ಬೆಳುಪು : ಗ್ರಾಮೀಣ ಕಾಂಗ್ರೆಸ್ ಕಛೇರಿ ಉದ್ಘಾಟನೆ

ಬೆಳಪುವಿನಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ಗ್ರಾಮೀಣ ಕಾಂಗ್ರೆಸ್ ಕಛೇರಿಯ ಉದ್ಘಾಟನೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಚುನಾವಣಾ ಪೂರ್ವ ಬಾವಿಯಾಗಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪಲಿಮಾರು, ಮುದರಂಗಡಿ, ಬೆಳಪು, ಕುತ್ಯಾರು, ಎಲ್ಲೂರು, ಶಿರ್ವ ಹಾಗೂ ಮೂಡಬೆಳ್ಳೆಗಳಲ್ಲಿ ಕಛೇರಿಯನ್ನು ಉದ್ಘಾಟಿಸಲಾಗಿದ್ದು, ಮುಂದಿನ 18ನೇ ತಾರೀಖು ಹತ್ತು ಗಂಟೆಗೆ ಕಾಪು ಜನಾರ್ದನ ದೇವಸ್ಥಾನದ ಬಳಿ ಸೇರಿ ಅಲ್ಲಿಂದ ಜಾಥ ಮೂಲಕ ಕಾಪು ಕಾಂಗ್ರೆಸ್ ಕಛೇರಿಯ ಮುಂಭಾಗ ಸಭೆ ನಡೆಸಿ ಅಲ್ಲಿಂದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮಧ್ಯಾಹ್ನ ಹನ್ನೆರಡರ ಬಳಿಕ ನಾಮಪತ್ರ ಸಲ್ಲಿಸಲಾಗುವುದೆಂದರು.ಈ ಸಂದರ್ಭ ಬೆಳಪು ದೇವಿಪ್ರಸಾದ್ ಶೆಟ್ಟಿ, ಗುಲಾಂ ಮೊಹಮ್ಮದ್, ದಿವಾಕರ್ ಶೆಟ್ಟಿ ಕಾಪು, ಜ್ಹಾಹೀರ್ ಬೆಳಪು, ಶೇಖರ್ ಹೆಜಮಾಡಿ, ಸುನೀಲ್ ಬಂಗೇರ ಮುಂತಾದವರಿದ್ದರು.
