ಕಾರಂಜಿ ಇನ್ಪೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ : ವಾರ್ಷಿಕ ಸಂಭ್ರಮ

ಮಂಗಳೂರಿನ ಕಂಕನಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಂಜಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮಂಗಳೂರು ಹಾಗೂ ದೇಶಾದ್ಯಂತ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಉದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದು, ಇದೀಗ 15ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ ಎಂದು ಗ್ಲೋಬಲ್ ಡೆಲಿವರಿ ಮ್ಯಾನೇಜರ್ ವಿಕ್ರಮ್ ಕೆಮ್ಮಾಯಿ ತಿಳಿಸಿದ್ದಾರೆ.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರಂಜಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ತನ್ನ ವಿಶಿಷ್ಠ ಮತ್ತು ಕಲಾತ್ಮಕ ಸೇವೆಗಳಿಂದ ಜಗತ್ತಿನ ಡಿಜಿಟಲ್ ಟ್ರೈನಿಂಗ್ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಥೆಯು ಆಧುನಿಕ ತಂತ್ರಜ್ಞಾನಗಳಾದ ವರ್ಚುವಲ್ ರಿಯಾಲಿಟಿ ಆಗ್ಮೆಂಟೆಡ್ ರಿಯಾಲಿಟಿ, ಮೆಟಾವರ್ಸ್, 3ಡಿ ಎನಿಮೇಶನ್, 2ಡಿ ಎನಿಮೇಶನ್ ಕಾರ್ಪೋರೇಟ್ ಫಿಲ್ಮ್ ಮುಂತಾದ ಸೇವೆಗಳನ್ನು ಜಗತ್ತಿನ ಅನೇಕ ದೇಶಗಳ ಕಂಪನಿಗಳಿಗೆ ಒದಗಿಸುತ್ತಿದೆ. ಸೆ.19ರಂದು ನಗರದ ಪುರಭವನದಲ್ಲಿ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್‍ನ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಮ್.ಎಸ್. ಡಾ. ಮುರಳಿ ಮೋಹನ್ ಚೂಂತಾರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಕೃಷ್ಣ ಪ್ರಕಾಶ್ ದೊಡ್ಡಮಣಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಕಾರಂಜಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್‍ನ ನಿರ್ದೇಶಕರಾದ ಪ್ರವೀಣ್ ಕುಮಾರ್ ಕಲ್ಬಾವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಟಿಯಲ್ಲಿ ವಿಡಿಯೋ ಡಿಪಾರ್ಟ್‍ಮೆಂಟ್‍ನ ಮುಖ್ಯಸ್ಥರಾದ ದೀಪಕ್ ರಾಜ್, 2ಡಿ ಅನಿಮೇಶನ್ ಡಿಪಾರ್ಟ್‍ಮೆಂಟ್‍ನ ಮುಖ್ಯಸ್ಥರಾದ ಅಕ್ಷಯ್, ಗ್ರಾಫಿಕ್ಸ್ ಡಿಪಾರ್ಟ್‍ಮೆಂಟ್‍ನ ಮುಖ್ಯಸ್ಥರಾದ ನವೀನ್ ಕುಮಾರ್ ಉಪಸ್ಥಿತರಿದ್ದರು.