ಕಾರ್ಕಳದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಲೋಕಾರ್ಪಣೆ

ಕಾರ್ಕಳ: ರಾಷ್ಟ್ರೀಯ ನಾಯಕರೆನಿಸಿಕೊಂಡವರು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದ್ದರೆ ಅದು ಮಾಜಿ ಉಪ ಪ್ರಧಾನಿ ಎಲ್ ಕೆ. ಅಡ್ವಾಣಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇವರಿಬ್ಬರು ಮಾತ್ರ. ಅಜಾತಶತ್ರು ಆಗಿ ದಕ್ಷ ಆಡಳಿತ ನೀಡಿ ಶುಶಾಸನ ಆಡಳಿತ ನೀಡಿದ ಅಟಲ್ ಹೆಸರಿನಲ್ಲಿ ಪಾರ್ಕ್ ಸ್ಥಾಪಿಸುವ ಮೂಲಕ ಜ್ಞಾನಿಯ ಸ್ಮರಣೆ ಜೊತೆಗೆ ಅವರ ಆಡಳಿತ ಅನುಸರಿಸಿ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಚಿವ ವಿ ಸುನಿಲ್ ಕುಮಾರ್ ಹೇಳಿದರು.


ತಾಲೂಕು ಕಚೇರಿ ಬಳಿ ಪ್ರದೇಶ ಅಭಿವೃದ್ಧಿ ಇನ್ನಿತರ ಅನುದಾನದ ಜೊತೆ ಎಮ್‌ಆರ್‌ಪಿಎಲ್, ಸಿ ಎಸ್‌ಆರ್ ಫಂಡ್ ನಿಧಿಯ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕಾರ್ಕಳ ಕ್ಷೇತ್ರವನ್ನು ಮುಂದಿನ ೧೦, ೨೦ ವರ್ಷಗಳ ದೂರ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ ಒಂದು ಊರಿನ ಅಭಿವೃದ್ಧಿಯೆಂದರೆ ರಸ್ತೆ ಸೇತುವೆ ನಿರ್ಮಾಣಕ್ಕೆ ಸೀಮಿತವಾಗಬಾರದು ಎಲ್ಲಾ ಆಯಾಮಗಳಲ್ಲಿ ಅದು ಬೆಳವಣಿಗೆ ಕಾಣಬೇಕೆಂದರು. ಗೇರುಅಭಿವೃದ್ಧಿ ನಿಗಮ ಅಧ್ಯಕ್ಷ ಮನಿರಾಜ ಶೆಟ್ಟಿ ಎಂಆರ್‌ಪಿಎಲ್‌ಎಂ ಡಿ ವೆಂಕಟೇಶ್ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೇ ಶಶಿಮಣಿ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಉಪಸ್ಥಿತರಿದ್ದರು. ತಾಲೂಕು ಪಂಚಾಯತಿ ಈ ಓ ಗುರು ದತ್ತ ಸ್ವಾಗತಿಸಿದರು ಕಾರ್ಕಳ ತಾಲೂಕು ದಂಡಾಧಿಕಾರಿ ಪ್ರದೀಪ್ ಕುರುಡೇಕರ್ ವಂದಿಸಿದರು.