ಕಾಸರಗೋಡು: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ   ಫೆಬ್ರವರಿ 16 ರಿಂದ 29 ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ನಡೆಯಿತು.

ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು, ಕ್ಷೇತ್ರ ಅಭಿವೃದ್ಧಿ ಕಾರ್ಯದಿಂದ ಕೃಷ್ಣಾರ್ಪಣಾ ಮನಸ್ಸಿನಿಂದ ನಾವೆಲ್ಲರೂ ಶ್ರಮವಹಿಸಿದರೆ ನಾಡಿನ ಸುಭಿಕ್ಷೆಗೊಂದು ದಾರಿಯಾಗುತ್ತದೆ. ಆಮಂತ್ರಣಾ ಪತ್ರಿಕೆಯ ನೋಟದಿಂದಲೇ ಸಮಗ್ರ ಕಾರ್ಯದ ಮಹತ್ವ ಮಾದರಿಯಾಗುತ್ತದೆ ಎಂದು ಅವರು ಅನುಗ್ರಹಿಸಿ ಆಶೀರ್ವಚನವಿತ್ತರು.

ಈ ಸಂದರ್ಭದಲ್ಲಿ ಬೆಳ್ಳಿಯ ಕಲಶ ಹಾಗೂ ತಾಮ್ರದ ಕಲಶದ ಕೂಪನ್ ನ್ನು ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ್ ತಂತ್ರಿಗಳು ತಮ್ಮ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಿ, ಕುಂಬಳೆಯ ಹಿರಿಯ ವ್ಯಾಪಾರಿ ನರಸಿಂಹ ನಾಯಕ್ ಗುರುವಾಯನಕೆರೆ ಹಾಗೂ ಜೀವವಿಮಾ ನಿಗಮದ ನಿವೃತ್ತ ಆಫೀಸರ್ ರಾಮಕೃಷ್ಣ ಶೇಡಿಕಾವ್ ರಿಗೆ ಮೊದಲ ಕೂಪನ್ ನೀಡಿ ಚಾಲನೆ ನೀಡಿದರು.

ಮಾಣಿಲ ಶ್ರೀಧಾಮದ ಶ್ರೀಶ್ರೀಮೋಹನದಾಸ ಸ್ವಾಮೀಜಿ ಮಾತನಾಡುತ್ತಾ ಪ್ರತಿಯೋರ್ವರು ಈ ಬ್ರಹ್ಮಕಲಶೋತ್ಸವದಂತಹ  ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಕುಂಬಳೆ ಸೀಮೆಗೆ ಮಾತ್ರವಲ್ಲದೆ ಜೀವಮಾನದ ಭಗವತ್ ಪ್ರೀತಿಗೆ  ಕಾರಣೀಭೂತರಾದಂತಾಗುತ್ತದೆ ಎಂದು ಹರಿನಾಮ ಸಂಕೀರ್ತನೆಗೈದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ರಘುನಾಥ ಪೈ ಕುಂಬಳೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಯಿಪ್ಪಾಡಿ ಅರಮನೆಯ ಪ್ರತಿನಿಧಿ ಶ್ರೀ ಚಂದ್ರ ಮೋಹನ್ ರಾಜ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಮೊದಲಾದವರು ಶುಭಹಾರೈಸಿದರು

ಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಮಂಜುನಾಥ ಆಳ್ವ ಮಡ್ವ, ಸುಧಾಕರ ಕಾಮತ್,ಕೆ.ಸಿ.ಮೋಹನ, ಲಕ್ಷಣ ನೋಂಡಾ, ರಾಮಚಂದ್ರ ಗಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಜಯಕುಮಾರ್ ಕೆ. ಎಂ, ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ್ ತಂತ್ರಿ ದಯಾನಂದ ದಾವ್, ವಿಕ್ರಂ ಪೈ, ಮಾತೃಮಂಡಳಿ ಸಮಿತಿ ಹಾಗೂ ವಿವಿಧ ಉಪ ಸಮಿತಿಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

 ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಹಾಗೂ ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕ ಶಂನಾಡಿಗ ಕುಂಬಳೆ ಸ್ವಾಗತಿಸಿ, ಮಹಿಳಾ ಸಮಿತಿ ಮತ್ತು ಸ್ಮರಣ ಸಂಚಿಕೆ ಸಮಿತಿ ಸಹ ಸಂಚಾಲಕಿ ವಿಜಯಲಕ್ಷ್ಮೀ ಶಂನಾಡಿಗ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಡಿ.ದಾಮೋದರ ವಂದಿಸಿದರು.

Related Posts

Leave a Reply

Your email address will not be published.