞಾನ ವಿದ್ಯಾರ್ಥಿಗಳಿಗಾಗಿ ಮನೋವಿಜ್ಞಾನ ಶಿಬಿರವನ್ನು ಆಯೋಜಿಸಿದ್ದರು.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಮತ್ತು ಸಿಎಎಸ್ಕೆ ಉಪಾಧ್ಯಕ್ಷರಾದ ಡಾ. ರೋಹನ್ ಎಸ್. ಮೋನಿಸ್ ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾದ ಡಾ. ಪಾಲ್ ಜಿ. ಅಕ್ವಿನಾಸ್ ಅವರು ಮಾತನಾಡಿ, ಕಣಚೂರು ಆಸ್ಪತ್ರೆಯು ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದಕ್ಕಾಗಿ ಧನ್ಯವಾದ ಸಮರ್ಪಿಸಿದರು,
ಮೊದಲ ಅಧಿವೇಶನದಲ್ಲಿ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಡಾ. ಐಶ್ವರ್ಯ ವಿ. ರಾವ್ ನೇತೃತ್ವ ನೀಡಿದ್ದರು.
ಕಣಚೂರು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಡಾ. ರೋಜಿನಾ ಅನ್ನಾ ರೇ ಅವರು ಸಮಯ ನಿರ್ವಹಣೆಯ ಕುರಿತು ಸಂವಾದಾತ್ಮಕ ಅಧಿವೇಶನ ನಡೆಸಿದರು.
ಪ್ರಥಮ ವರ್ಷದ ಎಂಎಸ್ಡಬ್ಲ್ಯ ವಿದ್ಯಾರ್ಥಿನಿ ಶ್ರೇಯಸ್ ಶೆಣೈ ಅವರು ಧನ್ಯವಾದ ಸಮರ್ಪಿಸಿದರು.